Kannada News: ಕನ್ನಡಿಗರಿಗೆ ಬಕೆಟ್ ಇಡಿಯಲು ಮುಂದಾದ ಶಾರುಖ್ ಖಾನ್: ಯಶ್ ಕುರಿತು ಹೇಳಿದ್ದೇನು ಗೊತ್ತೇ? ಈ ಸಮಯದಲ್ಲಿ ಇವೆಲ್ಲ ಬೇಕಿತ್ತಾ??
Kannada News: ಬಾಲಿವುಡ್ ನಟ ಶಾರುಖ್ ಖಾನ್ ಇತ್ತೀಚಿಗಷ್ಟೇ ಯಶ್ ಕುರಿತಾಗಿ ಮಾತನಾಡಿದ್ದಾರೆ. ತಮ್ಮ ಟ್ವೀಟ್ನಲ್ಲಿ ಯಶ್ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದಾರೆ. ಇದೀಗ ಅವರ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಇತ್ತೀಚಿಗೆ ನಟ ಶಾರುಖ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿಮಾನಿಗಳಿಗಾಗಿ ಒಂದು ಶೆಶನ್ ಶುರು ಮಾಡಿದರು. ಅಭಿಮಾನಿಗಳು ಏನನ್ನಾದರೂ ಕೇಳಿ ನಾನು ಅದಕ್ಕೆ ಉತ್ತರಿಸುತ್ತೇನೆ ಎಂದು ‘ಯಾಸ್ಕ್ ಫಾರ್ ಎಸ್ ಆರ್ ಕೆ’ ಎಂದು ಅವರು ಸೆಷನ್ ಶುರು ಮಾಡಿದರು. ಇದರಂತೆ ಅಭಿಮಾನಿಗಳು ಶಾರುಖ್ ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ವೃತ್ತಿ ಜೀವನ, ಅವರ ಇಷ್ಟ, ನೆನಪುಗಳು, ನಟನ ಅನುಭವಗಳು, ಕುಟುಂಬ, ಸಹೋದ್ಯೋಗಿಗಳು ಹೀಗೆ ಹಲವಾರು ಪ್ರಶ್ನೆಗಳು ಎದುರಾಗಿದೆ. ಶಾರುಖ್ ಎಲ್ಲದಕ್ಕೂ ಉತ್ತರಿಸಿದ್ದಾರೆ. ಈ ಬಗ್ಗೆ ಅಭಿಮಾನಿ ಒಬ್ಬರು ಯಶ್ ಬಗ್ಗೆ ಕೇಳಿದ್ದಕ್ಕೆ ಶಾರುಖ್ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವೀಟ್ ಮುಖಾಂತರ ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಶಾರುಖ್ ಉತ್ತರಿಸಿದ್ದಾರೆ. ಈ ವೇಳೆ ಅಭಿಮಾನಿ ಒಬ್ಬರು ನಟ ಯಶ್ ಬಗ್ಗೆ ಒಂದು ಮಾತು ಹೇಳಿ, ನೀವು ಅವರ ಕೆಜಿಎಫ್ ಚಿತ್ರ ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನಟ ಶಾರುಖ್ “ಯಶ್ ಇಸ್ ವಾವ್” ಎಂದು ಪ್ರತಿಕ್ರಿಯಿಸಿದ್ದಾರೆ. ಇದೊಂದು ಪ್ರತಿಕ್ರಿಯೆ ಇದೀಗ ಸಾಕಷ್ಟು ವೈರಲ್ ಆಗಿದೆ. ಅಭಿಮಾನಿಗಳು ಈ ಪ್ರತಿಕ್ರಿಯೆ ನೋಡಿ ಫುಲ್ ಖುಷಿಯಾಗಿದ್ದಾರೆ. ಇದೀಗ ಯಶ್ ಕೆಜಿಎಫ್ ಸಿನಿಮಾದ ಮೂಲಕ ಭಾರತದಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಹೀಗಾಗಿ ಶಾರುಖ್ ಯಶ್ ಕುರಿತಾಗಿ ಮೆಚ್ಚುಗೆಯ ಮಾತುಗಳನಾಡಿದ್ದಾರೆ. ಇದನ್ನು ಓದಿ..Kannada News: ಅವತಾರ್ 2 ಸಿನಿಮಾ ನೋಡುತ್ತಿರುವಾಗಲೇ ದಿಡೀರ್ ಎಂದು ಬಂದ ಹಾರ್ಟ್ ಅಟ್ಯಾಕ್. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತೆ?

ಈ ಹಿಂದೆ ಕರಣ್ ಜೋಹರ್ ನಡೆಸಿಕೊಡುವ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಶಾಹಿದ್ ಕಪೂರ್ ಅವರಿಗೆ ಕರಣ್ ನಿಮ್ಮ ಪ್ರಕಾರ ಇಂಡಿಯಾದ ನಂಬರ್ ಒನ್ ನಟ ಮತ್ತು ನಟಿ ಯಾರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ್ದ ಶಾಹಿದ್ ನಂಬರ್ ಒನ್ ನಟ ಎಂದರೆ ಅದು ಕೆಜಿಎಫ್ ಯಶ್ ಎಂದು ಉತ್ತರಿಸಿದರು. ಇದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಮಂತ ಅವರಿಗೆ ನಿಮ್ಮ ಫೋನ್ ಜಿಪಿಎಸ್ ಗೆ ಯಾರದ್ದಾದರೂ ಧ್ವನಿಯನ್ನು ಬದಲಾಯಿಸುವ ಅವಕಾಶವಿದ್ದರೆ ಯಾರ ಧ್ವನಿಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದಾಗ, ಅವರು ಯಶ್ ಅವರ ಹೆಸರನ್ನೇ ಹೇಳಿದ್ದರು. ಆ ಮೂಲಕ ನನಗೆ ಯಶ್ ಅವರ ಧ್ವನಿ ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದ್ದರು. ಇದೇ ಅಲ್ಲದೆ ಯಶ್ ಅವರು ಇದೀಗ ಪ್ರಪಂಚಾದ್ಯಂತ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಈ ನಡುವೆ ನಟ ಶಾರುಖ್ ಖಾನ್ ಯಶ್ ಕುರಿತಾಗಿ ‘ಯಶ್ ಇಸ್ ವಾವ್’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ.. Kannada News: ದಿಡೀರ್ ಎಂದು ಅಭಿಷೇಕ್ ಹಾಗೂ ಅವೀವಾ ರವರನ್ನು ಭೇಟಿ ಆದ ಡಿ ಬಾಸ್ ವಿಜಯಲಕ್ಷ್ಮಿ. ಕೊಟ್ಟ ಉಡುಗೊರೆ ನೋಡಿ ಶಾಕ್.