Kannada News: ಆಗ ತಾಳಲಾರದೆ ಸಾಕಷ್ಟು ಅಳುತ್ತಿದ್ದೆ, ಎಂದು ಚಿತ್ರರಂಗದ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ಮೇಘನ್ ರಾಜ್. ಶೇಕ್ ಆದ ಚಿತ್ರರಂಗ.

38

Kannada News: ಚಿತ್ರರಂಗದಲ್ಲಿ ಗುರುತಿಸಿಕೊಂಡು ಒಳ್ಳೆಯ ಹೆಸರು ಮಾಡಿ ಸ್ಟಾರ್ ಕಲಾವಿದರ ಮಟ್ಟಕ್ಕೆ ಬೆಳೆಯುವುದು ಅಷ್ಟು ಸುಲಭದ ಮಾತೇ ಅಲ್ಲ. ಇಲ್ಲಿ ಸ್ಪರ್ಧೆ ಇದೆ, ಹಾಗೆ ಸಾಕಷ್ಟು ಸವಾಲುಗಳು ಇವೆ. ಸಾಮಾನ್ಯವಾಗಿ ಬಹುತೇಕ ಎಲ್ಲಾ ನಟ ನಟಿಯರು ತಮ್ಮ ಸಿನಿಮಾ ವೃತ್ತಿ ಜೀವನದ ಅವಧಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು, ನೋವುಗಳನ್ನು, ಅಪಮಾನಗಳನ್ನು ಎದುರಿಸುತ್ತಿರುತ್ತಾರೆ. ಕೆಲವರು ಇದನ್ನು ಒಳಗೊಳಗೆ ಸಹಿಸಿಕೊಂಡರೆ ಇನ್ನೂ ಕೆಲವರು ತಾವು ಅನುಭವಿಸಿದ ಅಪಮಾನಗಳನ್ನು ಜನರ ಮುಂದೆ ತಿಳಿಸುತ್ತಾರೆ. ಅದರಲ್ಲೂ ಸಾಮಾನ್ಯವಾಗಿ ನಟಿಯರಿಗೆ ಸಾಕಷ್ಟು ಸವಾಲುಗಳು, ಅಪಮಾನಗಳು ಎದುರಾಗುತ್ತವೆ. ಅವರ ಸೌಂದರ್ಯ, ವ್ಯಕ್ತಿತ್ವ, ದೇಹದ ಬಗ್ಗೆ ಸಾಕಷ್ಟು ಅಪಮಾನಗಳನ್ನು ಅವರಿಗೆ ಎದುರಿಸುತ್ತಿರುತ್ತಾರೆ. ಇತ್ತೀಚಿಗೆ ನಟಿ ಮೇಘನಾ ರಾಜ್ ತಾವು ಅನುಭವಿಸಿದ ಅಪಮಾನ ಹಾಗೂ ಬಾಡಿ ಶೇಮಿಂಗ್ ಕುರಿತಾಗಿ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನಟಿ ಮೇಘನಾ ರಾಜ್ (Meghana Raj) ಕನ್ನಡದ ಪ್ರಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕಿರುತೆರೆಯಲ್ಲಿ ಕೂಡ ಅವರು ಬಿಸಿಯಾಗಿದ್ದಾರೆ. ನಟಿ ಮೇಘನಾ ರಾಜ್ ಇತ್ತೀಚಿಗೆ ಹಿಂದಿ youtube ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಇದರಲ್ಲಿ ಅವರು ತಮ್ಮ ಸಿನಿಮಾ ಜೀವನ ವೃತ್ತಿ ಜೀವನ, ಅನುಭವಿಸಿದ ಅಪಮಾನಗಳು, ಕುಟುಂಬದವರ ಪ್ರೋತ್ಸಾಹ, ಪತಿ ಚಿರಂಜೀವಿ ಸರ್ಜಾ (Chiranjeevi Sarja), ಸಹೋದ್ಯೋಗಿಗಳು, ಸಹ ಕಲಾವಿದರು ಹೀಗೆ ಹಲವಾರು ವಿಷಯಗಳು ಕುರಿತಾಗಿ ಮಾತನಾಡಿದ್ದಾರೆ. ಈ ಒಂದು ಸಂದರ್ಶನ ಎರಡು ಭಾಗಗಳಾಗಿ ಪ್ರಸಾರ ಕಂಡಿದ್ದು, ಅದರ ಎರಡನೇ ಆವೃತ್ತಿ ಇತ್ತೀಚಿಗಷ್ಟೇ youtube ಚಾನೆಲ್ನಲ್ಲಿ ಪ್ರಸಾರವಾಗಿದೆ. ಈ ವೇಳೆ ಅವರು ಚಿತ್ರರಂಗಕ್ಕೆ ಬಂದ ನಂತರ ಅನುಭವಿಸಿದ ನೋವು ಅಪಮಾನಗಳ ಕುರಿತಾಗಿ ಹೇಳಿಕೊಂಡಿದ್ದಾರೆ. ಅವರ ದೇಹ, ಬಣ್ಣ, ಚರ್ಮ, ಸೌಂದರ್ಯ, ತೂಕ ಇತ್ಯಾದಿ ಹಲವಾರು ಅಂಶಗಳ ಬಗ್ಗೆ ಚಿತ್ರರಂಗದವರು ಟೀಕಿಸುತ್ತಿದ್ದದ್ದು, ಗೇಲಿ ಮಾಡುತ್ತಿದ್ದದ್ದನ್ನು ನೆನಪಿಸಿಕೊಂಡು ದುಃಖಿಸಿದ್ದಾರೆ. ಇದನ್ನು ಓದಿ..Kannada News: ವೈಟ್ ಡ್ರೆಸ್ ನಲ್ಲಿ ತಮನ್ನಾ ರವರ ಅಂದ ನೋಡಿದರೇ, ಚಳಿಯಲ್ಲೂ ಮೈ ಬಿಸಿಯಾಗುವುದು ಪಕ್ಕ.

ಅಲ್ಲದೆ ಈ ಎಲ್ಲಾ ಅಪಮಾನಗಳನ್ನು ಒಬ್ಬಳೆ ಸಹಿಸಿಕೊಂಡು ಒಂಟಿಯಾಗಿ ಬಿಕ್ಕಿಬಿಕ್ಕಿ ಅದೆಷ್ಟು ದಿನ ಕಣ್ಣೀರು ಹಾಕಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಸಿನಿ ಜೀವನದಲ್ಲಿ ಅನುಭವಿಸಿದ ಅಪಮಾನಗಳ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಹಂಚಿಕೊಂಡಿರುವ ನಟಿ ಮೇಘನಾ ರಾಜ್ ಬಾಡಿ ಶೇಮಿಂಗ್ ಬಗ್ಗೆ ಹೇಳಿದ್ದಾರೆ. ನಟಿಯಾಗಲು ಅರ್ಹತೆಯೇ ಇಲ್ಲ, ತುಂಬಾ ದಪ್ಪಗಿದ್ದಾಳೆ, ನೋಡಲು ಚೆನ್ನಾಗಿಲ್ಲ, ಚರ್ಮ ಸರಿ ಇಲ್ಲ, ಇವಳು ಯಾವ ಸೀಮೆಯ ನಟಿ, ಹಾಗೆ ಹೀಗೆ ಎಂದೆಲ್ಲ ಅವರು ಅಪಮಾನವನ್ನು ಎದುರಿಸಿದ್ದಾರೆ. ಸ್ವತಃ ಚಿತ್ರರಂಗದವರೇ ಇವರಿಗೆ ಸಾಕಷ್ಟು ನೋವು ನೀಡಿದ್ದಾರಂತೆ. ಮೇಕಪ್ ಮಾಡುವವರು ಸಹ ಮೇಘನಾ ರಾಜ್ ಅವರನ್ನು ಅಪಮಾನಿಸುತ್ತಿದ್ದರಂತೆ. ಇದೆಲ್ಲವನ್ನು ಒಬ್ಬರೇ ಸಹಿಸಿಕೊಂಡು ಒಂಟಿಯಾಗಿ ಅಳುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ರೀತಿಯಾಗಿ ತಾವು ಅನುಭವಿಸಿದ ಯಾತನೆ, ನೋವುಗಳ ಬಗ್ಗೆ ಮೇಘನಾ ರಾಜ್ ಮೊದಲ ಬಾರಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದನ್ನು ಓದಿ.. Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.