Kannada News: ಅವತಾರ್ 2 ಸಿನಿಮಾ ನೋಡುತ್ತಿರುವಾಗಲೇ ದಿಡೀರ್ ಎಂದು ಬಂದ ಹಾರ್ಟ್ ಅಟ್ಯಾಕ್. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತೆ?
Kannada News: ಅವತಾರ್ 2 (Avatar 2) ಚಿತ್ರವು ನಿನ್ನೆ ತೆರೆಕಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಸುಮಾರು 13 ವರ್ಷಗಳ ಹಿಂದೆ ತೆರೆಕಂಡಿದ್ದ ಅವತಾರ್ ಚಿತ್ರ ಪ್ರಪಂಚದಾದ್ಯಂತ ಎಲ್ಲಾ ಬಗೆಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಮತ್ತೆ ಅದರ ಮುಂದಿನ ಸೀಕ್ವೆನ್ಸ್ ಬಂದಿದ್ದು, ಇಷ್ಟು ವರ್ಷಗಳ ಅಂತರದ ನಂತರ ನೆನ್ನೆ ಅವತಾರ್ 2 ಚಿತ್ರ ತೆರೆ ಕಂಡಿದೆ. ಅವತಾರ್ ಚಿತ್ರದ ಮೊದಲ ಭಾಗವು ಡಿಸೆಂಬರ್ 18 2009 ರಂದು ತೆರೆಕಂಡು ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಜೇಮ್ಸ್ ಕ್ಯಾಮರೂನ್ (James Cameron) ಅವರ ನಿರ್ದೇಶನದಲ್ಲಿ ಅವತಾರ್ ಚಿತ್ರದ ಮುಂದಿನ ಸೀಕ್ವೆನ್ಸ್ ನೆನ್ನೆ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಕೂಡ ಚಿತ್ರವನ್ನು ಮೆಚ್ಚಿ ಹೊಗಳುತ್ತಿದ್ದಾರೆ. ಇದೆಲ್ಲದರ ನಡುವೆ ಅವತಾರ್ ಚಿತ್ರವನ್ನು ವೀಕ್ಷಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಅವತಾರ್ 2 ಚಿತ್ರ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದೇ ವೇಳೆ ಚಿತ್ರ ನೋಡುತ್ತಿದ್ದಾಗ ವ್ಯಕ್ತಿಯೊಬ್ಬರೂ ಹೃದಯಾಘಾತದಿಂದ ಮೃತಪಟ್ಟಿರುವ ನೋವಿನ ಸಂಗತಿ ಜರುಗಿದೆ. ಅವತಾರ್ ಟು ಚಿತ್ರವನ್ನು ವೀಕ್ಷಿಸುವ ವೇಳೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆತ್ತಪುರಂನಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಚಿತ್ರವನ್ನು ವೀಕ್ಷಿಸಲು ತಮ್ಮ ಕಿರಿಯ ಸಹೋದರನ ಜೊತೆಗೆ ಬಂದಿದ್ದ ಶ್ರೀನು (Shreenu) ಎಂಬುವರು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಚಿತ್ರ ವೀಕ್ಷಿಸುವ ವೇಳೆಗೆ ಶ್ರೀನು ಮೂರ್ಛೆ ಹೋಗಿದ್ದರು. ಆಗ ಅವರ ಕಿರಿಯ ಸಹೋದರ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋದ ನಂತರ ಅಲ್ಲಿನ ವೈದ್ಯರು ಶ್ರೀನು ಅವರನ್ನು ಪರೀಕ್ಷಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿಯನ್ನು ಇಂಡಿಯಾ ಟುಡೇ ವರದಿ ಮಾಡಿದೆ. ಇದನ್ನು ಓದಿ..Biggboss Kannada: ಬಿಗ್ ಬಾಸ್ ನಲ್ಲಿ ಹೊಚ್ಚ ಹೊಸ ದಾಖಲೆ ಬರೆದ ರೂಪೇಶ್ ಶೆಟ್ಟಿ, ಯಾರು ಮಾಡಿಲ್ಲ, ಮಾಡೋಕೆ ಆಗಲ್ವ??

ಇದೇ ರೀತಿಯಲ್ಲಿ ಏಜೆನ್ಸ್ ಫ್ರಾನ್ಸ್-ಪ್ರೆಸ್ 2010 ರಲ್ಲಿ ತೈವಾನ್ನಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ‘ಅವತಾರ್’ ಮೊದಲ ಸೀಕ್ವೆನ್ಸ್ ವೀಕ್ಷಿಸುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಚಿತ್ರ ನೋಡುವಾಗ ಅತಿಯಾದ ಉತ್ಸಾಹ ಮತ್ತು ಸಂತೋಷದಿಂದ ಅವರಿಗೆ ಹೃದಯಘಾತವಾಗಿದೆ ಎಂದು ದೃಢಪಡಿಸಿದ್ದರು. ಈ ರೀತಿಯಾಗಿ ಅವತಾರ್ ಚಿತ್ರದಿಂದ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಚಿತ್ರವನ್ನು ಮೆಚ್ಚಿಕೊಂಡು ಜನರು ವೀಕ್ಷಿಸುತ್ತಿರುವಾಗ ಇದೆ ವೇಳೆ ಇಂತಹ ಹೃದಯವಿದ್ರಾವಕ ಘಟನೆ ನಡೆದಿದೆ. ಚಿತ್ರವನ್ನು ಕೇವಲ ಚಿತ್ರದ ರೀತಿಯಲ್ಲಿ ನೋಡಬೇಕು. ಅತಿಯಾದ ಭಾವಕತೆ, ಉದ್ವೇಗ, ಕೋಪ, ದುಃಖ ಎಲ್ಲವನ್ನು ನಿಯಂತ್ರಿಸಿಕೊಳ್ಳಬೇಕು. ಇಲ್ಲವಾದರೆ ಇಂತಹ ಘಟನೆಗಳು ಜರುಗುತ್ತವೆ ಎಂದು ವರದಿಯಾಗಿದೆ. ಇದನ್ನು ಓದಿ.. Kannada News: ರಶ್ಮಿಕಾ ಕನ್ನಡಕ್ಕೆ ಬರಲ್ಲ ಎಂದು ಕಣ್ಣೀರು ಹಾಕುತ್ತಿದ್ದ ಕನ್ನಡಿಗರಿಗೆ ಸಿಕ್ತು ಸಿಹಿ ಸುದ್ದಿ. ರಶ್ಮಿಕಾ ಸ್ಥಾನವನ್ನು ತುಂಬುವ ನಟಿ ಬಂದಾಯ್ತು. ಯಾರು ಗೊತ್ತೇ?