Kannada News: ಕೊನೆಗೂ ಮಹದೇಶ್ವರ ಬೆಟ್ಟಕ್ಕೆ ಒಳ್ಳೆಯ ದಿನಗಳು ಆರಂಭ: ಮಹತ್ವದ ಯೋಜನೆ ಘೋಷಿಸಿದ ಸಿಎಂ: ಎಷ್ಟು ಕೋಟಿ ಗೊತ್ತೇ??
Kannada News: ಮಹದೇಶ್ವರ ಬೆಟ್ಟವು (Mahadeshwara Betta) ಕರ್ನಾಟಕದ ಜನಪ್ರಿಯ ಧಾರ್ಮಿಕ ಕ್ಷೇತ್ರವಾಗಿದೆ. ನಿತ್ಯವೂ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಮಾದೇಶ್ವರನ ಸನ್ನಿಧಿಗೆ ಆಗಮಿಸುತ್ತಾರೆ. ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಇಷ್ಟು ಪ್ರಸಿದ್ಧವಾದ ಈ ಪುಣ್ಯಕ್ಷೇತ್ರದ ಸುತ್ತಲ ರಸ್ತೆಗಳು ಪ್ರಯಾಣಿಕರಿಗೆ ಅಷ್ಟು ಸಮರ್ಪಕವಾಗಿರಲಿಲ್ಲ. ಇದೀಗ ಮಾದೇಶ್ವರ ಬೆಟ್ಟದ ರಸ್ತೆಗಳ ಅಭಿವೃದ್ಧಿಗೆ ಒಳ್ಳೆಯ ಗಳಿಗೆ ಬಂದಿದೆ. ರಾಜ್ಯ ಸರ್ಕಾರವು ಇದಕ್ಕಾಗಿ ಅನುದಾನ ಬಿಡುಗಡೆ ಮಾಡಿದೆ. ಮಾದೇಶ್ವರ ಬೆಟ್ಟ ಪುಣ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯ ಬಸವರಾಜ ಬೊಮ್ಮಾಯಿ (Basavaraj Bommai) ಯೋಜನೆ ಅನುಷ್ಠಾನಗೊಳಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾರ್ಯ ಆರಂಭ ಆಗಲಿದೆ. ಅದರಂತೆ ಮಾದೇಶ್ವರ ಬೆಟ್ಟದ ಅಭಿವೃದ್ಧಿ ಕಾರ್ಯಾ ಸಾಗಲಿದೆ ಎಂದು ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇತ್ತೀಚಿಗೆ ಚಾಮರಾಜನಗರದಲ್ಲಿ (Chamarajanagar) ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರು ಸಂತಸ ವ್ಯಕ್ತಪಡಿಸುತ್ತಾ ಮಾತನಾಡಿದರು. “ಎಲ್ಲರೂ ಚಾಮರಾಜನಗರಕ್ಕೆ ಹೋಗುವುದು ರಾಜಕೀಯ ಭವಿಷ್ಯವಾಗಿ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಎಲ್ಲರೂ ಅದನ್ನೇ ನಂಬಿದ್ದಾರೆ, ಆದರೆ ನನಗೆ ಆ ವಿಷಯದ ಮೇಲೆ ನಂಬಿಕೆ ಇಲ್ಲ. ಇಲ್ಲಿಗೆ ಯಾರು ಬರುವುದಿಲ್ಲವೋ ಅವರು ದೌರ್ಭಾಗ್ಯ ಶಾಲಿಗಳು. ಎಂತಹ ಒಳ್ಳೆಯ ಸ್ಥಳವಿದು, ಎಂತಹ ಅದ್ಭುತ ಜನರು ಇದ್ದೀರಿ. ನಿಮ್ಮ ಪ್ರೀತಿಯಿಂದ ನೀವು ನನ್ನನ್ನು ಗೆದ್ದು ಬಿಟ್ಟಿದ್ದೀರಿ” ಎಂದು ಬಸವರಾಜ ಬೊಮ್ಮಾಯಿ ಭಾಷಣದ ವೇಳೆ ಹೇಳಿದ್ದರು. ಇದೇ ವೇಳೆ ಚಾಮರಾಜನಗರ ಸೇರಿದಂತೆ ರಾಜ್ಯದ ಎಲ್ಲಾ ಗಡಿ ಗ್ರಾಮಗಳ ಅಭಿವೃದ್ಧಿಗಾಗಿ ಹಣ ಮಂಜೂರು ಮಾಡುವುದಾಗಿ ತಿಳಿಸಿದರು. ಇದನ್ನು ಓದಿ..Health Tips: ಈ ಮೂರು ಪದಾರ್ಥಗಳನ್ನು ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚಿ ನೋಡಿ, ಉದ್ದ, ದಟ್ಟ ಕೂದಲು ನಿಮ್ಮದಾಗುತ್ತದೆ.

ಜೊತೆಗೆ ಮಾದೇಶ್ವರ ಬೆಟ್ಟ ಪುಣ್ಯಕ್ಷೇತ್ರದ ಅಭಿವೃದ್ಧಿಗಾಗಿಯೂ ಕೂಡ ಅವರು ಯೋಜನೆ ರೂಪಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು. ಈ ಪುಣ್ಯಕ್ಷೇತ್ರದಲ್ಲಿ ಜನಿಸಿದ ಪ್ರತಿಯೊಬ್ಬರೂ ಕೂಡ ಅದೃಷ್ಟವಂತರು. ಮಾದೇಶ್ವರನ ಕೃಪೆಗೆ ಪಾತ್ರರಾದ ನೀವೇ ಧನ್ಯರು ಎಂದು ಅಲ್ಲಿನ ಜನರ ಬಗ್ಗೆ ಅವರು ಮಾತನಾಡಿದ್ದಾರೆ. ಸದಾ ನಿಮ್ಮ ಸೇವೆಗೆ ನಾನು ಬದ್ಧನಾಗಿರುತ್ತೇನೆ. ನಿಮ್ಮ ಸಮಸ್ಯೆಗಳು ನನ್ನ ಸಮಸ್ಯೆ ಇದ್ದ ಹಾಗೆ, ನಾನು ಯಾವುದನ್ನು ಬಿಡದೆ ಪರಿಹರಿಸುತ್ತೇನೆ ಎನ್ನುವ ಭರವಸೆಯನ್ನು ಅವರು ನೀಡಿದರು. ಇದೇ ವೇಳೆ ಮಹದೇಶ್ವರ ಬೆಟ್ಟದ ಅಭಿವೃದ್ಧಿಗಾಗಿ ಹಾಗೂ ಅಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ ನೂರು ಕೋಟಿ ರೂ. (100 ಕೋಟಿ ರೂಪಾಯಿ) ಮಂಜೂರು ಮಾಡುವುದಾಗಿ ಆಶಯ ನೀಡಿದರು. ಈ ಮೂಲಕ ಮಾದೇಶ್ವರ ಬೆಟ್ಟದ ರಸ್ತೆಗಳ ಅಭಿವೃದ್ಧಿಯಾಗಲಿದ್ದು ಪ್ರಯಾಣಿಕರಿಗೆ, ಭಕ್ತಾದಿಗಳಿಗೆ ಇನ್ನಷ್ಟು ದೇವರ ದರ್ಶನಕ್ಕೆ ಅನುಕೂಲವಾಗಲಿದೆ. ಇದನ್ನು ಓದಿ.. Kannada News: ಕಾಂತಾರ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, 2022 ರಲ್ಲಿ ತನ್ನ ಮನಗೆದ್ದ ನಾಲ್ಕು ಚಿತ್ರಗಳನ್ನು ಆಯ್ಕೆ ಮಾಡಿದ್ದು ಹೇಗೆ ಗೊತ್ತೇ?