Automobiles: ಮಾರುಕಟ್ಟೆಯನ್ನು ಶೇಕ್ ಮಾಡಿ, ದೂಳು ಎಬ್ಬಿಸಲು ಬರುತ್ತಿದೆ RX: ಬೈಕ್ ಬೆಲೆ ಕೇಳಿದರೆ, ಇಂದೇ ದುಡ್ಡು ತೆಗೆದು ಇಡ್ತೀರಾ. ತಗೋಳೋಕೆ.

57

Automobiles: ಮೋಟಾರ್ ಬೈಕ್ (Motorbike) ಗಳ ಬಗ್ಗೆ ಸಾಕಷ್ಟು ಕ್ರೇಜ್ ಆಸಕ್ತಿ ಇರುವ ಯಾರಿಗೆ ಆಗಲಿ ಯಮಹ ಆರ್ ಎಕ್ಸ್ ಹಂಡ್ರೆಡ್(Yamaha RX 100) ಎಂದರೆ ಎಲ್ಲರಿಗೂ ಗೊತ್ತೇ ಇರುತ್ತದೆ. ಅಷ್ಟರಮಟ್ಟಿಗೆ ಅದು ಪರಿಚಿತ ಎಂದು ಹೇಳಬಹುದು. ಯುವಕರ ಹಾರ್ಟ್ ಫೇವರೆಟ್ ಎಂದರೆ ತಪ್ಪಾಗಲಾರದು. ಆದರೆ ಸದ್ಯಕ್ಕೆ ಯಮಹ ಆರ್ ಎಕ್ಸ್ ಹಂಡ್ರೆಡ್ ಬೈಕ್ ಅನ್ನು ಉತ್ಪಾದಿಸುತ್ತಿಲ್ಲ. ಸಾಕಷ್ಟು ವರ್ಷಗಳ ಹಿಂದೆಯೇ ಈ ಬೈಕ್ಗಳ ತಯಾರು ಮಾಡುವುದು ಸ್ಥಗಿತಗೊಂಡಿದೆ. ಹೀಗಿದ್ದರೂ ಕೂಡ ಯುವಕರಿಗೆ ಈ ಬೈಕ್ ಕಂಡರೆ ಏನೋ ಒಂದು ರೀತಿಯ ಉತ್ಸಾಹ ಎಂದೇ ಹೇಳಬಹುದು. ಇದೀಗ ಆರ್ ಎಕ್ಸ್ ಬೈಕ್ ಬಗ್ಗೆ ಕ್ರೇಜ್ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಸಂತಸದ ವಿಷಯ ಬಹಿರಂಗಗೊಂಡಿದೆ. ಅದೇನೆಂದರೆ ಯಮಹ ಕಂಪನಿಯು ಮತ್ತೆ ಈ ರೀತಿಯ ಬೈಕ್ ಗಳನ್ನು ಉತ್ಪಾದಿಸುವ ನಿರ್ಧಾರ ಕೈಗೊಂಡಿದೆ. ಸ್ವತಃ ಇದನ್ನು ಕಂಪನಿಯ ಯಮಹಾ ಇಂಡಿಯಾ ಚೇರ್ಮನ್ ಆಗಿರುವ ಇಶಾನ್ ಚಿಹಾನಾ (Ishan Chihana) ಇವರು ತಿಳಿಸಿದ್ದಾರೆ.

ಮೊದಲ ಬಾರಿಗೆ ಅವರು ಮತ್ತೆ ಆರ್ ಎಕ್ಸ್ ಹಂಡ್ರೆಡ್ ಬೈಕ್ ಗಳನ್ನು ತಯಾರಿಸುವುದರ ಕುರಿತು ಮಾತನಾಡಿದ್ದಾರೆ. ಹೊಸ ಜನರೇಶನ್ ನ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಮತ್ತೆ ಹೊಸ ರೀತಿಯ ಆರ್ ಎಕ್ಸ್ 100 ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಅವರು ಬಹಿರಂಗಗೊಳಿಸಿದ್ದಾರೆ. ಇದುವರೆಗೆ ಕಂಪನಿ ಯಾವುದೇ ಬೇರೆ ಬೈಕ್ಗಳಿಗೆ ಆರ್ ಎಕ್ಸ್ 100 ಬ್ಯಾಡ್ಜ್ ಬಳಸಿಕೊಂಡಿಲ್ಲ. ಏಕೆಂದರೆ ಸ್ವತಹ ಆರ್ ಎಕ್ಸ್ ಹಂಡ್ರೆಡ್ ಬೈಕ್ ಗಳನ್ನು ಮತ್ತೆ ಮಾರುಕಟ್ಟೆಗೆ ತರುವ ಯೋಚನೆಯಲ್ಲಿ ಕಂಪನಿ ಇದ್ದುದರಿಂದಾಗಿ ಬೇರೆ ಬೈಕ್ಗಳಿಗೆ ಆ ರೀತಿ ಬ್ಯಾಡ್ಜ್ ಬಳಸಿಕೊಂಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೀಗ ಮಾರುಕಟ್ಟೆಗೆ ಶೀಘ್ರದಲ್ಲೇ ಆರ್ ಎಕ್ಸ್ 100 ಹೊಸ ವಿನ್ಯಾಸ, ರೂಪದ ಜೊತೆಗೆ ಲಗ್ಗೆ ಇಡಲಿದೆ. ಇದನ್ನು ಓದಿ..Health Tips: ಸಾವಿರಾರು ರೂಪಾಯಿ ಖರ್ಚು ಮಾಡುವ ಮೊದಲು, 7 ದಿನಗಳಲ್ಲಿ ಈ ಎಲೆಗಳ ಮೂಲಕ ಡಯಾಬಿಟಿಸ್ ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ?

ಕಟ್ಟುನಿಟ್ಟಾದ BS6 ಹಂತ 2 ಹೊರಸೂಸುವಿಕೆಯ ಮಾನದಂಡಗಳ ಕಾರಣದಿಂದಾಗಿ ಕಂಪನಿಯು RX100 ನ 2-ಸ್ಟ್ರೋಕ್ ಎಂಜಿನ್ ಅನ್ನು ಕಂಪನಿಗೆ ಮತ್ತೆ ತರಲು ಸಾಧ್ಯವಿಲ್ಲ ಎನ್ನುವುದು ಬಹುತೇಕ ದೃಢಪಟ್ಟಂತಾಗಿದೆ. ಇದೇ ಕಾರಣಕ್ಕೆ ಕಂಪನಿಯು ಹೊಸ ರೀತಿಯ ಎಂಜಿನನ್ನು ಈ ಬೈಕ್ಗೆ ಅಳವಡಿಸಲಿದೆ ಎಂದು ತಿಳಿದು ಬಂದಿದೆ. ತನ್ನ ಧ್ವನಿ, ಎಂಜಿನ್, ಕಾರ್ಯಕ್ಷಮತೆ ಕಾರಣದಿಂದಲೇ ಆರ್ ಎಕ್ಸ್ ಹಂಡ್ರೆಡ್ ಜನರ ಫೇವರೆಟ್ ಎಂದು ಹೇಳಬಹುದು. ಇದೀಗ ಹೊಸ ಬಗೆಯ ಎಂಜಿನನ್ನು ಅಳವಡಿಸುವ ಆಲೋಚನೆಯಲ್ಲಿ ಯಮಹ ಇದೆ. ಬರುವ ಬೈಕ್ ದೊಡ್ಡ ಎಂಜಿನ್ ಹೊಂದಿರಲಿದೆ. ದೊಡ್ಡ ಎಂಜಿನ್ ಬಳಸಿದರು ಸಹ ಯಮಹ ಆರ್ ಎಕ್ಸ್ ಹಂಡ್ರೆಡ್ ಯಾವ ಎಂಜಿನ್ ಬಳಸಬಹುದು ಎನ್ನುವ ಪ್ರಶ್ನೆ ಎದುರಾಗಿದೆ. ಜೊತೆಗೆ 125 ಸಿಸಿ ಅಥವಾ 150 ಸಿಸಿ ಎಂಜಿನ್ ಅಳವಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಹೊಸ ವಿನ್ಯಾಸ, ಹೊಸ ರೂಪದ ಜೊತೆಗೆ ಆರ್ ಎಕ್ಸ್ 100 ಬೈಕ್ ಬರಲಿದೆ. ಆದರೆ ಇದಕ್ಕಾಗಿ ಜನರು 2026 ರವರೆಗೂ ಕಾಯಬೇಕಾಗುತ್ತದೆ. ಕಂಪನಿಯು ಈ ಕುರಿತಂತೆ ಇನ್ಯಾವ ಅಪ್ಡೇಟ್ಸ್ ನೀಡಲಿದೆಯೋ ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಅವತಾರ್ 2 ಸಿನಿಮಾ ನೋಡುತ್ತಿರುವಾಗಲೇ ದಿಡೀರ್ ಎಂದು ಬಂದ ಹಾರ್ಟ್ ಅಟ್ಯಾಕ್. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತೆ?