Cricket News: ಸುಮ್ಮನೆ ಇದ್ದವನನ್ನು ಕೆಣಕಿದ ಸಿರಾಜ್ ಗೆ ಬಾರಿ ಮುಜುಗರ: ಬಾಂಗ್ಲಾ ಆಟಗಾರ ಮಾಡಿದನ್ನು ನೋಡಿ, ಇದು ಬೇಕಿತ್ತಾ ಸಿರಾಜ್ ಎಂದ ನೆಟ್ಟಿಗರು. ಏನಾಗಿದೆ ಗೊತ್ತೆ?

15

Cricket News: ಬಾಂಗ್ಲಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಅಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು ಇದೀಗ ಟೆಸ್ಟ್ ಪಂದ್ಯಗಳಲ್ಲಿ ನಿರತವಾಗಿದೆ. ಟೀಮ್ ಇಂಡಿಯಾ ಬಾಂಗ್ಲಾ ವಿರುದ್ಧ ಆಡಿದ ಮೊದಲ ಟೆಸ್ಟ್ ಪಂದ್ಯ ನೆನ್ನೆ ಭಾನುವಾರ ರೋಚಕವಾಗಿ ಮುಕ್ತಾಯವಾಯಿತು. ಇನ್ನು ಎರಡನೇ ಪಂದ್ಯವು ಡಿಸೆಂಬರ್ 22 ರಿಂದ ಆರಂಭಗೊಳ್ಳಲಿದೆ. ಆದರೆ ಮೊದಲ ಪಂದ್ಯದಲ್ಲಿ ಸಾಕಷ್ಟು ಕುತೂಹಲಗಳು ಇದ್ದವು ಎಂದು ಹೇಳಬಹುದು. ಈ ವೇಳೆ ಟೀಮ್ ಇಂಡಿಯಾ ಬೋಲರ್ ಮಹಮ್ಮದ್ ಮೊಹಮ್ಮದ್ ಸಿರಾಜ್ ಕೆಲವು ಆಟಗಾರರನ್ನು ಸ್ಲೈಡ್ಜ್ ಮಾಡುತ್ತಿದ್ದರು. ಆದರೆ ಎದುರಾಳಿ ಆಟಗಾರರ ಪ್ರತಿಕ್ರಿಯೆಯಿಂದಾಗಿ ಸಿರಾಜ್ ಅವರಿಗೆ ಭಾರಿ ಮುಖಭಂಗವಾಗಿದೆ. ಸುಮ್ಮನೆ ಇರಲಾರದೆ ಇದೆಲ್ಲ ಬೇಕಿತ್ತಾ ಎಂದು ನೆಟ್ಟಿಗರು ಸಿರಾಜ್ ಅವರನ್ನು ಟೀಕಿಸುತ್ತಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಜೊತೆಗೆ ಎದುರಾಳಿ ಬ್ಯಾಟ್ಸ್ ಮನ್ ಗಳನ್ನು ಸ್ಲಡ್ಜ್ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಮೊದಲ ಇನಿಂಗ್ಸ್ನಲ್ಲೇ ಲಿಟ್ಟನ್ ದಾಸ್ ಅವರನ್ನು ಸ್ಲಡ್ಜ್ ಮಾಡಿದ್ದ ಸಿರಾಜ್ ಅದರ ಮುಂದಿನ ಎಸೆತದಲ್ಲೇ ಕ್ಲೀನ್ ಬೌಲ್ಡ್ ಮಾಡಿದ್ದರು. ಅಲ್ಲದೆ ಎರಡನೇ ಇನಿಂಗ್ಸ್ ನಲ್ಲಿಯೂ ಕೂಡ ವೇಗಿ ಮೋಹಮ್ಮದ್ ಸಿರಾಜ್ ಬಾಂಗ್ಲಾದೇಶದ ಆರಂಭಿಕ ಆಟಗಾರ ನಜ್ಮುಲ್ ಹುಸೇನ್ ಶಾಂಟೋ ಅವರನ್ನು ಸ್ಲಡ್ಜ್ ಮಾಡಿದ್ದಾರೆ. ಶಾಂಟೋ ಆರಂಭಿಕವಾಗಿ ಅದ್ಭುತವಾಗಿ ಶುರು ಮಾಡಿದರು, ಅತ್ಯುತ್ತಮವಾಗಿ ಪ್ರದರ್ಶನ ತೋರುತ್ತಿದ್ದರು. ಆದರೆ ಇದರಿಂದಾಗಿ ತಾಳ್ಮೆ ಕಳೆದುಕೊಂಡ ಸಿರಾಜ್ 34ನೇ ಓವರ್ ನಿಂದ ಹುಸೇನವರಿಗೆ ಏನನ್ನೋ ಹೇಳುತ್ತಲೇ ಇದ್ದರು. ಇದನ್ನು ಓದಿ..Kannada News: ಕೊನೆಗೂ ಮಹದೇಶ್ವರ ಬೆಟ್ಟಕ್ಕೆ ಒಳ್ಳೆಯ ದಿನಗಳು ಆರಂಭ: ಮಹತ್ವದ ಯೋಜನೆ ಘೋಷಿಸಿದ ಸಿಎಂ: ಎಷ್ಟು ಕೋಟಿ ಗೊತ್ತೇ??

ಆದರೂ ಇದರ ಬಗ್ಗೆ ಶಾಂಟೋ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಆಡುತ್ತಿದ್ದರು. ಸಿರಾಜ್ ಮಾಡುತ್ತಿದ್ದ ಸ್ಲಡ್ಜಿಂಗ್ ಗೆ ಕೇವಲ ನಗುವಿನ ಮೂಲಕವೇ ಉತ್ತರಿಸಿದರು. ಏನನ್ನು ತಲೆಗೆ ಹಾಕಿಕೊಳ್ಳದ ಅವರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಕೇವಲ ನಗುವಿನ ಮೂಲಕ ಸಿರಾಜ್ಗೆ ಪ್ರತಿಕ್ರಿಸಿದರು. ಇದೊಂದು ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟ್ವಿಟರ್ ನಲ್ಲಿ ಈ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಸುಮ್ಮನೆ ನೆಟ್ಟಗೆ ಬೌಲಿಂಗ್ ಮಾಡುವುದು ಬಿಟ್ಟು ಇದೆಲ್ಲ ಸಿರಾಜ್ ಗೆ ಬೇಕಿತ್ತಾ ಎಂದು ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೌಲಿಂಗ್ ಮಾಡುವುದನ್ನು ಬಿಟ್ಟು ಇವೆಲ್ಲ ಅವಾಂತರ ಯಾಕೆ ಬೇಕಿತ್ತು, ಇಷ್ಟೆಲ್ಲ ಮಾಡುವ ಅವಶ್ಯಕತೆ ಇತ್ತಾ ಎಂದು ಸಿರಾಜ್ಗೆ ನೆಟ್ಟಿಗರು ಹಿಗ್ಗಾಮುಗ್ಗ ಬೈಯುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಈ ವಿಡಿಯೋಗೆ ಇದೇ ರೀತಿಯ ಸಾಕಷ್ಟು ಕಮೆಂಟ್ಗಳು ಕಂಡುಬರುತ್ತಿವೆ. ಇದನ್ನು ಓದಿ.. Cricket News: ಬಾಂಗ್ಲಾದಲ್ಲಿ ಇನ್ನು ನಮ್ಮ ಅಸಲಿ ಆಟ ಶುರು, ತಂಡಕ್ಕೆ ಕೊನೆಗೂ ಬಂದ ಆಟಗಾರ. ಶೇಕ್ ಆಗಿ ನಡುಗಿದ ಬಾಂಗ್ಲಾ ದೇಶ? ಯಾರು ಗೊತ್ತೆ?