Kannada News: ನಿರ್ಮಾಪಕ ಉಮಾಪತಿ ಶ್ರೀನಿವಾಸ್ ರವರಿಗೆ ಶಾಕ್ ಕೊಡಲು ಸಿದ್ಧತೆ ನಡೆಸಿದ ದರ್ಶನ್, ಬಿಜೆಪಿ ಜೊತೆ ಮಾಡುತ್ತಿರುವುದೇನು ಗೊತ್ತೇ??

17

Kannada News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತು ಇಂಡಸ್ಟ್ರಿಯ ಹೊರಗೆ ಎರಡು ಕಡೆ ಸಾಕಷ್ಟು ಜನ ಸ್ನೇಹಿತರಿದ್ದಾರೆ. ತಮ್ಮ ಸ್ನೇಹಿತರ ಪಟ್ಟಿಯನ್ನು ದರ್ಶನ್ ಸಾಮಾನ್ಯವಾಗಿ ಯಾವಾಗಲೂ ರಿಫ್ರೆಶ್ ಮಾಡುತ್ತಿರುತ್ತಾರೆ. ಹೊಸ ಸ್ನೇಹಿತರು ಬರುತ್ತಿರುತ್ತಾರೆ, ಕೆಲವು ಸ್ನೇಹಿತರಿಂದ ದೂರಾಗುತ್ತಿರುತ್ತಾರೆ. ತೀರ ಆತ್ಮೀಯರಾಗಿ ಇದ್ದವರನ್ನು ದರ್ಶನ್ ದೂರ ಮಾಡಿಕೊಂಡಿದ್ದಾರೆ ಅಥವಾ ದರ್ಶನ್ ಜೊತೆಗೆ ಆತ್ಮೀಯರಾಗಿದ್ದ ಎಷ್ಟೋ ಜನ ಈಗ ಅವರಿಂದ ದೂರ ಹೋಗಿದ್ದಾರೆ. ಈ ರೀತಿ ದರ್ಶನ್ ಸ್ನೇಹಿತರ ವಿಷಯದಲ್ಲಿ ಆಗುತ್ತಲೇ ಇರುತ್ತದೆ. ನಿರ್ಮಾಪಕ ಉಮಾಪತಿಯವರು ಕೂಡ ದರ್ಶನ್ ರವರಿಗೆ ಒಂದು ಕಾಲದ ಆತ್ಮೀಯ ಸ್ನೇಹಿತರಾಗಿದ್ದವರು. ಇದೀಗ ಅವರ ಸ್ನೇಹ ಮುರಿದು ಬಿದ್ದಿದೆ. ಆದರೆ ಉಮಾಪತಿ (Umapathy) ಯವರಿಗೆ ತಕ್ಕ ಪಾಠ ಕಲಿಸಲೆಂದೇ ದರ್ಶನ್ ರವರು ಅವರ ವಿರೋಧಿಯ ಪರವಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ.

ನಟ ದರ್ಶನ್ ರವರು ಉಮಾಪತಿ ಇಬ್ಬರು ಸಹ ಒಂದು ಕಾಲದಲ್ಲಿ ಆತ್ಮೀಯರಾಗಿದ್ದರು. ಒಟ್ಟಿಗೆ ಸೇರಿಕೊಂಡು ರಾಬರ್ಟ್ ಚಿತ್ರವನ್ನು ನಿರ್ಮಿಸಿ ದೊಡ್ಡ ಮಟ್ಟದ ಸಕ್ಸಸ್ ಕೂಡ ಕಂಡಿದ್ದರು. ಆದರೆ ಆನಂತರ ಕೆಲವು ಬದಲಾವಣೆಗಳಿಂದ ಇಬ್ಬರ ಸ್ನೇಹ ಮುರಿದು ಬಿದ್ದಿತ್ತು. ಮೈಸೂರಿನ ದರ್ಶನ್ ಅವರ ಕೆಲವು ಸ್ನೇಹಿತರ ವಿರುದ್ಧ ಉಮಾಪತಿ ದೂರು ದಾಖಲಿಸಿದ್ದರು. ಆನಂತರ ಅವರ ಸ್ನೇಹಿತರ ಕಡೆಯಿಂದ ದರ್ಶನ್ ಕೂಡ ಉಮಾಪತಿ ವಿರುದ್ಧ ದೂರು ದಾಖಲಿಸಿದ್ದರು. ಇವರಿಬ್ಬರ ನಡುವೆ ದೊಡ್ಡ ಮಾರಾಮಾರಿ ನಡೆಯಿತು. ಮಾಧ್ಯಮದಲ್ಲಿ ಇವರಿಬ್ಬರ ಕಿತ್ತಾಟ ದೊಡ್ಡ ಸುದ್ದಿ ಆಯಿತು. ನಂತರ ಇಬ್ಬರ ಸ್ನೇಹ ಮುರಿದುಬಿತ್ತು. ಇದೀಗ ದರ್ಶನ್ ರವರು ಉಮಾಪತಿಗೆ ತಕ್ಕ ಪಾಠ ಕಲಿಸಲಿಂದೆ ಅವರ ವಿರೋಧಿ ಬಣದ ವ್ಯಕ್ತಿಯ ಪರವಾಗಿ ನಿಂತಿದ್ದಾರೆ. ಅವರ ಪರ ವಹಿಸಿ ಉಮಾಪತಿಯನ್ನು ಸೋಲಿಸುವ ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಎನ್ಟಿಆರ್ ಏನು ಸಾಮಾನ್ಯನಲ್ಲ. ಅದೆಂತಹ ಅಪ್ರತಿಮ ಸುಂದರಿಯನ್ನು ಪಟಾಯಿಸಿದ್ದಾನೆ ಗೊತ್ತೇ? ಇದಪ್ಪ ಅದೃಷ್ಟ.

ಅಂದಹಾಗೆ ಉಮಾಪತಿ ಶ್ರೀನಿವಾಸ ಅವರು ಕಾಂಗ್ರೆಸ್ (Congress) ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗಬಹುದೆಂದು ಅಂದಾಜಿಸಲಾಗಿತ್ತು. ಕಳೆದ ಬಾರಿ ಚುನಾವಣೆಗೆ ಅವರು ಸ್ಪರ್ಧಿಸುವ ತಯಾರಿ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವಕಾಶ ಕೈ ತಪ್ಪಿ ಹೋಗಿತ್ತು. ಆದರೆ ಈ ಬಾರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಟಿಕೆಟ್ ಪಡೆದು ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಹುತೇಕ ಅವರು ಈ ಬಾರಿ ರಾಜಕೀಯ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಆದರೆ ಇದೇ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಸತೀಶ್ ರೆಡ್ಡಿ (Satish Reddy) ಅವರು ಉಮಾಪತಿಗೆ ಎದುರಾಳಿಯಾಗಿದ್ದಾರೆ. ನೆನ್ನೆ ನಡೆದ ಸತೀಶ್ ರೆಡ್ಡಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಇದರ ಜೊತೆಗೆ ರೋಡ್ ಶೋ ಅಲ್ಲೂ ಕೂಡ ಅವರು ಪಾಲ್ಗೊಂಡಿದ್ದರು. ಇದೆಲ್ಲವನ್ನು ಗಮನಿಸಿದ ನಂತರ ಉಮಾಪತಿಗೆ ಸರಿಯಾದ ಪಾಠ ಕಲಿಸಲೆಂದೇ ದರ್ಶನ್ ಸತೀಶ್ ರೆಡ್ಡಿ ಅವರನ್ನು ಬೆಂಬಲಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಓದಿ.. Kannada News: ಸೋಲಿನ ಮೇಲೆ ಸೋಲಿನ ಬೆನ್ನಲ್ಲೇ ಕಂಗೆಟ್ಟಿರುವ ರಶ್ಮಿಕಾ, ಹೊಸ ಚಿತ್ರಕ್ಕೆ ಇಲ್ಲ ಥೇಟರ್ ಭಾಗ್ಯ. ಏನಾಗಿದೆ ಗೊತ್ತೇ??