Kannada News: ರಶ್ಮಿಕಾ ರವರನ್ನು ಬ್ಯಾನ್ ಮಾಡುತ್ತೇವೆ ಎಂದಿದ್ದಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಧನಂಜಯ್. ಕನ್ನಡ ಡೈಲಾಗ್ ಕೇವಲ ಸಿನೆಮಾಗೆ ಮಾತ್ರನ??

11

Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಿರಂತರವಾಗಿ ಒಂದಿಲ್ಲೊಂದು ಕಾರಣಗಳಿಗಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಕನ್ನಡ ಭಾಷೆ ಹಾಗೂ ಕನ್ನಡ ಸಿನಿಮಾದ ಕುರಿತಾಗಿ ಮಾತನಾಡುವಾಗ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳಿದುಕೊಳ್ಳುತ್ತಿರುತ್ತಾರೆ. ಕನ್ನಡ ಚಿತ್ರದ ಮೂಲಕ ನಟಿಯಾಗಿ ಗುರುತಿಸಿಕೊಂಡು ಆನಂತರ ದೊಡ್ಡ ಮಟ್ಟದ ಹೆಸರು ಮಾಡಿರುವ ಅವರು ಕನ್ನಡ ಚಿತ್ರರಂಗ ಹಾಗೆ ಕನ್ನಡ ಭಾಷೆ ಮೇಲೆ ಒಂದಿರುವ ನಿಲುವಿನ ಕುರಿತಾಗಿ ಕನ್ನಡಿಗರು ಯಾವಾಗಲೂ ಟೀಕಿಸುತ್ತಿರುತ್ತಾರೆ. ಈ ಹಿಂದೆ ಸಂದರ್ಶನ ಒಂದರಲ್ಲಿ ಅವರು ತಾವು ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕುರಿತಾಗಿ ಮಾತನಾಡುತ್ತಾ ತಮ್ಮನು ಚಿತ್ರರಂಗಕ್ಕೆ ಕರೆದು ತಂದ ಸಂಸ್ಥೆಯ ಹೆಸರು ಹೇಳದೆ ಕೇವಲ ಬೆರಳು ತೋರಿಸುತ್ತಾ ಅದೊಂದು ಸಂಸ್ಥೆ ನನಗೆ ಅವಕಾಶ ನೀಡಿತ್ತು ಎಂದು ಹೇಳುವ ಮೂಲಕ ಸಾಕಷ್ಟು ಜನರ ಕೋಪಕ್ಕೆ ಕಾರಣವಾಗಿದ್ದರು. ಈ ಘಟನೆ ನಡೆದ ನಂತರ ಅವರನ್ನು ಕನ್ನಡ ಚಿತ್ರದಿಂದ ಬ್ಯಾನ್ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು.

ಕೆಲವು ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ನಟಿ ರಶ್ಮಿಕಾ ಮಂದಣ್ಣ ಸಂದರ್ಶನ ನೀಡಿದರು. ಆಗ ನಿರೂಪಕಿ ಅವರ ಸಿನಿಮಾ ಜರ್ನಿಯ ಕುರಿತು ಪ್ರಶ್ನೆ ಮಾಡಿದರು. ತಮ್ಮ ಸಿನಿ ಕೆರಿಯರ್ ಹೇಗೆ ಶುರುವಾಯಿತು ಎನ್ನುವ ಪ್ರಶ್ನೆಗೆ ರಶ್ಮಿಕ ಮಂದಣ್ಣ ಉತ್ತರಿಸುತ್ತಾ ನನಗೆ ಒಂದು ಪ್ರೊಡಕ್ಷನ್ ಹೌಸ್ ಇಂದ ಕಾಲ್ ಬಂತು ಎಂದರು. ಆ ಪ್ರೊಡಕ್ಷನ್ ಹೆಸರು ಹೇಳದ ರಶ್ಮಿಕ ಕೇವಲ ಕೈ ಬೆರಳುಗಳನ್ನು ಅಲ್ಲಾಡಿಸುತ್ತಾ ಅದೊಂದು ಪ್ರೊಡಕ್ಷನ್ ಎಂದು ಹೇಳಿದ್ದರು. ಅಲ್ಲದೆ ನನಗೇನು ಸಿನಿಮಾದಲ್ಲಿ ನಟಿಸುವ ಆಸೆ ಇರಲಿಲ್ಲ, ಅವರೇ ಒತ್ತಾಯ ಮಾಡಿದರು ಹಾಗಾಗಿ ಒಪ್ಪಿಕೊಳ್ಳಬೇಕಾಯಿತು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ತಮ್ಮನು ಚಿತ್ರರಂಗಕ್ಕೆ ಪರಿಚಯಿಸಿದ ಸಂಸ್ಥೆಯ ಹೆಸರನ್ನು ಹೇಳುವಷ್ಟು ಕನಿಷ್ಠ ಸೌಜನ್ಯ ಅವರು ಉಳಿಸಿಕೊಂಡಿಲ್ಲ. ರಶ್ಮಿಕ ಕನ್ನಡದ ನಟಿ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಎನ್ನುವುದರಿಂದ ಹಿಡಿದು ಸಾಕಷ್ಟು ರೀತಿಯಾಗಿ ರಶ್ಮಿಕ ಅವರನ್ನು ಟೀಕೆ ಮಾಡಲಾಗುತ್ತದೆ. ಇದನ್ನು ಓದಿ..Kannada News: ಲೆಕ್ಕಾಚಾರಗಳನ್ನು ಹುಟ್ಟುಹಾಕಿದ ಅಶ್ವಿನಿ ಪುನೀತ್ ರಾಜ್ ಕುಮಾರ್: ರಾಜಕೀಯಕ್ಕೆ ಬರ್ತಾರಾ ಅಪ್ಪು ಹೆಂಡತಿ, ಕರುನಾಡಿದ ಅತ್ತಿಗೆ ಬಂದರೆ ಏನಾಗಲಿದೆ ಗೊತ್ತೆ?

ಜೊತೆಗೆ ಅವರನ್ನು ಕನ್ನಡ ಚಿತ್ರೋದ್ಯಮದಿಂದಲೇ ಬ್ಯಾನ್ ಮಾಡಬೇಕು ಎನ್ನುವ ಕೂಗು ಕೂಡ ಕೇಳಿ ಬಂದಿದೆ. ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತಾಗಿ ಮೊನ್ನೆ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತ ರಶ್ಮಿಕ ಅವರು ಇದು ಕೇವಲ ವದಂತಿ ಅಷ್ಟೇ, ಆ ರೀತಿಯಾಗಿ ನನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿಲ್ಲ ಎನ್ನುವ ಸ್ಪಷ್ಟನೆ ನೀಡಿದರು. ಬ್ಯಾನ್ ವಿಷಯವಾಗಿ ರಶ್ಮಿಕ ಪರವಾಗಿ ಬ್ಯಾಟ್ ಬೀಸಿರುವ ಡಾಲಿ ಧನಂಜಯ (Daali Dhananjay) ಅವರು “ಎಷ್ಟೇ ಆದರೂ ಅವರು ಕನ್ನಡದ ನಟಿ. ಪ್ರತಿಯೊಬ್ಬರಿಗೂ ಅವರ ವೈಯಕ್ತಿಕ ಬದುಕು ಎನ್ನುವುದು ಇರುತ್ತದೆ. ಸಿನಿಮಾ ರಂಗ ಎಲ್ಲರಿಗೂ ಓಪನ್ ಆಗಿದೆ. ಇಲ್ಲಿ ಯಾರನ್ನು ಬರಬೇಡಿ ಎಂದು ಹೇಳಲಾಗುವುದಿಲ್ಲ. ಏನೇ ಆದರೂ ರಶ್ಮಿಕ ಕನ್ನಡತಿಯೇ” ಎಂದು ಅವರ ಪರ ವಹಿಸಿ ಮಾತನಾಡಿದ್ದಾರೆ. ಅಂದ ಹಾಗೆ ಧನಂಜಯ ಅವರು ರಶ್ಮಿಕ ಅವರೊಂದಿಗೆ ತೆಲುಗಿನ ಪುಷ್ಪ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಚಿತ್ರದ ಎರಡನೇ ಭಾಗ ಶೂಟಿಂಗ್ ಹಂತದಲ್ಲಿದೆ. ಇದನ್ನು ಓದಿ.. Kannada News: ದರ್ಶನ್ ವಿರುದ್ಧ ತಿರುಗಿ ಬಿದ್ದ ಜನ: ಅದೃಷ್ಟ ದೇವತೆಯ ಕುರಿತು ನಾಲಿಗೆ ಹರಿಬಿಟ್ಟ ದರ್ಶನ್, ನಂತರ ಏನಾಗಿದೆ ಗೊತ್ತೆ?