Kannada News: ಜಾನಪದ ಹಾಡಿನ ಮೂಲಕ ಮತ್ತೊಮೆ ವೇದಿಯನ್ನು ಗಡ ಗಡ ನಡುಗಿಸಿದ ದಿಯಾ ಹೆಗ್ಡೆ. ವಿಡಿಯೋ ಹೇಗಿದೆ ಗೊತ್ತೇ?
Kannada News: ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ (Saregama Little Champs) ಸೀಸನ್ 19 ರಿಯಾಲಿಟಿ ಶೋ ಭರ್ಜರಿಯಾಗಿ ನಡೆಯುತ್ತಿದೆ. ವಾರದಿಂದ ವಾರಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ, ವಿವಿಧ ಕಾರಣಗಳಿಗೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ ಎಂದೇ ಹೇಳಬಹುದು. ಪುಟಾಣಿ ಮಕ್ಕಳು ಹಾಡುವ ಈ ಕಾರ್ಯಕ್ರಮ ಕನ್ನಡಿಗರ ಮೆಚ್ಚಿನ ಶೋ ಆಗಿದೆ. ಪ್ರತಿಯೊಂದು ಮಗುವು ಕೂಡ ಟ್ಯಾಲೆಂಟೆಡ್ ಆಗಿದ್ದು ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಸ್ಪರ್ದಿಯಾಗಿರುವ ಮುದ್ದು ಪುಟಾಣಿ ದಿಯಾ ಹೆಗಡೆ (Diya Hegde) ಈ ಕಾರ್ಯಕ್ರಮದ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾಳೆ ಎಂದು ಹೇಳಬಹುದು. ಪ್ರತಿವಾರವೂ ಈಕೆ ಯಾವ ಹಾಡನ್ನು ಆಡುತ್ತಾಳೆ, ಹೇಗೆ ಮಾತನಾಡುತ್ತಾಳೆ ಎನ್ನುವುದನ್ನು ಕೇಳಲು ಅಭಿಮಾನಿಗಳು ಕಾದಿರುತ್ತಾರೆ, ಅಷ್ಟರಮಟ್ಟಿಗೆ ದಿಯಾ ಹೆಗಡೆ ಫೇಮಸ್ ಆಗಿದ್ದಾಳೆ. ಇದೀಗ ಮತ್ತೊಂದು ಜಾನಪದ ಹಾಡಿನ ಮೂಲಕ ದಿಯಾ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಮೆಗಾ ಆಡಿಶನ್ ಸಂದರ್ಭದಲ್ಲಿ ಅದ್ಬುತವಾಗಿ ಹಾಡುವ ಮೂಲಕ ದಿಯಾ ಆಯ್ಕೆ ಆಗಿದ್ದಳು. ಇದೇ ವೇಳೆ ಒಂದು ವಿಭಿನ್ನ ರೀತಿಯಲ್ಲಿ ಕತೆ ಹೆಣೆಯುವ ಮೂಲಕ ಎಲ್ಲರೂ ಮೆಚ್ಚುಗೆ ಪಾತ್ರಳಾಗಿದ್ದಳು. ನಂತರ ಪ್ರತಿ ವಾರವು ಭಿನ್ನ ವಿಭಿನ್ನ ರೀತಿಯ ಹಾಡುಗಳನ್ನು ಆಯ್ದುಕೊಂಡು ತೀರ್ಪುಗಾರರನ್ನು ಮೆಚ್ಚಿಸುವಲ್ಲಿ ದಿಯಾ ಮೊದಲಿಗಳಾಗಿದ್ದಾಳೆ. ಕಳೆದ ವಾರ ಈ ರಿಯಾಲಿಟಿ ಶೋನಲ್ಲಿ ದೊಡ್ಮನೆ ವೈಭವ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂಚಿಕೆಯಲ್ಲಿ ಡಾ. ರಾಜ್ (Dr RAjkumar) ಕುಟುಂಬವನ್ನು ಸಂಭ್ರಮಿಸುವ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಈ ವೇಳೆ ದಿಯಾ ಹೆಗಡೆ ಹಾಡಿರುವ ಡಾಕ್ಟರ್ ರಾಜ್ ಕುಮಾರ್ ಕುರಿತ ಒಂದು ವಿಶೇಷ ಹಾಡು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಡಾಕ್ಟರ್ ರಾಜಕುಮಾರ್ ಕುರಿತಾಗಿ ಸ್ವತಹ ವಿಭಿನ್ನ ರೀತಿಯಲ್ಲಿ ಹಾಡು ಕಟ್ಟಿ, ಹಾಡು ಬರೆದು ದಿಯಾ ಹಾಡಿದ್ದಾಳೆ. ಇದನ್ನು ಓದಿ..Kannada News: ಇದೇನ್ ಡ್ರೆಸ್ ಗುರು: ಹಾಕಿಕೊಂಡರು ಪ್ರಯೋಜನ ಇಲ್ಲ. ಎಲ್ಲವನ್ನು ಪ್ರದರ್ಶನಕ್ಕೆ ಇಟ್ಟ ಟಾಪ್ ನಟಿ. ಫೋಟೋಸ್ ಹೇಗಿದೆ ಗೊತ್ತೇ??

ಇದಲ್ಲದೆ ಕೆಲವು ವಾರಗಳ ಹಿಂದೆ ಅಜ್ಜಿಯ ಧ್ವನಿಯಲ್ಲಿ ದಿಯಾ ಆಡಿದ ಹಾಡು ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಈ ವಿಡಿಯೋ ವೈರಲ್ ಆಗಿತ್ತು. ನೆಟ್ಟಿಗರು, ಟ್ರೋಲ್ ಪೇಜ್ ಗಳು, ಅಭಿಮಾನಿಗಳು ದಿಯಾ ಹಾಡಿನ ಮೋಡಿಗೆ ಮನಸೋತಿದ್ದರು. ತಾನು “ನಾನು ಮುದುಕಿ ಆದರೇನಂತೆ ಇನ್ನೂ ಇರಾಕಿ, ನನ್ನ ಮಗನ ಮಗನ ಮಗನ ಮದುವೆ ಮಾಡಾಕಿ” ಎಂಬ ರೀತಿಯ ಜಾನಪದ ಶೈಲಿಯಲ್ಲಿ ಹಾಡಿದ್ದ ಹಾಡು ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಸೊಸೆಯಾಗಿ ಅನುಶ್ರೀಯನ್ನೇ ತನ್ನ ಮೊಮ್ಮಗನಿಗೆ ಮದುವೆ ಮಾಡುತ್ತೇನೆ ಎನ್ನುವ ಅರ್ಥದಲ್ಲಿ ದೀಯಾ ಹಾಡಿದಳು. ಆನಂತರ ಅನುಶ್ರೀ ಆಗಿದ್ದರೆ ನಿಮ್ಮ ಮೊಮ್ಮಗ ಯಾರು ಎಂದು ಪ್ರಶ್ನಿಸಿದಾಗ, “ನನ್ನ ಮೊಮ್ಮಗ ತುಂಬಾ ಜಾಣ ಇದ್ದಾನೆ, ಒಳ್ಳೊಳ್ಳೆ ಮ್ಯೂಸಿಕ್ ಮಾಡ್ತಾನೆ’ ಎಂದು ಅರ್ಜುನ್ ಜನ್ಯ ಕಡೆಗೆ ತೋರಿಸಿ ತರ್ಲೆ ಮಾಡಿದ್ದಳು. ಈ ಒಂದು ಜಾನಪದ ಶೈಲಿಯ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದನ್ನು ಓದಿ.. Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.