Kannada News: ಕಾಂತಾರ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, 2022 ರಲ್ಲಿ ತನ್ನ ಮನಗೆದ್ದ ನಾಲ್ಕು ಚಿತ್ರಗಳನ್ನು ಆಯ್ಕೆ ಮಾಡಿದ್ದು ಹೇಗೆ ಗೊತ್ತೇ?
Kannada News: ಕಾಂತಾರ (Kantara) ಚಿತ್ರದ ಕಾರಣದಿಂದಾಗಿ ರಿಷಬ್ ಶೆಟ್ಟಿ (Rishab Shetty) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಕಾಂತಾರ ಭಾಷೆ, ಗಡಿಗಳ ಎಲ್ಲೆ ಇಲ್ಲದೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಭಾರತದ ಸ್ಟಾರ್ ಕಲಾವಿದರ ಪೈಕಿ ಅವರನ್ನು ನೋಡಲಾಗುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಚಿತ್ರ ಎನ್ನುವ ಹೆಗ್ಗಳಿಕೆ ಕಾಂತಾರ ಪಡೆದುಕೊಂಡಿದ್ದು, ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ತುಳು ಭಾಷೆಗಳಲ್ಲಿ ಭರ್ಜರಿಯಾಗಿ ತೆರೆಕಂಡು ಗಲ್ಲ ಪೆಟ್ಟಿಗೆ ಲೂಟಿ ಮಾಡುತ್ತಿದೆ. ಈಗಾಗಲೇ ಕಾಂತರಾ 400 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಕಂಡಿದೆ. ಕೇವಲ ಸಾಮಾನ್ಯ ವೀಕ್ಷಕರು ಮಾತ್ರವಲ್ಲದೆ ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳು ಕೂಡ ಕಾಂತಾರ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ರಿಷಭ್ ನೀಡಿದ ಸಂದರ್ಶನ ಬಂದರಲ್ಲಿ ಅವರು ಈ ವರ್ಷ ನೋಡಿದ ಅತ್ಯುತ್ತಮ ಟಾಪ್ 4 ಚಿತ್ರಗಳು ಯಾವ್ಯಾವು ಎನ್ನುವುದನ್ನು ತಿಳಿಸಿದ್ದಾರೆ.
ಚಿತ್ರ ಬಿಡುಗಡೆಯಾಗಿ ಎರಡುವರೆ ತಿಂಗಳುಗಳ ಕಳೆದರೂ ಕಾಂತಾರದ ಕ್ರೇಜಿ ಇನ್ನೂ ಕಡಿಮೆಯಾಗಿಲ್ಲ. ಎಷ್ಟೋ ಜನರು ಚಿತ್ರವನ್ನು ಮತ್ತೆ ಮತ್ತೆ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರಮಂದಿರಗಳು ಜನರನ್ನು ಸೆಳೆಯುತ್ತಿದೆ. ಓ ಟಿ ಟಿ ಯಲ್ಲೂ ಕಾಂತಾರ ಸದ್ದು ಮಾಡುತ್ತಿದೆ. ಇತ್ತೀಚಿಗೆ ಕಾಂತರಾ ಹಿಂದಿ ನೆಟ್ ಫಿಕ್ಸ್ (Netflix) ನಲ್ಲಿ ತೆರೆಕಂಡಿದೆ. ಈ ಕುರಿತಾಗಿ ಹಿಂದಿ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ರಿಷಭ್ ಅವರಿಗೆ ನೀವು ಈ ವರ್ಷ 2022ರಲ್ಲಿ ನೋಡಿದ ಅತ್ಯುತ್ತಮ ಟಾಪ್ 4 ಚಿತ್ರಗಳು ಯಾವ್ಯಾವು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿ ಈ ವರ್ಷ ತಮಗೆ ಇಷ್ಟವಾದ ಆ ನಾಲ್ಕು ಅತ್ಯುತ್ತಮ ಚಿತ್ರಗಳು ಯಾವ್ಯಾವು ಎನ್ನುವುದನ್ನು ಹೇಳಿದ್ದಾರೆ. ಮೊದಲನೆಯದಾಗಿ ಅವರು ಪುನೀತ್ ರಾಜಕುಮಾರ್ (Puneeth Rajkumar) ಅವರ ಗಂಧದಗುಡಿ ಚಿತ್ರವನ್ನು ತೆಗೆದುಕೊಂಡಿದ್ದಾರೆ. ನಾನು ಈ ವರ್ಷ ನೋಡಿದ ಅತ್ಯುತ್ತಮ ಚಿತ್ರವೆಂದರೆ ಅದು ಗಂಧದಗುಡಿ. ಇದು ಒಂದು ಬಗೆಯ ಡಾಕ್ಯುಮೆಂಟರಿ ಆಗಿತ್ತು. ಹಾಗೂ ನಮ್ಮೆಲ್ಲರ ಪ್ರೀತಿಯ ಪುನೀತ್ ಅವರ ಕನಸಿನ ಚಿತ್ರವಾಗಿತ್ತು. ಇದು ನನಗೆ ವೈಯಕ್ತಿಕವಾಗಿ ಕನೆಕ್ಟ್ ಆಯಿತು. ಇದು ನಾನು ಬಹಳ ಇಷ್ಟ ಪಟ್ಟ ಚಿತ್ರವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಓದಿ..Kannada News: ಸಾಕಷ್ಟು ಸುಳ್ಳು ಮಾಹಿತಿಗಳ ನಡುವೆ, ನೇರವಾಗಿ ಕಾಂತಾರ ಸಿನೆಮಾಗೆ ರಿಷಬ್ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇದು ಚಿಲ್ಲರೆ ಎಂದ ಫ್ಯಾನ್ಸ್.

ಎರಡನೆಯದಾಗಿ ತಮಿಳಿನಲ್ಲಿ ಇತ್ತೀಚಿಗೆ ತೆರೆಕಂಡ ಲವ್ ಟುಡೇ (Love Today) ಇಷ್ಟವಾಯಿತು. ಈ ಚಿತ್ರವು ಚೆನ್ನಾಗಿದೆ ಎಂದು ಹೇಳಿದ್ದಾರೆ. ಇನ್ನು ಮೂರನೇ ಚಿತ್ರವಾಗಿ ಅವರು 777 ಚಾರ್ಲಿ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸ್ನೇಹಿತನ ಪರವಾಗಿ ರಕ್ಷಿತ್ (Rakshit Shetty) ಚಿತ್ರವನ್ನು ತೆಗೆದುಕೊಂಡಿದ್ದೇನೆ ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದು ಅವರು ನಗುತ್ತಾ ಉತ್ತರಿಸಿದ್ದಾರೆ. ಇನ್ನು ನಾಲ್ಕನೆಯದಾಗಿ ನನಗೆ ಕೆಜಿಎಫ್ (KGF) ಚಿತ್ರ ಬಹಳ ಇಷ್ಟವಾಯಿತು. ಕನ್ನಡ ಚಿತ್ರರಂಗದ ಯಶಸ್ಸು ಶುರುವಾಗಿದ್ದೇ ಈ ಚಿತ್ರದಿಂದಾಗಿ. ಇದು ದೊಡ್ಡ ಮಟ್ಟದ ದಾಖಲೆಯಲ್ಲಿ ನಿರ್ಮಿಸಿದೆ. ಈ ಚಿತ್ರವು ನನಗೆ ಬಹಳ ಇಷ್ಟವಾಯಿತು ಎಂದು ಅವರು ತಿಳಿಸಿದ್ದಾರೆ. ಆ ಮೂಲಕ ಅವರು 2022 ರಲ್ಲಿ ತಮಗೆ ಇಷ್ಟವಾದ ನಾಲ್ಕು ಚಿತ್ರಗಳನ್ನು ಹೆಸರಿಸಿದ್ದಾರೆ. ಗಂಧದಗುಡಿ, ಲವ್ ಟುಡೇ, ಚಾರ್ಲಿ (Charlie) ಮತ್ತು ಕೆಜಿಎಫ್ ಚಿತ್ರಗಳನ್ನು ತಮಗೆ ಈ ವರ್ಷ ಇಷ್ಟವಾದ ಅತ್ಯುತ್ತಮ ಚಿತ್ರಗಳ ಪಟ್ಟಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಕಾಂತಾರ 2 ಚಿತ್ರದ ಬಗ್ಗೆ ತಯಾರಿಗಳು ನಡೆಯುತ್ತಿದ್ದು, ಈಗಾಗಲೇ ಪಂಜುರ್ಲಿ ದೈವದ ಅನುಮತಿಯನ್ನು ಪಡೆಯಲಾಗಿದೆ ಎಂದು ವರದಿಯಾಗಿದೆ. ಇದನ್ನು ಓದಿ.. Kannada Astrology: ನಿಮ್ಮನ್ನು ಹಣ ಹುಡುಕಿಕೊಂಡು ಬರಬೇಕು, ಲಕ್ಷ್ಮಿ ದೇವಿ ಆಶೀರ್ವಾದ ಬೇಕು ಎಂದರೆ, ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿ.