Kannada News: ಸಾಕಷ್ಟು ಸುಳ್ಳು ಮಾಹಿತಿಗಳ ನಡುವೆ, ನೇರವಾಗಿ ಕಾಂತಾರ ಸಿನೆಮಾಗೆ ರಿಷಬ್ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇದು ಚಿಲ್ಲರೆ ಎಂದ ಫ್ಯಾನ್ಸ್.

38

Kannada News: ಬಾಕ್ಸ್ ಆಫೀಸ್ ಲೂಟಿ ಮಾಡಿದ ಕಾಂತಾರ ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ (Rishab Shetty) ಅವರು ಪಡೆದ ಒಟ್ಟಾರೆ ಸಂಭಾವನೆಯ ಕುರಿತಾಗಿ ಇದೀಗ ಚರ್ಚೆಯಾಗುತ್ತಿದೆ. ಈ ಒಂದು ಚಿತ್ರಕ್ಕಾಗಿ ರಿಷಭ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ಕಾಂತಾರ ಚಿತ್ರ ಎಲ್ಲ ನಿರೀಕ್ಷೆಗಳನ್ನು ಮೀರಿ ದೊಡ್ಡ ದಾಖಲೆ ಮಾಡಿದೆ. ಕನ್ನಡ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಅದೆಷ್ಟೋ ದಾಖಲೆಗಳನ್ನು ಕನ್ನಡದ ಕಾಂತಾರ (Kantara) ಪುಡಿಪುಡಿ ಮಾಡಿದೆ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಚಿತ್ರ ಎಂದು ಕಾಂತಾರ ಹೆಗ್ಗಳಿಕೆ ಮಾಡಿದೆ. ಅತ್ಯಂತ ಕಡಿಮೆ ಬಜೆಟ್ ನಲ್ಲಿ ತಯಾರಾದ ಕಥೆ ಇಷ್ಟು ದೊಡ್ಡ ಮಟ್ಟಕ್ಕೆ ಗಳಿಕೆ ಮಾಡಿದ್ದು ನಿಜವಾಗಲೂ ಸಾಧನೆಯ ಸರಿ ಎಂದು ಪ್ರತಿಯೊಬ್ಬ ಪ್ರೇಕ್ಷಕನು ಹೇಳುತ್ತಿದ್ದಾನೆ. ಚಿತ್ರ ನೋಡಿದ ಪ್ರತಿಯೊಬ್ಬರು ಕಾಂತಾರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಬಿಡುಗಡೆಯಾಗಿ ಇಷ್ಟು ದಿನಗಳು ಕಳೆದರೂ ಕೂಡ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಎಷ್ಟೋ ಜನರು ಮತ್ತೆ ಮತ್ತೆ ಚಿತ್ರ ನೋಡುತ್ತಿದ್ದಾರೆ

ಮೂಲ ಕನ್ನಡದ ಚಿತ್ರವಾದರೂ ಕಾಂತಾರ ವಿವಿಧ ಭಾಷೆಗಳಲ್ಲಿ ತೆರೆಕಂಡು ಭರ್ಜರಿ ಜನಪ್ರಿಯತೆ ಪಡೆದುಕೊಂಡಿದೆ. ಕನ್ನಡದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಚಿತ್ರ ಎನ್ನುವ ಹೆಗ್ಗಳಿಕೆಯ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ತೆರೆದುಕೊಂಡು ಆಯಾ ಭಾಷೆಗಳ ಗಲ್ಲಾ ಪೆಟ್ಟಿಗೆಯನ್ನು ಲೂಟಿ ಮಾಡುತ್ತಿದೆ. ಚಿತ್ರ ತೆರೆ ಕಂಡು ಎರಡು ತಿಂಗಳುಗಳ ಕಳೆದರೂ ಚಿತ್ರದ ಬಗೆಗಿನ ಕ್ರೇಜ್ ಕಡಿಮೆಯಾಗಿಲ್ಲ. ಚಿತ್ರ ಶೆಟ್ಟಿ ಅವರಿಗೆ ಸ್ಟಾರ್ ಪಟ್ಟವನ್ನು ತಂದುಕೊಟ್ಟಿತು. ಕೇವಲ ಕನ್ನಡದ ಮಟ್ಟಿಗೆ ಪರಿಚಯವಾಗಿದ್ದ ಅವರು ಇದೀಗ ಭಾರತದ ಅತ್ಯಂತ ಜನಪ್ರಿಯ ನಟರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News: ಸೋಲಿನ ಮೇಲೆ ಸೋಲಿನ ಬೆನ್ನಲ್ಲೇ ಕಂಗೆಟ್ಟಿರುವ ರಶ್ಮಿಕಾ, ಹೊಸ ಚಿತ್ರಕ್ಕೆ ಇಲ್ಲ ಥೇಟರ್ ಭಾಗ್ಯ. ಏನಾಗಿದೆ ಗೊತ್ತೇ??

ವಿಶಿಷ್ಟ ಬಗೆಯ ಕಥೆ, ಹಿನ್ನೆಲೆ, ಮೇಕಿಂಗ್, ಸಂಗೀತ ಇತ್ಯಾದಿ ಕಾರಣಗಳಿಂದ ಜನರ ಮೆಚ್ಚುಗೆಗೆ ಪಾತ್ರವಾದ ಕಾಂತಾರ ಇಂದಿಗೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈಗಾಗಲೇ ಕಾಂತಾರದ ಮುಂದುವರಿದ ಭಾಗ ಕಾಂತಾರ ಎರಡು ಚಿತ್ರದ ಚಿತ್ರೀಕರಣ ಮಾಡುವ ಕುರಿತಾಗಿ ತಯಾರಿಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ರಿಷಭ್ ಅವರು ಈ ಚಿತ್ರಕ್ಕಾಗಿ ಪಡೆದ ಸಂಭಾವನೆಯ ಕುರಿತು ಸಾಕಷ್ಟು ಚರ್ಚೆಯಾಗುತ್ತಿತ್ತು. ಆದರೆ ಇದೀಗ ಅವರು ಈ ಚಿತ್ರಕ್ಕಾಗಿ ಪಡೆದಿರುವ ಒಟ್ಟಾರೆ ಮೊತ್ತದ ಸಂಭಾವನೆ ಎಷ್ಟು ಎನ್ನುವುದು ನಿಖರವಾಗಿ ತಿಳಿದುಬಂದಿದೆ. ಈ ಚಿತ್ರದ ನಟನೆಗಾಗಿ ಅವರು ಬರೋಬ್ಬರಿ 5.5 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಚಿತ್ರ ದೊಡ್ಡ ಮಟ್ಟದ ಗಳಿಕೆ ಮತ್ತು ಯಶಸ್ಸನ್ನು ಕಂಡ ನಂತರ ನಿರ್ಮಾಪಕರು ಹೆಚ್ಚುವರಿಯಾಗಿ ಐದು ಕೋಟಿ ನೀಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ನಿರ್ಮಾಪಕ ಉಮಾಪತಿ ಶ್ರೀನಿವಾಸ್ ರವರಿಗೆ ಶಾಕ್ ಕೊಡಲು ಸಿದ್ಧತೆ ನಡೆಸಿದ ದರ್ಶನ್, ಬಿಜೆಪಿ ಜೊತೆ ಮಾಡುತ್ತಿರುವುದೇನು ಗೊತ್ತೇ??