Kannada News: ವಿಲ್ಲನ್ ಆಗಿ ಕಾಣಿಸಿಕೊಂಡು ಕೊನೆಯಲ್ಲಿ ಹೀರೋ ಆದ, ಕಿಶೋರ್ ಗೆ ಕಾಂತಾರ ಕೊನೆಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತೆ?

66

Kannada News: ನಟ ಕಿಶೋರ್ (Kishore) ಕಂಚಿನ ಕಂಠದ ಕಲಾವಿದ ಎಂದೇ ಹೆಸರು ಮಾಡಿದ್ದಾರೆ. ಇದುವರೆಗೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ಇಂಡಸ್ಟ್ರಿಗೆ ನೀಡಿರುವ ಅವರು ಹೀರೋ ಮುತ್ತು ವಿಲ್ಲನ್ ಎರಡು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು. ನಟನೆ, ರಂಗಭೂಮಿಯ ಕುರಿತಾಗಿ ಸಾಕಷ್ಟು ಆಸಕ್ತಿ ವಹಿಸಿಕೊಂಡಿದ್ದ ಕಿಶೋರ್ ಕಾಲೇಜು ಶಿಕ್ಷಣ ಮುಗಿಸಿದ ನಂತರ ರಂಗ ಶಿಕ್ಷಣವನ್ನು ಪಡೆದುಕೊಂಡರು. ರಂಗಭೂಮಿಯಲ್ಲಿ ನಟನೆಯ ಕುರಿತಾಗಿ ಪಾಠಗಳನ್ನು ಕಲಿತರು. ಆನಂತರ ಸಿನಿಮಾ ಎಂದರೆ ಹೇಗಿರುತ್ತದೆ? ಚಿತ್ರಗಳನ್ನು ಹೇಗೆ ತಯಾರಿಸಲಾಗುತ್ತದೆ? ಮತ್ತು ಕಲಾವಿದರು ಚಿತ್ರಗಳಲ್ಲಿ ಯಾವ ರೀತಿಯಾಗಿ ನಟಿಸಬೇಕು ಎನ್ನುವುದರ ಕುರಿತಾಗಿ ಅವರಿಗೆ ಅರ್ಥವಾದ ನಂತರ ನಟನೆಗೆ ಇಳಿದರು. ಸದ್ಯ ಅವರ ನಟನೆಯ ಕಾಂತಾರ ಚಿತ್ರ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಇಷ್ಟಕ್ಕೂ ಕಿಶೋರ್ ಈ ಚಿತ್ರಕ್ಕಾಗಿ ಪಡೆದ ಸಂಭಾವನೆ ಎಷ್ಟು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ನಟ ಕಿಶೋರ್ ಚಿತ್ರರಂಗದ ಕುರಿತಾಗಿ ಸಾಕಷ್ಟು ಕಲಿತುಕೊಂಡ ನಂತರ ಅಭಿನಯದ ಕಲೆಯನ್ನು ಕರಗತ ಮಾಡಿಕೊಂಡೆ ಚಿತ್ರರಂಗಕ್ಕೆ ಪ್ರವೇಶಿಸಿದರು. ಆನಂತರ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಒಂದೊಂದೇ ಚಿತ್ರಗಳಲ್ಲಿ ನಟಿಸುತ್ತಾ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದರು. ಸಾಮಾನ್ಯವಾಗಿ ಕಲಾವಿದರು ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಂಡು ಬಿಡುತ್ತಾರೆ. ಆದರೆ ಕಿಶೋರ್ ಅವರ ಅದೃಷ್ಟ ಬೇರೆದೇ ರೀತಿ ಇತ್ತು. ಅವರು ಅನೇಕ ಚಿತ್ರಗಳಲ್ಲಿ ನಾಯಕ ನಟನಾಗಿ ಮಿಂಚಿದ್ದಾರೆ, ಇನ್ನು ಕೆಲವು ಚಿತ್ರಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡು ಜನರಿಗೆ ಇಷ್ಟವಾಗಿದ್ದಾರೆ. ಮೊದಲ ಬಾರಿಗೆ ಅವರು ಕಂಠಿ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಆ ಚಿತ್ರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ನೀಡಿತು. ಆನಂತರ ಅವರು ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಸಾಲು ಸಾಲು ಜನಪ್ರಿಯ ಚಿತ್ರಗಳಲ್ಲಿ ಅವರ ನಟಿಸಿ ತೊಡಗಿದರು. ಕಂಠಿ (Kanti) ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅವರು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡರು. ಇದನ್ನು ಓದಿ..Kannada News: ಜಾನಪದ ಹಾಡಿನ ಮೂಲಕ ಮತ್ತೊಮೆ ವೇದಿಯನ್ನು ಗಡ ಗಡ ನಡುಗಿಸಿದ ದಿಯಾ ಹೆಗ್ಡೆ. ವಿಡಿಯೋ ಹೇಗಿದೆ ಗೊತ್ತೇ?

ಆನಂತರ ಕಿಶೋರ್ ಅವರಿಗೆ ಅವಕಾಶಗಳು ಕೇಳಿಬರತೊಡಗಿದವು. ಅಲ್ಲದೆ ತೆಲುಗಿನ ಚಿತ್ರ ಒಂದರಲ್ಲಿಯೂ ಕೂಡ ಖಡಕ್ ವಿಲನ್ ಹಾಕಿ ಕಿಶೋರ್ ಕಾಣಿಸಿಕೊಂಡರು. ಇದುವರೆಗೆ ಪೊಲೀಸ್ ಅಧಿಕಾರಿಯಾಗಿ, ಆಫೀಸರ್ ಆಗಿ ಹೀಗೆ ಸಾಕಷ್ಟು ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ನಟನೆಯನ್ನು ಮೆರೆದಿದ್ದಾರೆ. ಇನ್ನು ಇತ್ತೀಚಿಗೆ ತೆರೆಕಂಡು ಭಾರಿ ಸದ್ದು ಮಾಡುತ್ತಿರುವ ಕಾಂತಾರ ಚಿತ್ರದಲ್ಲಿ ಕಿಶೋರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೇವಲ ರಿಷಬ್ ಶೆಟ್ಟಿ (Rishab Shetty) ಮತ್ತು ಸಪ್ತಮಿ ಗೌಡ (Sapthami Gowda) ಅವರಿಗೆ ಜನರು ಪ್ರಶಂಸೆ ವ್ಯಕ್ತಪಡಿಸುವುದು ಮಾತ್ರವಲ್ಲದೆ ಕಿಶೋರ್ ಅವರ ನಟನೆಗೂ ಕೂಡ ಜನರು ಮನಸೋತಿದ್ದಾರೆ. ಇನ್ನು ಈ ಚಿತ್ರದ ಅಭಿನಯಕ್ಕಾಗಿ ಕಿಶೋರ್ ಅವರು ಪಡೆದಿರುವ ಸಂಭಾವನೆ ಎಷ್ಟು ಎನ್ನುವುದು ಗೊತ್ತೇ? ಈ ಒಂದು ಚಿತ್ರದಲ್ಲಿ ಅಭಿನಯಿಸಲು ಕಿಶೋರ್ ಅವರಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ಸಂಭಾವನೆಯನ್ನು ನೀಡಲಾಗಿದೆಯಂತೆ. ಹೌದು ಕಿಶೋರ್ ಅವರು ಕಾಂತಾರ ಚಿತ್ರದ ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಳ್ಳುವುದಕ್ಕಾಗಿ 20 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ.. Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.