Kannada News: ರಶ್ಮಿಕಾ ಕನ್ನಡಕ್ಕೆ ಬರಲ್ಲ ಎಂದು ಕಣ್ಣೀರು ಹಾಕುತ್ತಿದ್ದ ಕನ್ನಡಿಗರಿಗೆ ಸಿಕ್ತು ಸಿಹಿ ಸುದ್ದಿ. ರಶ್ಮಿಕಾ ಸ್ಥಾನವನ್ನು ತುಂಬುವ ನಟಿ ಬಂದಾಯ್ತು. ಯಾರು ಗೊತ್ತೇ?
Kannada News: ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಹು ಬೇಡಿಕೆ ನಟಿಯಾಗಿ ಬೆಳೆದಿದ್ದಾರೆ. ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುಭಾಷ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ದಕ್ಷಿಣ ಭಾರತದ ಪ್ರಖ್ಯಾತ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ಅವರಿಗೆ ಜನಪ್ರಿಯತೆ ಇದೆ. ಕನ್ನಡದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಕೂಡ ಬಹುತೇಕ ಕನ್ನಡಿಗರಿಗೆ ರಶ್ಮಿಕ ಕಂಡರೆ ಅಷ್ಟಕಷ್ಟೇ ಎಂದೇ ಹೇಳಬಹುದು. ಕನ್ನಡದ ಬಗ್ಗೆ ಅವರಿಗಿರುವ ಅಭಿಪ್ರಾಯ, ನಿಲುವಿನ ಕುರಿತಾಗಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ನಟಿ ರಶ್ಮಿಕ ಬದಲಿಗೆ ಮತ್ತೊಬ್ಬ ನಟಿಯನ್ನು ಅವರ ಜಾಗದಲ್ಲಿ ಅಭಿಮಾನಿಗಳು ನೋಡಲು ಬಯಸುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡ ಅಷ್ಟಕಷ್ಟೇ ಎನ್ನುವಂತೆ ಅವರು ನಡೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಕನ್ನಡಿಗರು ನಿರಂತರವಾಗಿ ರಶ್ಮಿಕ ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಯಾರಾದರೂ ಕನ್ನಡದ ನಟಿ ತುಂಬಾ ಚೆನ್ನಾಗಿ ಕನ್ನಡ ಮಾತನಾಡಿದರೆ ಅಥವಾ ಪರಭಾಷೆ ನಟಿ ಕನ್ನಡವನ್ನು ಮಾತನಾಡುವ ಪ್ರಯತ್ನ ಮಾಡಿದರೆ ಆ ಎಲ್ಲ ಸಮಯದಲ್ಲೂ ನಟಿ ರಶ್ಮಿಕ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿಬಿಡುತ್ತಾರೆ. ಇವರನ್ನು ನೋಡಿ ಕಲಿಯಿರಿ ಎಂದು ಟೀಕಿಸುತ್ತಾರೆ. ಏನೇ ಆದರೂ ರಶ್ಮಿಕ ಬದಲಾಗುವುದಿಲ್ಲ, ನಾವು ಬಿಡುವುದಿಲ್ಲ ಎಂಬ ಪರಿಸ್ಥಿತಿ ವರ್ಷಗಳಿಂದಲೂ ಹಾಗೆಯೇ ಇದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಗೆಲುವಿನ ನಂತರ ಪುಷ್ಪ 2 (Pushpa2) ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನೆಟ್ಟಿಗರು ಮತ್ತೊಬ್ಬ ಕನ್ನಡದ ನಟಿಯನ್ನು ಅವರ ಬದಲಿಗೆ ಸೂಚಿಸಿದ್ದು ಅವರನ್ನೇ ರಶ್ಮಿಕ ಬದಲಿಗೆ ತೆಗೆದುಕೊಳ್ಳಬೇಕು ಎಂದು ಮನವಿ ಇಟ್ಟಿದ್ದಾರೆ. ಇದನ್ನು ಓದಿ..Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.

ಅಚ್ಚರಿ ಎನಿಸಿದರು ಈ ವಿಷಯ ಸತ್ಯ, ನಟಿ ರಶ್ಮಿಕಾ ಮಂದಣ್ಣ ಪುಷ್ಪ 2 ಚಿತ್ರದಲ್ಲಿಯೂ ಕೂಡ ತಮ್ಮ ಪಾತ್ರದಲ್ಲಿ ಮುಂದುವರೆಯಲಿದ್ದಾರೆ. ಆದರೆ ಇದೀಗ ರಶ್ಮಿಕ ಬದಲಿಗೆ ಕನ್ನಡದ ನಟಿಯೊಬ್ಬರನ್ನು ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಮನವಿ ಮಾಡುತ್ತಿದ್ದಾರೆ. ಪುಷ್ಪ 2 ಚಿತ್ರತಂಡಕ್ಕೆ ಇಂತಹದೊಂದು ಮನವಿಯನ್ನು ಕನ್ನಡದ ಅಭಿಮಾನಿಗಳು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟಕ್ಕೂ ಆ ಕನ್ನಡದ ನಟಿ ಬೇರಾರು ಅಲ್ಲ ಮೇಘ ಶೆಟ್ಟಿ (Megha Shetty). ಹೌದು, ಜೊತೆಜೊತೆಯಲಿ ಧಾರವಾಹಿಯಲ್ಲಿ ಅನು ಪಾತ್ರವನ್ನು ಮಾಡುತ್ತಿರುವ ನಟಿ ಮೇಘ ಶೆಟ್ಟಿ ಅವರನ್ನು ಈ ಪಾತ್ರದಲ್ಲಿ ಮುಂದುವರಿಸಬೇಕು ಎಂದು ಜನರು ಕೇಳಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಮೇಘ ಶೆಟ್ಟಿ ದಿಲ್ ಪಸಂದ್ ಮತ್ತು ತ್ರಿಬಲ್ ರೈಡಿಂಗ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ನೋಡಲು ತುಂಬಾ ಸುಂದರವಾಗಿರುವ, ಅದ್ಭುತವಾಗಿ ಅಭಿನಯ ಮಾಡಬಲ್ಲ ಈಕೆಯನ್ನು ರಶ್ಮಿಕ ಬದಲಿಗೆ ಪುಷ್ಪ 2 ಚಿತ್ರಕ್ಕೆ ತೆಗೆದುಕೊಳ್ಳಿ ಎಂದು ಚಿತ್ರತಂಡಕ್ಕೆ ಕನ್ನಡಿಗರು ಮನವಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ..Kannada News: ಗಟ್ಟಿಮೇಳ ಅದಿತಿ ಹಾಗೂ ಪಾರು ಸಿದ್ದು ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ? ನೋಡಲು ಹಾಗೆ ಕಾಣಲ್ಲ ಅಲ್ವ?