Kannada News: ದಿಡೀರ್ ಎಂದು ಅಭಿಷೇಕ್ ಹಾಗೂ ಅವೀವಾ ರವರನ್ನು ಭೇಟಿ ಆದ ಡಿ ಬಾಸ್ ವಿಜಯಲಕ್ಷ್ಮಿ. ಕೊಟ್ಟ ಉಡುಗೊರೆ ನೋಡಿ ಶಾಕ್.

12

Kannada News: ಇತ್ತೀಚಿಗಷ್ಟೇ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ತಾರೆಯಲ್ಲ ಭಾಗಿಯಾಗಿದ್ದರು. ಸುಮಲತಾ ಅಂಬರೀಶ್ ಅವರು ತಮ್ಮ ಪುತ್ರನ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ನಡೆಸಿದರು ಎಂದೇ ಹೇಳಬಹುದು. ಈ ವೇಳೆ ಕನ್ನಡ ಚಿತ್ರರಂಗದ ಸ್ಟಾರ್ ನಟ ನಟಿಯರು ಈ ನಿಶ್ಚಿತಾರ್ಥ ಸಮಾರಂಭಕ್ಕೆ ಸಾಕ್ಷಿಯಾದರು. ನಟ ಯಶ್, ರಾಧಿಕಾ ಪಂಡಿತ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಇದೇ ವೇಳೆ ಅಂಬರೀಶ್ ಅವರ ದೊಡ್ಡ ಮಗ ಎಂದು ಹೇಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಆಗಮಿಸಿದ್ದರು. ಆದರೆ ಆ ವೇಳೆ ಅವರ ಪತ್ನಿ ವಿಜಯಲಕ್ಷ್ಮಿ ಬರಲಾಗಿರಲಿಲ್ಲ. ಇತ್ತೀಚಿಗೆ ಮತ್ತೆ ದರ್ಶನ್ ರವರು ತಮ್ಮ ಪತ್ನಿಯ ಜೊತೆಗೆ ಅಭಿಷೇಕ್ ಮತ್ತು ಅವಿವಾ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ದುಬಾರಿ ಗಿಫ್ಟ್ ಒಂದನ್ನು ನೀಡಿದ್ದಾರೆ.

ಇತ್ತೀಚಿಗಷ್ಟೇ ನಟ ಅಭಿಷೇಕ್ ಅಂಬರೀಶ್ ಅವಿವ ಎನ್ನುವವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡರು. ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಅವಿವ ಫ್ಯಾಷನ್ ಲೋಕದಲ್ಲಿ ಬಹು ಬೇಡಿಕೆಯ ಡಿಸೈನರ್ ಎಂದು ಹೆಸರಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಅಭಿಷೇಕ್ ಮತ್ತು ಅವಿವಾ ಅವರಿಗೆ ವಿದೇಶದಲ್ಲಿ ಪರಿಚಯವಾಗಿತ್ತು. ಇದೇ ಪರಿಚಯ ಸ್ನೇಹಕ್ಕೆ ಬದಲಾಗಿ ನಂತರ ಇಬ್ಬರು ಪ್ರೀತಿಸಲು ಶುರು ಮಾಡಿದ್ದರಂತೆ. ನಾಲ್ಕೈದು ವರ್ಷಗಳ ಮೊದಲಿನಿಂದಲೂ ಈ ಜೋಡಿ ಪರಸ್ಪರ ಪ್ರೀತಿಸುತ್ತಿತ್ತು. ಇದೀಗ ಇವರಿಬ್ಬರು ಎರಡು ಕುಟುಂಬದವರ ಒಪ್ಪಿಗೆಯ ಮೇರೆಗೆ ಇನ್ನು ಕೆಲವೇ ದಿನಗಳಲ್ಲಿ ಹಸೆಮಣೆ ಹೇರಲಿದ್ದಾರೆ. ಮುಂದಿನ ಜೂನ್ ತಿಂಗಳಲ್ಲಿ ಈ ಜೋಡಿ ಮದುವೆ ನಡೆಯಲಿದೆ. ಇದನ್ನು ಓದಿ..Kannada News: ಅವತಾರ್ 2 ಸಿನಿಮಾ ನೋಡುತ್ತಿರುವಾಗಲೇ ದಿಡೀರ್ ಎಂದು ಬಂದ ಹಾರ್ಟ್ ಅಟ್ಯಾಕ್. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತೆ?

ಕಳೆದ ವಾರ ಈ ಜೋಡಿ ನಿಶ್ಚಿತಾರ್ಥ ಸಮಾರಂಭ ನಡೆಯಿತು. ಈ ವೇಳೆ ಕಾರ್ಯಕ್ರಮಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದರು. ದರ್ಶನ್ ಅವರು ಒಂದು ರೀತಿ ಸುಮಲತಾ ಅವರಿಗೆ ಹಾಗೂ ಅಂಬರೀಶ್ ಕುಟುಂಬಕ್ಕೆ ದೊಡ್ಡ ಮಗ ಎಂಬ ರೀತಿ ಇದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇತ್ತೀಚಿಗಷ್ಟೇ ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರು ದಂಪತಿಗಳು ಅಭಿಷೇಕ್ ಮತ್ತು ಅವಿವ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ. ಇನ್ನು ವಿಜಯಲಕ್ಷ್ಮಿ ಅವರು ಅವಿವ ಕೆನ್ನೆ ಸವರಿ ಪ್ರೀತಿಯಿಂದ ಮಾತನಾಡಿಸಿ ವಿಶ್ ಮಾಡಿದ್ದಾರೆ. ಜೊತೆಗೆ ದಂಪತಿಗಳು ಈ ನವ ಜೋಡಿಗೆ ದುಬಾರಿ ವಿಶೇಷವಾದ ಗಿಫ್ಟ್ ಒಂದನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ.. Kannada News: ರಶ್ಮಿಕಾ ಕನ್ನಡಕ್ಕೆ ಬರಲ್ಲ ಎಂದು ಕಣ್ಣೀರು ಹಾಕುತ್ತಿದ್ದ ಕನ್ನಡಿಗರಿಗೆ ಸಿಕ್ತು ಸಿಹಿ ಸುದ್ದಿ. ರಶ್ಮಿಕಾ ಸ್ಥಾನವನ್ನು ತುಂಬುವ ನಟಿ ಬಂದಾಯ್ತು. ಯಾರು ಗೊತ್ತೇ?