Health Tips: ಈ ಮೂರು ಪದಾರ್ಥಗಳನ್ನು ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚಿ ನೋಡಿ, ಉದ್ದ, ದಟ್ಟ ಕೂದಲು ನಿಮ್ಮದಾಗುತ್ತದೆ.
Health Tips: ಕೂದಲು ಉದುರುವ ಸಮಸ್ಯೆ ಹಲವರಿಗೆ ತೊಂದರೆ ಕೊಡುತ್ತಲೇ ಇರುತ್ತದೆ, ಈ ಸಮಸ್ಯೆ ಇಂದ ಪರಿಹಾರ ಪಡೆಯಲು ಜನರು ಕೆಮಿಕಲ್ ಗಳನ್ನು ಬಳಕೆ ಮಾಡುತ್ತಾರೆ. ಆದರೆ ಕೆಮಿಕಲ್ ಇರುವ ಪರಿಹರದಿಂದ ತೊಂದರೆಗಳು ಆಗುವುದೇ ಹೆಚ್ಚು. ಹಾಗಾಗಿ ಕೆಮಿಕಲ್ ಬಳಕೆಗಿಂತ ಹೆಚ್ಚಾಗಿ, ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ, ಕೂದಲು ಉದುರುವಿಕೆ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು. ಇದರಿಂದ ಕೂದಲು ಉದುರುವಿಕೆ ಸನಸ್ಯೆ ಕಡಿಮೆ ಆಗುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೆ. ಕೂದಲು ಬೆಳವಣಿಗೆಗೆ ಕೆಲವು ಟಿಪ್ಸ್ ಗಳನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ ..
ಅಕ್ಕಿ ತೊಳೆದ ನೀರು :- ಅಕ್ಕಿ ತೊಳೆದ ನೀರು ಕೂದಲು ಬೆಳೆಯಲು ಉತ್ತೇಜನ ನೀಡುತ್ತದೆ. ಹಾಗಾಗಿ ನೀವು ಅಕ್ಕಿಯನ್ನು ತೊಳೆದು, ಅದರ ನೀರಿನಲ್ಲಿ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಕೂದಲು ಬೆಳೆಯಲು ಸಹಾಯ ಆಗುತ್ತದೆ. ಕೂದಲು ಉದುರುವಿಕೆ ಕಡಿಮೆ ಆಗುತ್ತದೆ.
ನಿಂಬೆರಸ :- ಕೂದಲಿನ ಸಮಸ್ಯೆಗೆ ನಿಂಬೆರಸ ಕೂಡ ಒಳ್ಳೆಯ ಪರಿಹಾರ ಆಗಿದೆ. ನೀರಿನಲ್ಲಿ ನಿಂಬೆ ರಸ ಹಾಕಿ, ವಾರದಲ್ಲಿ ಎರಡು ಸಾರಿ ಕೂದಲನ್ನು ಚೆನ್ನಾಗಿ ತೊಳೆಯಿರಿ, ಇದರಿಂದ ನಿಮ್ಮ ಕೂದಲು ಬೆಳೆದು, ಉದುರುವಿಕೆ ಆಗುವುದು ಮಾತ್ರವಲ್ಲದೆ, ಕೂದಲು ಗಟ್ಟಿಯಾಗಿ ಇರುತ್ತದೆ. ಇದನ್ನು ಓದಿ..Kannada News: ಸಾಕಷ್ಟು ಸುಳ್ಳು ಮಾಹಿತಿಗಳ ನಡುವೆ, ನೇರವಾಗಿ ಕಾಂತಾರ ಸಿನೆಮಾಗೆ ರಿಷಬ್ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇದು ಚಿಲ್ಲರೆ ಎಂದ ಫ್ಯಾನ್ಸ್.

ಅಗಸೆ ಬೀಜ :- ಇದರಲ್ಲಿ ವಿಟಮಿನ್ ಅಂಶ ಹೇರಳವಾಗಿರುತ್ತದೆ. ಹಾಗಾಗಿ ಅಗಸೆ ಬೀಜದ ನೀರಿನಿಂದ ಕೂದಲು ತೊಳೆಯುವುದು ಪ್ರಯೋಜನಕಾರಿ ಆಗಿದೆ. 2 ಚಮಚ ಅಗಸೆ ಬೀಜ ತೆಗೆದುಕೊಂಡು, ಅದನ್ನು ನೀರಿನಲ್ಲಿ ನೆನೆಸಿ, ನಂತರ ಸೋಸಿ ಇಡಿ. ಮರುದಿನ ನಿಮ್ಮ ಕೂದಲನ್ನು ಆ ನೀರಿನಿಂದ ತೊಳೆಯಿರಿ, ಇದರಿಂದ ಕೂದಲು ಉದುರುವಿಕೆ ಸಮಸ್ಯೆ ಪರಿಹಾರ ಆಗುತ್ತದೆ. ಇದನ್ನು ಓದಿ..Kannada Astrology: ನಿಮ್ಮನ್ನು ಹಣ ಹುಡುಕಿಕೊಂಡು ಬರಬೇಕು, ಲಕ್ಷ್ಮಿ ದೇವಿ ಆಶೀರ್ವಾದ ಬೇಕು ಎಂದರೆ, ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿ.