Kannada Astrology: ನಿಮ್ಮ ಕಾರಿನಲ್ಲಿ ಅಪ್ಪಿ ತಪ್ಪಿ ಕೂಡ ಇದೊಂದು ವಸ್ತು ಇಡಬೇಡಿ, ಶನಿ ದೇವ ಹಿಂದೆ ಬೀಳುತ್ತಾನೆ. ಯಾವ ವಸ್ತು ಗೊತ್ತೇ?
Kannada Astrology: ಶನಿದೇವರು ಬಹಳ ಮುಖ್ಯವಾದ ಗ್ರಹ, ಇವರ ಪರಿಣಾಮ ಒಂದು ರಾಶಿಯ ಮೇಲೆ ಪ್ರಬಲವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿ ಮಾಡುವ ಕರ್ಮಗಳ ಅನುಸಾರ ಶನಿದೇವರು ಕರ್ಮದ ಫಲಗಳನ್ನು ನೀಡುತ್ತಾರೆ. ಹಾಗಾಗಿ ಪ್ರತಿಯೊಬ್ಬರು ತಾವು ಮಾಡುವ ಕೆಲಸಗಳ ಬಗ್ಗೆ ಹುಷಾರಾಗಿರಬೇಕು. ಹಾಗೆಯೇ ಶನಿದೇವರ ಜೊತೆಗಿನ ಬಂಧವನ್ನು ಕಬ್ಬಿಣದ ಜೊತೆಗೆ ಹೋಲಿಕೆ ಮಾಡಲಾಗುತ್ತದೆ. ಹಾಗಾಗಿ ಕಾರ್ ಗಳನ್ನು ಖರೀದಿ ಮಾಡುವವರು, ಖರೀದಿ ಮಾಡಲು ಬಯಸುತ್ತಿರುವವರು, ಕೆಲವು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಕಾರ್ ನ ಟ್ರಂಕ್ ಒಳಗೆ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಶನಿದೇವರ ಕೋಪಕ್ಕೆ ಕಾರಣವಾಗಬಹುದು. ಇಂದು ನಾವು ತಿಳಿಸುವ ವಸ್ತುಗಳು ನಿಮ್ಮ ಕಾರ್ ನ ಟ್ರಂಕ್ ನ ಒಳಗೆ ಇದ್ದರೆ, ಕೂಡಲೇ ಅವುಗಳನ್ನು ತೆಗೆದುಹಾಕಿ.
ಕಬ್ಬಿಣದ ವಸ್ತುಗಳು ಶನಿದೇವರಿಗೆ ಹತ್ತಿರವಾದದ್ದು ಎನ್ನುವ ಕಾರಣದಿಂದ ಕೆಲವು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೆಲವು ವ್ಯಕ್ತಿಗಳು ಬೈಕ್ ಅಥವಾ ಟಾರ್ ನ ಟ್ರಂಕ್ ಒಳಗೆ ಬೇಡದ ಅನಾವಶ್ಯಕ ವಸ್ತುಗಳನ್ನು ಇಡುತ್ತಾರೆ. ಆದರೆ ಇದು ತಪ್ಪು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ, ಈ ರೀತಿ ಮಾಡುವುದರಿಂದ, ನಿಮಗೆ ಸಮಸ್ಯೆಗಳು ಎದುರಾಗಬಹುದು. ಕೆಲವು ಸಮಯದಲ್ಲಿ ನೀವು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ, ಇದ್ದಕ್ಕಿದ್ದ ಹಾಗೆ ನಿಮ್ಮ ಕಾರು ಕೆಟ್ಟು ಹೋಗುತ್ತಿರಬಹುದು. ಎಷ್ಟೇ ಹಣ ಖರ್ಚು ಮಾಡಿ, ಅದನ್ನು ಸರಿ ಮಾಡಿದರು ಕೂಡ ಸಮಸ್ಯೆ ಹಾಗೆಯೇ ಉಳಿದುಹೋಗಬಹುದು. ಇದರಿಂದ ನಿಮ್ಮ ಹಣಕಾಸಿನ ವಿಷಯದಲ್ಲಿ ಸಹ ನಿಮಗೆ ತೊಂದರೆ ಆಗಬಹುದು. ಇದನ್ನು ಓದಿ..Kannada Astrology: ಹೇಗಾದ್ರು ಮಾಡಿ, ಇನ್ನು 15 ದಿನ ತಡೆಯಿರಿ, ಆಮೇಲೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಲೈಫ್ ಫುಲ್ ಡಿಂಗ್ ಡಾಂಗ್.

ಇದಕ್ಕೆ ಕಾರಣ ಶನಿದೋಷ ಆಗಿದೆ. ಈ ರೀತಿ ಆದಾಗ ನೀವು ಕೆಲವು ಪರಿಹಾರಗಳನ್ನು ಮಾಡಿಕೊಳ್ಳಬಹುದು. ಉಪಯೋಗಿಸದ ಬಾಟಲ್ ಗಳು, ಹಳೆಯ ಬಿಲ್ ಗಳು, ಪೇಪರ್ ಗಳನ್ನೆಲ್ಲಾ ಕಾರ್ ನ ಟ್ಯಾಂಕ್ ನಲ್ಲಿ ಅಥವ ಬೈಕ್ ನಲ್ಲಿ ಇಡಬಾರದು. ಇದೆಲ್ಲವೂ ಶನಿದೇವರ ಕೋಪಕ್ಕೆ ಕಾರಣವಾಗುತ್ತದೆ. ಇದು ಮನುಷ್ಯರ ಜೀವನದ ಬಗ್ಗೆ ನೆಗಟಿವ್ ಆಗಿ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ನಿಮ್ಮ ಕಾರ್ ಅಥವಾ ಬೈಕ್ ನ ಟ್ರಂಕ್ ಅನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಬೇಕಿರುವ ಉಪಕರಣಗಳು ಮತ್ತು ಸ್ಟೆಪ್ನಿಯನ್ನು ಕಾರ್ ನ ಒಳಗೆ ಇಟ್ಟುಕೊಳ್ಳಿ, ಬೇರೆ ವಸ್ತುಗಳನ್ನು ಇಡಬೇಡಿ. ಇದನ್ನು ಓದಿ.. Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.