Cricket News: ಭಾರತ ತಂಡಕ್ಕೆ ಆಯ್ಕೆಯಾಗದೆ ಇರುವಾಗ ಸಂಜು ಸ್ಯಾಮ್ಸನ್ ಗೆ ದೊಡ್ಡ ಆಫರ್ ಕೊಟ್ಟ ಐರ್ಲೆಂಡ್ ಕ್ರಿಕೆಟ್ ತಂಡ. ಏನು ಗೊತ್ತೇ??

22

Cricket News: ಅತ್ಯುತ್ತಮ ಆಟಗಾರರಾಗಿದ್ದರು ಸಹ ಟೀಮ್ ಇಂಡಿಯಾ ಪರವಾಗಿ ಆಡುವ ಅವಕಾಶವನ್ನು ಪಡೆದುಕೊಳ್ಳಲು ಸಾಧ್ಯವಾಗದ ಸಂಜು ಸ್ಯಾಮ್ಸನ್ ರವರಿಗೆ ಈಗ ಹೊಸದೊಂದು ಆಫರ್ ಬಂದಿದೆ. ಸ್ಟಾರ್ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಆಗಿರುವ ಅವರಿಗೆ ಟೀಮ್ ಇಂಡಿಯಾ ಸರಿಯಾದ ಅವಕಾಶವನ್ನು ನೀಡುತ್ತಿಲ್ಲ ಎನ್ನುವ ಟೀಕೆಗಳು ಕೇಳಿ ಬರುತ್ತಿದೆ. ಇದೀಗ ಸಂಜು ಅವರಿಗೆ ಐರ್ಲೆಂಡ್ ಒಂದು ದೊಡ್ಡ ಆಫರ್ ನೀಡಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್ ಅವರಿಗೆ ಅಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಆಡಲು ಅವಕಾಶವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರು ಅವರಿಗೆ ಅದಕ್ಕಿಂತ ಹೆಚ್ಚಿನ ಅವಕಾಶಗಳು ದೊರೆಯಲೇ ಇಲ್ಲ. ಆನಂತರ ನಡೆದ ಬಾಂಗ್ಲಾ ದೇಶದ ಏಕದಿನ ಪಂದ್ಯಗಳಿಗೂ ಅವರಿಗೆ ಸ್ಥಾನ ದೊರಕಲಿಲ್ಲ. ಇದರಿಂದ ಸಂಜು ಸಾಕಷ್ಟು ಬೇಸರ ಪಟ್ಟುಕೊಂಡರು. ಸಂಜು ಅವರಿಗೆ ಅವಕಾಶ ನೀಡದೇ ಇರುವುದಕ್ಕೆ ಹಿರಿಯ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಸಹ ಆಕ್ರೋಶ ಹೊರಹಾಕಿದ್ದರು. ತಂಡದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸಿರುವ ಕುರಿತಾಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.

ಇದೀಗ ಟೀಮ್ ಇಂಡಿಯಾದಲ್ಲಿ ದೊಡ್ಡ ಆಟಗಾರರ ದಂಡೆ ಇದೆ ಎನ್ನಬಹುದು. ಒಬ್ಬರನ್ನೊಬ್ಬರು ಮೀರಿಸುವಷ್ಟರ ಮಟ್ಟಿಗೆ ಎಲ್ಲ ಆಟಗಾರರು ಇದ್ದಾರೆ. ಐಪಿಎಲ್ ನಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅತ್ಯುತ್ತಮವಾಗಿ ಆಡುವ ಆಟಗಾರರು ಟೀಮ್ ಇಂಡಿಯದ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ ಕ್ರಿಕೆಟ್ನಲ್ಲಿ ಸ್ಪರ್ಧೆ ದಿನದಿಂದ ದಿನಕ್ಕೆ ಹೆಚ್ಚುತಲೆ ಇದೆ. ಹೊಸ ಹೊಸ ಆಟಗಾರರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಇದೇ ಕಾರಣಕ್ಕಾಗಿ ಉತ್ತಮ ಆಟಗಾರರಾಗಿದ್ದರು ಕೂಡ ಸಂಜು ಅವರನ್ನು ಆಯ್ಕೆ ಸಮಿತಿ ನಿರ್ಲಕ್ಷ್ಯ ತೋರುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಇಶಾನ್ ಕಿಶನ್ ರೋಚಕ ದ್ವಿಶತಕ ಸಿಡಿಸಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಇದಾದ ನಂತರ ಸಂಜು ಸ್ಯಾಮ್ಸನ್ ಅವರಿಗೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಇನ್ನಷ್ಟು ಕಡಿಮೆಯಾಗಿದೆ ಎಂದೇ ಹೇಳಲಾಗುತ್ತಿದೆ. ಇದನ್ನು ಓದಿ..Cricket News: ಹೀನಾಯವಾಗಿ ಸೋತರು ಬುದ್ದಿ ಕಲಿಯದ ರೋಹಿತ್, ನೇರವಾಗಿ ಭಾರತದ ಸೋಲಿಗೆ ಯಾರು ಕಾರಣ ಎಂದು ಹೇಳಿದ್ದೇನು ಗೊತ್ತೇ? ಇವರೇ ಅಂತೇ ಕಾರಣ.

ಇಂತಹದೊಂದು ಆತಂಕವನ್ನು ಸಂಜು ಅವರು ಎದುರಿಸುತ್ತಿರುವಾಗ ಅವರಿಗೆ ಐರ್ಲೆಂಡ್ ಕ್ರಿಕೆಟ್ ಮಂಡಳಿಯಿಂದ ಭರ್ಜರಿ ಆಫರ್ ಬಂದಿದೆ. ವರದಿಗಳ ಪ್ರಕಾರ ಐರ್ಲೆಂಡ್ ಕ್ರಿಕೆಟ್ ಬೋರ್ಡ್ ಸಂಜು ಸ್ಯಾಮ್ಸನ್ ಅವರಿಗೆ ತಮ್ಮ ದೇಶಕ್ಕೆ ಬಂದರೆ ಅವರ ವೃತ್ತಿ ಜೀವನವನ್ನು ಮುಂದುವರಿಸಲು ಅವಕಾಶ ನೀಡುವುದಾಗಿ ಮತ್ತು ಎಲ್ಲಾ ಪಂದ್ಯಗಳಲ್ಲಿಯೂ ಆಡಲು ಅವಕಾಶ ನೀಡುವುದಾಗಿ ಹೇಳಿದೆ ಎಂದು ತಿಳಿದು ಬಂದಿದೆ. ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಂಜು ಅವರಿಗೆ ಅವಕಾಶ ನೀಡುವುದಾಗಿ ಐರ್ಲೆಂಡ್ ತಿಳಿಸಿದೆ. ಆದರೆ ಸಂಜು ಅವರು ಈ ಅವಕಾಶವನ್ನು ನಿರಾಕರಿಸಿದ್ದಾರೆ. “ತಾನು ಭಾರತ ತಂಡವನ್ನು ಪ್ರತಿನಿಧಿಸಲು ಇಚ್ಚಿಸಿರುವುದಾಗಿ ಮತ್ತು ಆ ಕಾರಣದಿಂದ ಯಾವುದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇರೆ ರಾಷ್ಟ್ರಕ್ಕಾಗಿ ಆಡುವುದು ನನಗೆ ಇಷ್ಟವಿಲ್ಲ” ಎಂದು ಅವರು ಐರ್ಲೆಂಡ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆ ಮೂಲಕ ಸಂಜು ಎಷ್ಟೇ ಕಡಿಮೆ ಅವಕಾಶಗಳು ಸಿಕ್ಕರೂ ಕೂಡ ಭಾರತದ ಆಟಗಾರನಾಗಿ ಉಳಿದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದನ್ನು ಓದಿ.. Cricket News: ಬಿಗ್ ಶಾಕ್: ಬಾಂಗ್ಲಾ ದೇಶದ ವಿರುದ್ಧ ಮಂಡಿಯೂರಿದ ಕಾರಣಕ್ಕಾಗಿ ದ್ರಾವಿಡ್ ಹಾಗೂ ರೋಹಿತ್ ಗೆ ಕಾದಿದೆ ಶಾಕ್? ಬಿಸಿಸಿಐ ಮಾಡುತ್ತಿರುವುದೇನು ಗೊತ್ತೇ?