Kannada News: ಗೋಲ್ಡನ್ ಸ್ಟಾರ್ ಗಣೇಶ್ ಮಗಳು ಎಷ್ಟು ದೊಡ್ಡವರಾಗಿದ್ದಾರೆ ಗೊತ್ತೇ? ನೋಡಲು ಕೂಡ ಅಷ್ಟೇ ತುಂಬಾ ಕ್ಯೂಟ್.

37

Kannada News: ನಟ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡದ ಹೆಸರಾಂತ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ. ಅನೇಕ ಜನಪ್ರಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಅವರು ಇಂದಿಗೂ ಕನ್ನಡದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದಾರೆ. ಗಣೇಶ್ ನಟನೆಯ ಮುಂಗಾರು ಮಳೆ ಚಿತ್ರವು ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮತ್ತು ಖ್ಯಾತಿ ತಂದು ಕೊಟ್ಟಿತ್ತು. ಆನಂತರವು ಗಣೇಶ್ ಅನೇಕ ಕಾಮಿಡಿ, ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿದ್ದಾರೆ. ನಟ ಗಣೇಶ್ ಗೆ ತಾವು ಪ್ರೀತಿಸಿದ ಹುಡುಗಿ ಜೊತೆಗೆ ವಿವಾಹವಾಗಿದೆ. ಈ ದಂಪತಿಗಳಿಗೆ ಚಾರಿತ್ರ್ಯ ಮತ್ತು ವಿಹಾನ್ ಎಂಬ ಮುದ್ದಾದ ಮಕ್ಕಳಿದ್ದಾರೆ. ಇತ್ತೀಚಿಗೆ ಗಣೇಶ್ ಪುತ್ರಿ ಚಾರಿತ್ರ್ಯ ಅವರ ಫೋಟೋ ಒಂದು ವೈರಲಾಗಿದೆ. ಪುಟ್ಟ ಹುಡುಗಿಯಂತೆ ಇದ್ದ ಚಾರಿತ್ರ್ಯ ತುಂಬಾ ಬೆಳೆದುಬಿಟ್ಟಿದ್ದಾರೆ. ದೊಡ್ಡ ಹುಡುಗಿಯಂತೆ ಕಾಣುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ನಟ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟದ ಹೆಸರು ಪಡೆಯಲು ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡು ಅಲ್ಲಿಯೇ ನೆಲೆ ಇರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅವರ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಇಷ್ಟೆಲ್ಲ ಗಳಿಸಿದ್ದಾರೆ ಎಂದು ಹೇಳಬಹುದು. ಮೊದಲು ಕಿರುತೆರೆಯ ಮೂಲಕ ಅವರು ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಅವರು ಅನೇಕ ಧಾರವಾಹಿಗಳಲ್ಲಿ ಅವರು ಪಾತ್ರ ಮಾಡಿದ್ದಾರೆ. ಕಾಮಿಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಸಣ್ಣಪುಟ್ಟ ರಿಯಾಲಿಟಿ ಶೋಗಳ ನಿರೂಪಣೆಯನ್ನು ಮಾಡಿದ್ದಾರೆ. ಕಿರುತೆರೆಯಿಂದ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುವಾಗಲೂ ಅವರಿಗೆ ನಾಯಕನ ಪಾತ್ರ ಸಿಗುವುದಿಲ್ಲ. ಆರಂಭದಲ್ಲಿ ಹಲವಾರು ಚಿತ್ರಗಳಲ್ಲಿ ಅವರು ಸಣ್ಣಪುಟ್ಟ ಅತಿಥಿ ಪಾತ್ರಗಳನ್ನು ಮಾಡುತ್ತಾರೆ. ನಂತರ ತಮ್ಮ ಪ್ರತಿಭೆಯಿಂದ ಅವರು ನಾಯಕನಾಗುವ ಅವಕಾಶಟ್ಟಿಸಿಕೊಳ್ಳುತ್ತಾರೆ. ಇದನ್ನು ಓದಿ..Kannada News: ದರ್ಶನ್ ವಿರುದ್ಧ ತಿರುಗಿ ಬಿದ್ದ ಜನ: ಅದೃಷ್ಟ ದೇವತೆಯ ಕುರಿತು ನಾಲಿಗೆ ಹರಿಬಿಟ್ಟ ದರ್ಶನ್, ನಂತರ ಏನಾಗಿದೆ ಗೊತ್ತೆ?

ಗೋಲ್ಡನ್ ಸ್ಟಾರ್ ಗಣೇಶ್ ಅವರು ತುಂಬಾ ಲಕ್ಕಿ ವ್ಯಕ್ತಿ ಎಂದೇ ಹೇಳಬಹುದು. ತಾವು ಪ್ರೀತಿಸಿದ ಹುಡುಗಿಯನ್ನೇ ಅವರು ವಿವಾಹವಾಗುತ್ತಾರೆ. 2008ರಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ತಾವು ಪ್ರೀತಿಸಿದ, ಇಷ್ಟ ಪಟ್ಟ ಶಿಲ್ಪ ಎನ್ನುವವರ ಜೊತೆಗೆ ವಿವಾಹವಾಗುತ್ತಾರೆ. ಈ ಜೋಡಿಗೆ ಇದೀಗ ಚಾರಿತ್ರ್ಯ ಮತ್ತು ವಿಹಾನ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ನಟ ಗಣೇಶ್ ಹಲವಾರು ಸಲ ತಮ್ಮ ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳು ಇದನ್ನು ನೋಡಿ ಖುಷಿ ಪಡುತ್ತಿರುತ್ತಾರೆ. ಆದರೆ ಇತ್ತೀಚಿಗೆ ಗಣೇಶ್ ಪುತ್ರಿ ಚಾರಿತ್ರ್ಯ ಅವರ ಫೋಟೋ ಒಂದು ಹೆಚ್ಚು ಸುದ್ದಿ ಆಗುತ್ತಿದೆ. ಪುಟ್ಟ ಹುಡುಗಿಯಂತೆ ಇದ್ದ ಚಾರಿತ್ರ್ಯ ಈಗ ಸಾಕಷ್ಟು ಬೆಳೆದುಬಿಟ್ಟಿದ್ದಾಳೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಚಿಕ್ಕ ಹುಡುಗಿಯಂತೆ ಅಂದುಕೊಂಡಿದ್ದ ಎಲ್ಲರಿಗೂ ಆಶ್ಚರ್ಯ ನೋಡುವಂತೆ ಅವರು ಹೈಸ್ಕೂಲ್ ಹುಡುಗಿಯಂತೆ ಕಾಣುತ್ತಿದ್ದಾರೆ. ಅಲ್ಲದೆ ಇನ್ನೇನು ಕಾಲೇಜು ಹಂತಕ್ಕೆ ತಲುಪುವಷ್ಟು ಮಗಳು ಬೆಳೆದಿದ್ದಾಳೆ ಎಂದು ಜನರು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಅರೆ, ಗಣೇಶ್ ಪುತ್ರಿ ಎಷ್ಟು ಬೇಗ ಬೆಳೆದುಬಿಟ್ಟಳು ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ. ತುಂಬಾ ಮುದ್ದಾಗಿ ಸುಂದರವಾಗಿರುವ ಗಣೇಶ್ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರ ಎಂದು ಸಹ ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ ಈ ಕುರಿತಾಗಿ ಗಣೇಶ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ರಶ್ಮಿಕಾ ರವರನ್ನು ಬ್ಯಾನ್ ಮಾಡುತ್ತೇವೆ ಎಂದಿದ್ದಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಧನಂಜಯ್. ಕನ್ನಡ ಡೈಲಾಗ್ ಕೇವಲ ಸಿನೆಮಾಗೆ ಮಾತ್ರನ??