Kannada News: ಕಾಂತಾರ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಋತಿಕ್ ರೋಷನ್ ಅನ್ನು ಬಾರಿ ಟ್ರೊಲ್ ಮಾಡಿ ಬಿಟ್ಟ ನೆಟ್ಟಿಗರು. ಯಾಕೆ ಅಂತೇ ಗೊತ್ತೇ?
Kannada News: ಕಾಂತಾರ (Kantara) ಭಾಷೆ, ಗಡಿಗಳ ಎಲ್ಲೆ ಇಲ್ಲದೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಭಾರತದ ಸ್ಟಾರ್ ಕಲಾವಿದರ ಪೈಕಿ ಅವರನ್ನು ನೋಡಲಾಗುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಚಿತ್ರ ಎನ್ನುವ ಹೆಗ್ಗಳಿಕೆ ಕಾಂತಾರ ಪಡೆದುಕೊಂಡಿದ್ದು, ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ತುಳು ಭಾಷೆಗಳಲ್ಲಿ ಭರ್ಜರಿಯಾಗಿ ತೆರೆಕಂಡು ಗಲ್ಲ ಪೆಟ್ಟಿಗೆ ಲೂಟಿ ಮಾಡುತ್ತಿದೆ. ಈಗಾಗಲೇ ಕಾಂತರಾ 400 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಕಂಡಿದೆ. ಕೇವಲ ಸಾಮಾನ್ಯ ವೀಕ್ಷಕರು ಮಾತ್ರವಲ್ಲದೆ ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳು ಕೂಡ ಕಾಂತಾರ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ನಟ ಹೃತಿಕ್ ರೋಷನ್ ಕಾಂತರವನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. ಆದರೆ ಅವರು ಟ್ವೀಟ್ ಮಾಡಿದೆ ತಡ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂತರಾ ಚಿತ್ರವನ್ನು ಕೇವಲ ಸಾಮಾನ್ಯ ಪ್ರೇಕ್ಷಕ ಮಾತ್ರವಲ್ಲದೆ ಭಾರತದ ಸೆಲೆಬ್ರೇಟ್ ಗಳು ಮೆಚ್ಚಿಕೊಂಡು ಹೊಗಳುತ್ತಿದ್ದಾರೆ. ನಟ ಪ್ರಭಶ್, ವಿಶಾಲ್, ಧನುಷ್, ರಜಿನಿಕಾಂತ್, ಕಮಲ್ ಹಾಸನ್, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರು ಈ ಚಿತ್ರಕ್ಕೆ ಮನ ಸೋತಿದ್ದಾರೆ. ಅಲ್ಲದೆ ಚಿತ್ರದ ಕ್ಲೈಮ್ಯಾಕ್ಸ್ ಭಾಗವನ್ನು ಜನ ಹೆಚ್ಚಾಗಿ ಇಷ್ಟಪಟ್ಟಿದ್ದರು. ಇನ್ನೂ ಇತ್ತೀಚಿಗಷ್ಟೇ ಓಟಿಪಿಯಲ್ಲಿ ನಟ ಹೃತಿಕ್ ರೋಷನ್ (Hrithik Roshan) ಕಾಂತಾರ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರು ಟ್ವೀಟ್ ಮುಖಾಂತರ ಬರೆದುಕೊಂಡಿದ್ದಾರೆ. “ಕಾಂತರಾ ಬಹಳ ಚೆನ್ನಾಗಿದೆ, ತುಂಬಾ ಅದ್ಭುತವಾದ ಚಿತ್ರ, ಗೂಸ್ ಬಂಪ್ ಬರುವಂತಿದೆ. ನನಗೆ ಬಹಳ ಇಷ್ಟವಾಯಿತು. ಈ ಚಿತ್ರ ನೋಡಿ ನಾನಂತೂ ರೋಮಾಂಚನಗೊಂಡೆ” ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ಓದಿ..Kannada News: ಜಾನಪದ ಹಾಡಿನ ಮೂಲಕ ಮತ್ತೊಮೆ ವೇದಿಯನ್ನು ಗಡ ಗಡ ನಡುಗಿಸಿದ ದಿಯಾ ಹೆಗ್ಡೆ. ವಿಡಿಯೋ ಹೇಗಿದೆ ಗೊತ್ತೇ?

ಆದರೆ ಇವರು ಟ್ವೀಟ್ ಮಾಡಿದ ತಕ್ಷಣವೇ ನೆಟ್ಟಿಗರು ಸಾಕಷ್ಟು ಜನ ಈ ಕುರಿತಾಗಿ ಟೀಕೆ ಮಾಡಿದ್ದಾರೆ. ಸುಮ್ಮನೆ ಏನೇನೋ ಕಥೆ ಹೇಳಬೇಡಿ. ಚಿತ್ರ ಬಿಡುಗಡೆಯಾಗಿ ಇಷ್ಟು ದಿನಗಳ ನಂತರ ಚಿತ್ರ ನೋಡಿದ್ದೀರಿ, ಅದು ಸಹ ಚಿತ್ರಮಂದಿರದಲ್ಲಿ ಅಲ್ಲ, ಓಟಿಟಿಯಲ್ಲಿ ನೋಡಿದ್ದೀರಿ. ಅಂತ ಯಾವ ಅನುಭವವಾಗುತ್ತದೆ? ಚಿತ್ರಮಂದಿರದಲ್ಲಿ ನೋಡಿದರೆ ನಿಮಗೆ ಚಿತ್ರದ ನಿಜವಾದ ಸೌಂದರ್ಯ ಅರ್ಥವಾಗುತ್ತಿತ್ತು. ಆದರೆ ಮನೆಯಲ್ಲಿ ಕುಳಿತು ಚಿತ್ರವನ್ನು ಹೇಗೆ ಸವಿಯಲು ಸಾಧ್ಯ. ಇಷ್ಟು ದಿನಗಳಿಂದ ಚಿತ್ರ ನೋಡಲು ನಿಮಗೆ ಬಿಡುವೆ ಆಗಲಿಲ್ಲವೇ? ಎಂದು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಲ್ಲದೆ ಇಷ್ಟು ದಿನಗಳಾದ ಮೇಲೆ ಕಾಂತಾರ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಇವರಿಗೂ ಕೂಡ ಹೊಂಬಾಳೆ ಫಿಲಂಸ್ ಜೊತೆ ಕೆಲಸ ಮಾಡುವ ಆಸೆ ಆಗಿರಬೇಕು. ಹಾಗಾಗಿ ಅವರನ್ನು ಒಲೈಕೆ ಮಾಡುವ ಪ್ರಯತ್ನದಲ್ಲಿ ತಡವಾಗಿ ಆದರೂ ಚಿತ್ರದ ಬಗ್ಗೆ ಮಾತನಾಡಿದ್ದಾರೆ ಎಂದು ಜನ ಟೀಕೆ ಮಾಡಿದ್ದಾರೆ. ಇದನ್ನು ಓದಿ.. Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.