Rashmika Mandanna: ಕೊನೆಗೂ ಬುದ್ದಿ ಕಲಿತರೆ ರಶ್ಮಿಕಾ: ಕಾಂತಾರ ನೋಡಿ ಮಾಡಿದ್ದೇನು ಗೊತ್ತೆ?? ರಶ್ಮಿಕಾ ರವರೆ ಹೇಳಿದ್ದೇನು ಗೊತ್ತೆ?

12

Rashmika Mandanna: ನಟಿ ರಶ್ಮಿಕಾ ಮಂದಣ್ಣ ಯಾವಾಗಲೂ ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅದರಲ್ಲೂ ಟ್ರೋಲ್ ಆಗುವುದೇ ಹೆಚ್ಚು. ಅವರ ಮಾತು, ನಡೆ-ನುಡಿ ಇತ್ಯಾದಿ ವಿಷಯಗಳಿಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಟ್ರೋಲ್ ಆಗುವುದು ರಶ್ಮಿಕ ಮಂದಣ್ಣ. ಅವರು ಕರ್ನಾಟಕ (Karnataka) ಬಿಟ್ಟು ಪರ ಭಾಷೆಗಳಲ್ಲಿ ನಟಿಸಲು ಶುರು ಮಾಡಿದರೂ ಕೂಡ ಕನ್ನಡಿಗರು ಮಾತ್ರ ಅವರನ್ನು ಟ್ರೋಲ್ ಮಾಡೋದು ಇನ್ನೂ ಬಿಟ್ಟಿಲ್ಲ. ಯಾಕೆಂದರೆ ಅವರ ವರ್ತನೆಯೂ ಕೂಡ ಅದೇ ರೀತಿ ಇರುತ್ತೆ. ಇನ್ನು ನಟಿ ರಶ್ಮಿಕ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಾಂತಾರ ಚಿತ್ರದ ಬಗ್ಗೆ ಮಾತನಾಡುವ ಮೂಲಕ ಮತ್ತು ಕರ್ನಾಟಕದಲ್ಲಿ ಅವರನ್ನು ಬ್ಯಾನ್ ಮಾಡಿದ್ದಾರೆ ಎನ್ನುವ ವಿಷಯದ ಕುರಿತು ಅವರು ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಮಾಧ್ಯಮದವರು ಈ ಮೊದಲು ಕಾಂತಾರ ಚಿತ್ರವನ್ನು ನೋಡಿದಿರಾ ಎಂದು ಕೇಳಿದಾಗ ಇನ್ನೂ ನೋಡಿಲ್ಲ ಎಂದು ರಶ್ಮಿಕ ಉಡಾಫೆ ಉತ್ತರವನ್ನು ಕೊಟ್ಟಿದ್ದರು. ಇದರಿಂದ ಕನ್ನಡಿಗರು ಕೆಂಡಮಂಡಲರಾಗಿದ್ದರು. ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರೆಟಿಗಳು, ಪರಭಾಷೆಯ ನಟರು ಕೂಡ ಕಾಂತಾರ ಚಿತ್ರವನ್ನು ನೋಡಿ ಮೆಚ್ಚಿಕೊಳ್ಳುತ್ತಿರುವಾಗ ನಮ್ಮದೇ ಕನ್ನಡ ಚಿತ್ರ ಅದರ ಜೊತೆಗೆ ರಶ್ಮಿಕ ಅವರಿಗೆ ಚಿತ್ರರಂಗಕ್ಕೆ ಅವಕಾಶ ಕೊಟ್ಟ ನಟ ನಟಿಸಿರುವ ಚಿತ್ರವನ್ನು ಅವರಿಗೆ ಇನ್ನೂ ನೋಡಲಾಗಿಲ್ಲ ಎಂದು ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆನಂತರ ಅವರು ಸಂದರ್ಶನ ಒಂದರಲ್ಲಿ ತಾವು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರ ಬಗ್ಗೆ ಮಾತನಾಡುತ್ತಾ ಪರಮವ್ ಸ್ಟುಡಿಯೋಸ್ ಹೆಸರು ಹೇಳದೇ ಕೇವಲ ಬೆರಳು ತೋರಿಸಿ ಅದೊಂದು ಸಂಸ್ಥೆ ನಾನೇ ನಟಿಯಾಗಬೇಕೆಂದು ಬಲವಂತವಾಗಿ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದು ಎಂಬ ಅರ್ಥದಲ್ಲಿ ಮಾತನಾಡಿದರು. ಈ ಎಲ್ಲ ವರ್ತನೆಗಳು ಸಾಕಷ್ಟು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಓದಿ.. Biggboss Kannada: 11 ನೇ ವಾರ ನೇರವಾಗಿ ಜೈಲಿಗೆ ಹೋದ ಟೀಮ್ ಕ್ಯಾಪ್ಟನ್ ಅಮೂಲ್ಯ. ಯಾವ ತಪ್ಪಿಗೆ ಗೊತ್ತೇ? ನಿರ್ಧಾರ ಸರೀನಾ??

ಇದೀಗ ನಟಿ ನೆನ್ನೆ ನಡೆದ ಕಾರ್ಯಕ್ರಮ ಒಂದರಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ತಮ್ಮನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎನ್ನುವ ಮಾತುಗಳ ಕುರಿತು ಮಾತನಾಡಿದ್ದಾರೆ. ನನ್ನನ್ನು ಕರ್ನಾಟಕದ ಚಿತ್ರಗಳಿಂದ ಬ್ಯಾನ್ ಮಾಡಲಾಗಿಲ್ಲ. ಇದು ಕೇವಲ ನನ್ನ ಬಗ್ಗೆ ಹರಿದಾಡುತ್ತಿರುವ ವದಂತಿ ಅಷ್ಟೇ. ನನಗೆ ಕನ್ನಡ ಚಿತ್ರಗಳ ಬಗ್ಗೆ ಅಭಿಮಾನವಿದೆ, ಪ್ರೀತಿ ಇದೆ. ನಾನು ಪ್ರತಿಯೊಂದು ಸಾಬೀತು ಮಾಡಬೇಕಿಲ್ಲ. ನನ್ನ ವಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಎಲ್ಲರ ಮುಂದೆ ಹೇಳುವ ಅಗತ್ಯ ನನಗಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಕಾಂತಾರ ಚಿತ್ರದ ಬಗ್ಗೆ ಮಾತನಾಡಿರುವ ನಟಿ ನಾನು ಈಗಾಗಲೇ ಕಾಂತಾರ ಚಿತ್ರವನ್ನು ನೋಡಿದ್ದೇನೆ. ಜೊತೆಗೆ ಚಿತ್ರದ ಬಗ್ಗೆ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದೇನೆ. ಹಾಗೂ ಅವರು ಥ್ಯಾಂಕ್ಯೂ ಎಂದು ಸಹ ಪ್ರತಿಕ್ರಿಯಿಸಿದ್ದಾರೆ ಎಂದು ರಶ್ಮಿಕ ಅವರು ಹೇಳಿದ್ದಾರೆ. ಇದನ್ನು ಓದಿ.. Kannada News: ಅಪ್ಪನಿಗಿಂತ ಒಂದು ಹೆಜ್ಜೆ ಮುಂದೆ ಇರುವ ಉಪ್ಪಿ ಮಗಳು ಐಶ್ವರ್ಯ: ಶಾಲಾ ಭಾಷಣದಲ್ಲಿ ಮಾತನಾಡಿದ್ದು ಕೇಳಿ ಎಲ್ಲರೂ ಶಾಕ್. ಏನು ಹೇಳಿದ್ದಾರೆ ಗೊತ್ತೆ?