Kannada News: ಮುಗಿಯಿತೇ ದರ್ಶನ್ ಕಾಲ: ಸುಖಾಸುಮ್ಮನೆ ವಿವಾದ ಮೈಮೇಲೆ ಎಳೆದುಕೊಂಡ ಡಿ ಬಾಸ್: ಕ್ರಾಂತಿ ಠುಸ್ಸ್ ಪಟಾಕಿ ಆಗುತ್ತಾ??

16

Kannada News: ಕ್ರಾಂತಿ (Kranthi) ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿರುವ ನಟ ದರ್ಶನ್ (Darshan) ಯೂಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದ ಹೇಳಿಕೆ ಇದೀಗ ಇನ್ನಷ್ಟು ವಿವಾದಕ್ಕೆ ಕಾರಣವಾಗಿದೆ. “ಅದೃಷ್ಟದೇವತೆಯ ಬಟ್ಟೆ ಬಿಚ್ಚಿ ಮನೆಯಲ್ಲಿ ಕೂರಿಸಿಕೊಂಡು ಬಿಡಬೇಕು. ಬಟ್ಟೆ ಕೊಟ್ಟರೆ ಅಲ್ಲವೇ ಬೇರೆಯವರ ಮನೆಗೆ ಅವಳು ಹೋಗುವುದು” ಎನ್ನುವಂತಹ ಹೇಳಿಕೆ ನೀಡುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಅವರು ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಈ ವಿವಾದ ಅವರ ಕ್ರಾಂತಿ ಚಿತ್ರಕ್ಕೆ ನೇರ ಹೊಡೆತ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದೀಗ ಚಿತ್ರ ಮುಂದಿನ ಜನವರಿ 26ರಂದು ತೆರೆ ಕಾಣುತ್ತಿದೆ. ಯೂಟ್ಯೂಬ್ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅದೃಷ್ಟ ದೇವತೆಯ ಕುರಿತಾಗಿ ಮಾತನಾಡುತ್ತಾ ಅಸಭ್ಯವಾಗಿ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮುಂದಿನ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರವು ತೆರೆಗೆ ಬರಲಿದೆ. ಕ್ರಾಂತಿ ಚಿತ್ರದ ಪ್ರಚಾರದ ವೇಳೆ ದರ್ಶನ್ ಯೂಟ್ಯೂಬ್ ವಾಹಿನಿ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ನಿರ್ಮಾಪಕರ ಬಗ್ಗೆ ಹೇಳುತ್ತಾ “ನಟರಿಗೆ ನಿರ್ಮಾಪಕರು ಚಿತ್ರದ ಪ್ರಚಾರಕ್ಕಾಗಿ ಸಂದರ್ಶನದ ಅವಕಾಶ ಕಲ್ಪಿಸುವುದು ತೀರ ಅಪರೂಪ. ಅಂತಹ ಅದೃಷ್ಟ ಬಂದಾಗ ಅದನ್ನು ಕಳೆದುಕೊಳ್ಳಬಾರದು. ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ. ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್‌ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು” ಎಂಬ ಹೇಳಿಕೆಯನ್ನು ನೀಡುವ ಮೂಲಕ ವಿವಾದ ಸೃಷ್ಟಿಸಿಕೊಂಡಿದ್ದಾರೆ. ದರ್ಶನ್ ಅವರ ಹೇಳಿಕೆಯನ್ನು ಸಾಕಷ್ಟು ಜನರು ಟೀಕಿಸುತ್ತಿದ್ದಾರೆ. ಇದನ್ನು ಓದಿ..Kannada News: ಗೋಲ್ಡನ್ ಸ್ಟಾರ್ ಗಣೇಶ್ ಮಗಳು ಎಷ್ಟು ದೊಡ್ಡವರಾಗಿದ್ದಾರೆ ಗೊತ್ತೇ? ನೋಡಲು ಕೂಡ ಅಷ್ಟೇ ತುಂಬಾ ಕ್ಯೂಟ್.

ಎಷ್ಟೇ ದೊಡ್ಡ ನಟನಾದರೂ ಕೂಡ ಅವರ ಮನಸ್ಥಿತಿ, ಯೋಚನೆಗಳು ಎಷ್ಟು ಕೆಳಮಟ್ಟದಲ್ಲಿದೆ ಎನ್ನುವುದು ಇದೇ ಮಾತುಗಳಿಂದ ಅರ್ಥವಾಗುತ್ತದೆ. ಇನ್ನಾದರೂ ಕನ್ನಡಿಗರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇವರ ಆಲೋಚನೆಗಳು ಎಷ್ಟು ಕೆಟ್ಟದಾಗಿವೆ ಎನ್ನುವುದನ್ನು ಇವರ ಈ ಮಾತುಗಳೇ ಸೂಚಿಸುತ್ತವೆ. ಒಂದು ಹೆಣ್ಣನ್ನು ಹಾಗೂ ನಮ್ಮ ನಂಬಿಕೆಗಳ ಬಗ್ಗೆ ಇಷ್ಟು ಅವಹೇಳನಕಾರಿಯಾಗಿ ಮಾತನಾಡುವಷ್ಟು ದುರಹಂಕಾರ ತೋರಿಸಬಾರದಿತ್ತು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇದೇ ಮಾತನ್ನು ಯಾರಾದರೂ ಬಾಲಿವುಡ್ ನಟ ಹೇಳಿದರೆ ಅವರನ್ನು ಚಿತ್ರರಂಗದಿಂದಲೇ ಬಾಯ್ಕಾಟ್ ಮಾಡಲಾಗುತ್ತಿತ್ತು. ಆದರೆ ಕನ್ನಡದ ವಿಷಯಕ್ಕೆ ಬಂದರೆ ಹೀಗಾಗುವುದಿಲ್ಲ. ಜನರು ಪ್ರಜ್ಞಾವಂತರಾಗಬೇಕಿದೆ ಎಂದು ಕೆಲವರು ಹೇಳಿದ್ದಾರೆ.

ಈ ಮೂಲಕ ದರ್ಶನ್ ಅವರ ಈ ಹೇಳಿಕೆ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಿದೆ. ಆದರೂ ಕೂಡ ದರ್ಶನ್ ಅಭಿಮಾನಿಗಳು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಹೇಳಿದ್ದು ಕೇವಲ ಅದೃಷ್ಟದ ಬಗ್ಗೆ ಹೊರತು ದೇವಿಯ ಬಗ್ಗೆ ಅಥವಾ ಲಕ್ಷ್ಮಿಯ ಬಗ್ಗೆ ಅಲ್ಲ ಎಂದು ಅಭಿಮಾನಿಗಳು ಸಮರ್ಥನೆ ನೀಡಿದ್ದಾರೆ. ದರ್ಶನ್ ರವರು ಎರಡು ಯುಟ್ಯೂಬ್ ಚಾನೆಲ್ ಗಳಿಗೆ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ಅವರ ಈ ಮಾತುಗಳು ಕ್ರಾಂತಿ ಚಿತ್ರಕ್ಕೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಇದೇ ಮಾತಿನಿಂದಾಗಿ ಅಭಿಮಾನಿಗಳು ಬೇಸರಗೊಂಡು ಕ್ರಾಂತಿ ಚಿತ್ರಕ್ಕೆ ಹಿನ್ನೆಡೆ ಉಂಟಾಗುವ ಭಯ ವ್ಯಕ್ತವಾಗುತ್ತಿದೆ. ಕ್ರಾಂತಿ ಚಿತ್ರವನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡು ತೆರೆಗೆ ತರಲಾಗುತ್ತಿದೆ. ಆದರೆ ಇದೇ ವೇಳೆ ದರ್ಶನ್ ಇಂತಹದೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಈ ವಿವಾದ ಎಲ್ಲಿಯವರೆಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ನಡೆಯಲು ಆಗದಿರುವ ವಯಸ್ಸಿನಲ್ಲಿಯೂ ಟಾಪ್ ನಟಿಯನ್ನು ಪಟಾಯಿಸಿದರೆ ಕಮಲ್ ಹಾಸನ್? ನಟಿ ನೇರವಾಗಿ ಬಂದು ಹೇಳಿದ್ದನು ಗೊತ್ತೇ?