Kannada News: ಸೋಲಿನ ಮೇಲೆ ಸೋಲಿನ ಬೆನ್ನಲ್ಲೇ ಕಂಗೆಟ್ಟಿರುವ ರಶ್ಮಿಕಾ, ಹೊಸ ಚಿತ್ರಕ್ಕೆ ಇಲ್ಲ ಥೇಟರ್ ಭಾಗ್ಯ. ಏನಾಗಿದೆ ಗೊತ್ತೇ??

13

Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿಯೂ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಲು ಕೂಡ ಒಪ್ಪಿಕೊಂಡಿದ್ದಾರೆ. ಈಗಾಗಲೇ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಕೆಲವು ಚಿತ್ರಗಳು ಬಿಡುಗಡೆ ಹಂತದಲ್ಲಿದ್ದರೆ, ಇನ್ನೂ ಕೆಲವು ಚಿತ್ರಗಳು ಚಿತ್ರೀಕರಣದ ಹಂತದಲ್ಲಿದೆ. ಟಾಲಿವುಡ್ನಿಂದ (Tollywood) ಕನ್ನಡದ ಬೆಡಗಿ ರಶ್ಮಿಕ ಮಂದಣ್ಣ ಬಾಲಿವುಡ್ ಗೆ (Bollywood) ಹಾರಿದ್ದರು. ಬಿಟೌನ್ ನಲ್ಲಿ ಚಿತ್ರವೊಂದಕ್ಕೆ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಮಿಷನ್ ಮಜ್ನು ಚಿತ್ರದ ಮೂಲಕ ಅವರು ಬಾಲಿವುಡ್ ಗೆ ಹಾರಿದ್ದರು. ಆದರೆ ಕೆಲವು ಕಾರಣಗಳಿಂದ ಚಿತ್ರವನ್ನು ಪದೇಪದೇ ಮುಂದೂಡಲಾಯಿತು. ಇದೀಗ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಜೊತೆಗೆ ಚಿತ್ರಕ್ಕೆ ಥಿಯೇಟರ್ ಸಿಗದ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿದೆ.

ಮಿಷನ್ ಮಜ್ನು (Mission Majnu) ಚಿತ್ರದ ಮೂಲಕ ನಟಿ ರಶ್ಮಿಕ ಮಂದಣ್ಣ ಅವರಿಗೆ ಬಾಲಿವುಡ್ ಪ್ರವೇಶಿಸುವ ಅವಕಾಶ ಸಿಕ್ಕಿತ್ತು. ಎಲ್ಲವೂ ಅಂದುಕೊಂಡ ಹಾಗಿದ್ದರೆ ಬಾಲಿವುಡ್ ನಲ್ಲಿ ಮಿಷನ್ ಮಜ್ನು ಅವರ ಮೊದಲ ಚಿತ್ರವಾಗಬೇಕಿತ್ತು. ಆದರೆ ಚಿತ್ರವನ್ನು ಎರಡು ಬಾರಿ ಬಿಡುಗಡೆಯ ದಿನಾಂಕ ಘೋಷಿಸಿ ಮತ್ತೆ ಮುಂದೂಡಲಾಯಿತು. ಕೊನೆಗೂ ಚಿತ್ರ ತೆರೆ ಕಾಣಲೇ ಇಲ್ಲ. ಮೊದಲಿಗೆ ಮೇ 13ಕ್ಕೆ ಚಿತ್ರವನ್ನು ತೆರೆಗೆ ತರುವುದಾಗಿ ಹೇಳಲಾಯಿತು. ಆದರೆ ನಂತರ ಚಿತ್ರವನ್ನು ಮತ್ತೆ ಜೂನ್ 10 ಕ್ಕೆ ಮುಂದೂಡಲಾಯಿತು, ಆಗಲು ಚಿತ್ರ ತೆರೆ ಕಾಣಲಿಲ್ಲ. ಸಿದ್ದಾರ್ಥ್ ಮಲೋತ್ರ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಚಿತ್ರವನ್ನು ನೋಡಲು ಕಾದು ಕುಳಿತಿದ್ದರು. ಆದರೆ ಕೊನೆಗೂ ಚಿತ್ರ ತೆರೆಗೆ ಬರಲೇ ಇಲ್ಲ. ಇತ್ತ ಮಿಷನ್ ಮಾಜ್ನು ತೆರೆ ಕಾಣುವುದು ತಡವಾಯಿತು. ಇದರ ಬೆನ್ನಲ್ಲೇ ಬಾಲಿವುಡ್ ನಲ್ಲಿ ರಶ್ಮಿಕ ನಟಿಸಿದ ಎರಡನೇ ಚಿತ್ರವಾದ ಗುಡ್ ಬೈ ತೆರೆಗೆ ಬಂತು. ಆದರೆ ಮೊದಲ ಬಾರಿಗೆ ಬಾಲಿವುಡ್ ಗೆ ಎಂಟ್ರಿ ಕೊಟ್ಟು ನಟಿಸಿದ ಚಿತ್ರ ಅಭಿಮಾನಿಗಳು ನೋಡಲು ನೋಡುವ ಭಾಗ್ಯ ಸಿಕ್ಕಿರಲೇ ಇಲ್ಲ. ಇದನ್ನು ಓದಿ..Kannada News: ಮುಗಿಯಿತೇ ದರ್ಶನ್ ಕಾಲ: ಸುಖಾಸುಮ್ಮನೆ ವಿವಾದ ಮೈಮೇಲೆ ಎಳೆದುಕೊಂಡ ಡಿ ಬಾಸ್: ಕ್ರಾಂತಿ ಠುಸ್ಸ್ ಪಟಾಕಿ ಆಗುತ್ತಾ??

ಇದೀಗ ಮಿಷನ್ ಮಜ್ನು ಅಭಿಮಾನಿಗಳನ್ನು ರಂಜಿಸಲು ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಈ ಬಾರಿ ಈ ಚಿತ್ರವನ್ನು ಥಿಯೇಟರ್ ಅಲ್ಲಿ ನೋಡುವ ಭಾಗ್ಯ ಅಭಿಮಾನಿಗಳಿಗೆ ಇಲ್ಲವಾಗಿದೆ. ಥಿಯೇಟರ್ ಬದಲಿಗೆ ಚಿತ್ರವು ಓಟಿಟಿ ಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಇದೇ ಮುಂದಿನ ವರ್ಷ ಜನವರಿ 20ರಂದು ನೆಟ್ ಫ್ಲಿಕ್ಸ್ ನಲ್ಲಿ ಚಿತ್ರ ಸ್ತ್ರೀಮಿಂಗ್ ಅಗಲಿದೆ. ಈ ಕುರಿತಂತೆ ನಟಿ ರಶ್ಮಿಕ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ “ನನ್ನ ಪ್ರೀತಿಯ ಅಭಿಮಾನಿಗಳೇ, ಕೊನೆಗೂ ಮಿಷನ್ ಮಜ್ನು ಚಿತ್ರವನ್ನು ನೋಡುವ ಕಾಲ ಬಂದಿದೆ. ಎಲ್ಲರೂ ಎಷ್ಟು ಎಕ್ಸೈಟ್ ಆಗಿದ್ದೀರಾ? ಚಿತ್ರವನ್ನು ನೋಡಲು ಕಾಯುತ್ತಿದ್ದೀರಾ? ಇದೇ ಜನವರಿ 20ರಂದು ನೆಟ್ ಫಿಕ್ಸ್ ನಲ್ಲಿ ಚಿತ್ರ ಸ್ಟ್ರೀಮಿಂಗ್ ಆಗಲಿದೆ” ಎಂದು ಅವರು ಬರೆದುಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಚಿತ್ರ ಓ ಟಿ ಟಿ ಯಲ್ಲಿ ತೆರೆಕಾಣುವುದಕ್ಕೆ ಚಿತ್ರಮಂದಿರಗಳು ಸಿಗದೇ ಇರುವುದು ಪ್ರಮುಖ ಕಾರಣ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದನ್ನು ಓದಿ.. Kannada News: ಎನ್ಟಿಆರ್ ಏನು ಸಾಮಾನ್ಯನಲ್ಲ. ಅದೆಂತಹ ಅಪ್ರತಿಮ ಸುಂದರಿಯನ್ನು ಪಟಾಯಿಸಿದ್ದಾನೆ ಗೊತ್ತೇ? ಇದಪ್ಪ ಅದೃಷ್ಟ.