Kannada News: ದರ್ಶನ್ ವಿರುದ್ಧ ತಿರುಗಿ ಬಿದ್ದ ಜನ: ಅದೃಷ್ಟ ದೇವತೆಯ ಕುರಿತು ನಾಲಿಗೆ ಹರಿಬಿಟ್ಟ ದರ್ಶನ್, ನಂತರ ಏನಾಗಿದೆ ಗೊತ್ತೆ?

15

Kannada News: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ರವರ ಬಹುನಿರೀಕ್ಷಿತ ಚಿತ್ರ ಕ್ರಾಂತಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಈ ಹಿಂದೆ ನಡೆಯದಷ್ಟು ಮಟ್ಟಿಗೆ ಚಿತ್ರ ಆನ್ಲೈನ್ ಮೀಡಿಯಾದಲ್ಲಿ ಪ್ರಚಾರ ನಡೆಸುತ್ತಿದೆ. ಮಾಧ್ಯಮದವರು ದರ್ಶನ್ (Darshan) ಅವರನ್ನು ಕೆಲವು ಕಾರಣಗಳಿಂದಾಗಿ ಬ್ಯಾನ್ ಮಾಡಿದ ನಂತರ ಅಭಿಮಾನಿಗಳೇ ಈ ಚಿತ್ರವನ್ನು ತಮ್ಮದೆಂದು ಪ್ರೀತಿಯಿಂದ ಪ್ರಚಾರ ನಡೆಸುತ್ತಿದ್ದಾರೆ. ಚಿತ್ರದ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲದಿದ್ದಾಗಲೇ ಕೇವಲ ದರ್ಶನ್ ಕ್ರಾಂತಿ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದಾಗಲೇ ರಾಜ್ಯಾದ್ಯಂತ ಈ ಚಿತ್ರದ ಬಗ್ಗೆ ಪ್ರಚಾರ ಮಾಡಲಾಗಿತ್ತು. ಇದೀಗ ಚಿತ್ರ ಮುಂದಿನ ಜನವರಿ 26ರಂದು ತೆರೆ ಕಾಣುತ್ತಿದೆ. ಯೂಟ್ಯೂಬ್ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅದೃಷ್ಟ ದೇವತೆಯ ಕುರಿತಾಗಿ ಮಾತನಾಡುತ್ತಾ ಅಸಭ್ಯವಾಗಿ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕ್ರಾಂತಿ (Kranthi) ಸಿನಿಮಾದ ಪೂರ್ತಿ ಕೆಲಸಗಳು ಮುಗಿದಿದ್ದು, ಇದೀಗ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ವಿವಿಧ ಯುಟ್ಯೂಬ್ ಚಾನೆಲ್ ಗಳಲ್ಲಿ ನಿರಂತರವಾಗಿ ದರ್ಶನ್ ಸಂದರ್ಶನ ನೀಡುತ್ತಿದ್ದಾರೆ. ಚಿತ್ರದ ಬಗ್ಗೆ, ಚಿತ್ರದ ಕಥೆಯ ಬಗ್ಗೆ ಅವರು ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದಾರೆ. ಎಲ್ಲೆಲ್ಲೂ ಕ್ರಾಂತಿಯದ್ದೆ ಮಾತುಗಳು ಕೇಳಿ ಬರುತ್ತಿವೆ. ಮುಂದಿನ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರವು ತೆರೆಗೆ ಬರಲಿದೆ. ಕ್ರಾಂತಿ ಚಿತ್ರದ ಪ್ರಚಾರದ ವೇಳೆ ದರ್ಶನ್ ಯೂಟ್ಯೂಬ್ ವಾಹಿನಿ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ನಿರ್ಮಾಪಕರ ಬಗ್ಗೆ ಹೇಳುತ್ತಾ “ನಟರಿಗೆ ನಿರ್ಮಾಪಕರು ಚಿತ್ರದ ಪ್ರಚಾರಕ್ಕಾಗಿ ಸಂದರ್ಶನದ ಅವಕಾಶ ಕಲ್ಪಿಸುವುದು ತೀರ ಅಪರೂಪ. ಅಂತಹ ಅದೃಷ್ಟ ಬಂದಾಗ ಅದನ್ನು ಕಳೆದುಕೊಳ್ಳಬಾರದು. ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ. ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್‌ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು” ಎಂಬ ಹೇಳಿಕೆಯನ್ನು ನೀಡುವ ಮೂಲಕ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಇದನ್ನು ಓದಿ..Rashmika Mandanna: ಕೊನೆಗೂ ಬುದ್ದಿ ಕಲಿತರೆ ರಶ್ಮಿಕಾ: ಕಾಂತಾರ ನೋಡಿ ಮಾಡಿದ್ದೇನು ಗೊತ್ತೆ?? ರಶ್ಮಿಕಾ ರವರೆ ಹೇಳಿದ್ದೇನು ಗೊತ್ತೆ?

ದರ್ಶನ್ ಅವರ ಹೇಳಿಕೆಯನ್ನು ಸಾಕಷ್ಟು ಜನರು ಟೀಕಿಸುತ್ತಿದ್ದಾರೆ. ಎಷ್ಟೇ ದೊಡ್ಡ ನಟನಾದರೂ ಕೂಡ ಅವರ ಮನಸ್ಥಿತಿ, ಯೋಚನೆಗಳು ಎಷ್ಟು ಕೆಳಮಟ್ಟದಲ್ಲಿದೆ ಎನ್ನುವುದು ಇದೇ ಮಾತುಗಳಿಂದ ಅರ್ಥವಾಗುತ್ತದೆ. ಇನ್ನಾದರೂ ಕನ್ನಡಿಗರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇವರ ಆಲೋಚನೆಗಳು ಎಷ್ಟು ಕೆಟ್ಟದಾಗಿವೆ ಎನ್ನುವುದನ್ನು ಇವರ ಈ ಮಾತುಗಳೇ ಸೂಚಿಸುತ್ತವೆ. ಒಂದು ಹೆಣ್ಣನ್ನು ಹಾಗೂ ನಮ್ಮ ನಂಬಿಕೆಗಳ ಬಗ್ಗೆ ಇಷ್ಟು ಅವಹೇಳನಕಾರಿಯಾಗಿ ಮಾತನಾಡುವಷ್ಟು ದುರಹಂಕಾರ ತೋರಿಸಬಾರದಿತ್ತು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇದೇ ಮಾತನ್ನು ಯಾರಾದರೂ ಬಾಲಿವುಡ್ ನಟ ಹೇಳಿದರೆ ಅವರನ್ನು ಚಿತ್ರರಂಗದಿಂದಲೇ ಬಾಯ್ಕಾಟ್ ಮಾಡಲಾಗುತ್ತಿತ್ತು. ಆದರೆ ಕನ್ನಡದ ವಿಷಯಕ್ಕೆ ಬಂದರೆ ಹೀಗಾಗುವುದಿಲ್ಲ. ಜನರು ಪ್ರಜ್ಞಾವಂತರಾಗಬೇಕಿದೆ ಎಂದು ಕೆಲವರು ಹೇಳಿದ್ದಾರೆ. ಈ ಮೂಲಕ ದರ್ಶನ್ ಅವರ ಈ ಹೇಳಿಕೆ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಿದೆ. ಆದರೂ ಕೂಡ ದರ್ಶನ್ ಅಭಿಮಾನಿಗಳು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಹೇಳಿದ್ದು ಕೇವಲ ಅದೃಷ್ಟದ ಬಗ್ಗೆ ಹೊರತು ದೇವಿಯ ಬಗ್ಗೆ ಅಥವಾ ಲಕ್ಷ್ಮಿಯ ಬಗ್ಗೆ ಅಲ್ಲ ಎಂದು ಅಭಿಮಾನಿಗಳು ಸಮರ್ಥನೆ ನೀಡಿದ್ದಾರೆ. ಇದನ್ನು ಓದಿ.. Kannada News: ಲೆಕ್ಕಾಚಾರಗಳನ್ನು ಹುಟ್ಟುಹಾಕಿದ ಅಶ್ವಿನಿ ಪುನೀತ್ ರಾಜ್ ಕುಮಾರ್: ರಾಜಕೀಯಕ್ಕೆ ಬರ್ತಾರಾ ಅಪ್ಪು ಹೆಂಡತಿ, ಕರುನಾಡಿದ ಅತ್ತಿಗೆ ಬಂದರೆ ಏನಾಗಲಿದೆ ಗೊತ್ತೆ?