Biggboss Kannada: ಬಿಗ್ ಬಾಸ್ ನಲ್ಲಿ ಹೊಚ್ಚ ಹೊಸ ದಾಖಲೆ ಬರೆದ ರೂಪೇಶ್ ಶೆಟ್ಟಿ, ಯಾರು ಮಾಡಿಲ್ಲ, ಮಾಡೋಕೆ ಆಗಲ್ವ??
Biggboss Kannada: ಕನ್ನಡದ ಬಿಗ್ ಬಾಸ್ ಸೀಸನ್ 9 (BBK9) ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿದಿನ ಉತ್ತಮವಾಗಿ ಮೂಡಿ ಬರುತ್ತಿದೆ. ಈಗಾಗಲೇ ಸಾಕಷ್ಟು ವಾರಗಳನ್ನು ಪೂರೈಸಿರುವ ಬಿಗ್ ಬಾಸ್ (Bigg Boss) ಇನ್ನು ಕೆಲವೇ ವಾರಗಳಲ್ಲಿ ಗ್ರಾಂಡ್ ಫಿನಾಲೆ ಹಂತಕ್ಕೆ ತಲುಪಲಿದೆ. ಇನ್ನು ಸೀಸನ್‍ನ ಸ್ಪರ್ಧಿಗಳಲ್ಲಿ ರೂಪೇಶ್ ಶೆಟ್ಟಿ (Roopesh Shetty) ಕೂಡ ಒಬ್ಬರು. ಓ ಟಿ ಟಿ ಸೀಸನ್ (Bigg Boss OTT) ನಲ್ಲಿ ಟಾಪ್ ಒನ್ ಸ್ಪರ್ದಿಯಾಗಿದ್ದ ರೂಪೇಶ್ ಶೆಟ್ಟಿ ಆ ಮೂಲಕ ನೇರವಾಗಿ ಟಿವಿ ಸೀಸನ್ಗೆ ಲಗ್ಗೆ ಇಟ್ಟಿದ್ದರು. ಇಲ್ಲೂ ಕೂಡ ಅದೇ ರೀತಿಯ ಉತ್ತಮ ಪ್ರದರ್ಶನವನ್ನು ಇಂದಿಗೂ ಕೂಡ ತೋರುತ್ತಲೇ ಬಂದಿದ್ದಾರೆ. ಮನೆಯ ಒಳಗೂ ಕೂಡ ಉಳಿದ ಸ್ಪರ್ಧಿಗಳಿಗೆ ಸಾಮಾನ್ಯವಾಗಿ ಶೆಟ್ಟಿ ಎಂದರೆ ಅಚ್ಚು ಮೆಚ್ಚು. ಜೊತೆಗೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೆ ವೇಳೆ ಶೋನಲ್ಲಿ ಈ ಹಿಂದೆ ಯಾರೂ ಮಾಡಿರದ ಹೊಸದೊಂದು ದಾಖಲೆ ರೂಪೇಶ್ ಶೆಟ್ಟಿ ನಿರ್ಮಿಸಿದ್ದಾರೆ. ಹಾಗಿದ್ದರೆ ಆ ದಾಖಲೆ ಏನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ, ಉತ್ತಮವಾಗಿ ಆಡುತ್ತಿದ್ದಾರೆ. ಇಷ್ಟು ವಾರಗಳ ಕಾಲ ಅವರ ಆಟವನ್ನು ಮೆಚ್ಚಿಕೊಂಡು ಜನರು ಅವರಿಗೆ ನಿರಂತರವಾಗಿ ವೋಟ್ ಮಾಡುತ್ತಾ ಬಂದಿದ್ದಾರೆ. ಆದರೆ ಈ ಸೀಸನ್ ನಲ್ಲಿ ಕ್ಯಾಪ್ಟನ್ ಅಗಳು ಅವರು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ದುರಾದೃಷ್ಟವಶಾತ್ ಒಂದು ವಾರಕ್ಕೂ ಸಹ ಅವರು ವಾರದ ಕ್ಯಾಪ್ಟನ್ ಆಗಲು ಸಾಧ್ಯವಾಗಲೇ ಇಲ್ಲ. ಆದರೆ ಅಂತಿಮವಾಗಿ ಕಳೆದ ವಾರ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯ ವಾರದ ಕ್ಯಾಪ್ಟನ್ ಆಗಿದ್ದರು. ಆ ಮೂಲಕ ಅವರ ಆಸೆ ಈಡೇರಿತು. ಕೇವಲ ಕ್ಯಾಪ್ಟನ್ ಆಗಿದ್ದು ಮಾತ್ರವೇ ಸಾಧನೆಯಲ್ಲ, ಅದರ ಜೊತೆಗೆ ಅವರು ಕ್ಯಾಪ್ಟನ್ ಆಗಿ ಒಂದು ವಾರವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನೆರವೇರಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಕ್ಯಾಪ್ಟನ್ ಆದ ನಂತರ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದನ್ನು ಓದಿ..Kannada News: ಗಟ್ಟಿಮೇಳ ಅದಿತಿ ಹಾಗೂ ಪಾರು ಸಿದ್ದು ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ? ನೋಡಲು ಹಾಗೆ ಕಾಣಲ್ಲ ಅಲ್ವ?

ಈ ಸೀಸನ್ ನಲ್ಲಿ ಅಂತಹ ದಾಖಲೆಯನ್ನು ಇದುವರೆಗೆ ಯಾವ ಸ್ಪರ್ಧಿಯು ಮಾಡಿಲ್ಲ ಎನ್ನುವುದು ವಿಶೇಷ. ಮೊದಲೇ ತಿಳಿಸಿದ ಹಾಗೆ ರೂಪೇಶ್ ಶೆಟ್ಟಿ ಕಳೆದ ವಾರದ ಕ್ಯಾಪ್ಟನ್ ಆಗಿದ್ದರು. ಸಾಕಷ್ಟು ವಾರಗಳು ಕಾಲ ಈ ಸ್ಥಾನಕ್ಕಾಗಿ ಅವರು ಪ್ರಯತ್ನಪಟ್ಟಿದ್ದರು. ಕೊನೆಗೂ ಆ ಪ್ರಯತ್ನ ಫಲ ಕೊಟ್ಟಿತು ಎಂದು ಹೇಳಬಹುದು. ಆ ಮೂಲಕ ಅವರ ಆಸೆ ಈಡೇರಿದೆ. ಆದರೆ ಕ್ಯಾಪ್ಟನ್ ಮುಗಿದ ಬಳಿಕ ವಾರದ ಉತ್ತಮ ಆಟಗಾರ ಮತ್ತು ಕಳಪೆ ಆಟಗಾರ ಯಾರು ಎನ್ನುವುದನ್ನು ನಿರ್ಧರಿಸುವಂತೆ ಬಿಗ್ ಬಾಸ್ ಸೂಚಿಸಿತ್ತು. ಪ್ರತಿ ವಾರ ಬಿಗ್ ಬಾಸ್ ನಲ್ಲಿ ಈ ಫಾರ್ಮೆಟ್ ಮಾಡುತ್ತಾ ಬರಲಾಗಿದೆ. ಅದರಂತೆ ಈ ವಾರ ಆರ್ಯವರ್ಧನ್ (Aryavardhan) ಗುರೂಜಿ ಕಳಪೆ ಸ್ಥಾನವನ್ನು ಪಡೆದುಕೊಂಡಿದ್ದಾರೆ ಮತ್ತು ರೂಪೇಶ್ ಶೆಟ್ಟಿ ಉತ್ತಮ ಆಟಗಾರ ಎನ್ನುವ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇದು ಕೇವಲ ಉತ್ತಮ ಸ್ಥಾನ ಎನ್ನುವುದು ಮಾತ್ರವಲ್ಲ ಇದರಲ್ಲಿ ಮತ್ತೊಂದು ದಾಖಲೆ ಇದೆ. ಏನೆಂದರೆ, ಅದರ ಹಿಂದಿನ ವಾರ ಕ್ಯಾಪ್ಟನ್ ಆಗಿದ್ದವರಲ್ಲಿ ನಂತರ ಇದುವರೆಗೆ ಯಾವ ಸ್ಪರ್ದಿಯು ಸಹ ಉತ್ತಮ ಎನ್ನುವ ಪಟ್ಟವನ್ನು ಪಡೆದುಕೊಂಡೇ ಇರಲಿಲ್ಲ. ಸಾಮಾನ್ಯವಾಗಿ ಕಳೆದ ವಾರ ಕ್ಯಾಪ್ಟನ್ ಆಗಿದ್ದವರಲ್ಲಿ ಬಹುತೇಕರು ಅದರ ಮುಂದಿನ ವಾರ ಕಳಪೆ ಪಟ್ಟವನ್ನು ಪಡೆದುಕೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಈ ಸೀಸನ್ ನಲ್ಲಿ ತಂಡದ ನಾಯಕನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಜವಾಬ್ದಾರಿ ಮುಗಿಸಿದ ಬಳಿಕ ಉತ್ತಮ ಸ್ಥಾನ ಪಡೆಯುವ ಮೂಲಕ ಈ ಸೀಸನ್ ನಲ್ಲಿ ಯಾರು ಮಾಡಿರದ ದಾಖಲೆಯನ್ನು ರೂಪೇಶ್ ಶೆಟ್ಟಿ ಮಾಡಿದ್ದಾರೆ. ಇದನ್ನು ಓದಿ.. Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.