Biggboss Kannada: 11 ನೇ ವಾರ ನೇರವಾಗಿ ಜೈಲಿಗೆ ಹೋದ ಟೀಮ್ ಕ್ಯಾಪ್ಟನ್ ಅಮೂಲ್ಯ. ಯಾವ ತಪ್ಪಿಗೆ ಗೊತ್ತೇ? ನಿರ್ಧಾರ ಸರೀನಾ??
Biggboss Kannada: ಬಿಗ್ ಬಾಸ್ ಕನ್ನಡ ಸೀಸನ್9 (BBK9) ರ ಮನೆಯಲ್ಲಿ 10ನೇ ವಾರ ಮುಗಿದಿದೆ. ಈ ವಾರ ಬಿಗ್ ಬಾಸ್ ಮನಂದಿಗೆ ಗ್ರೂಪ್ ಟಾಸ್ಕ್ ನೀಡಿದ್ದರು. ಮಿನುಗು ತಾರೆ ಮತ್ತು ಕೂಲ್ ಕಿಲಾಡಿಗಳು ಎರಡು ತಂಡಗಳಿದ್ದವು, ಮಿನುಗು ತಾರೆ ತಂಡದ ಕ್ಯಾಪ್ಟನ್ ಅಮೂಲ್ಯ (Amulya), ಕೂಲ್ ಕಿಲಾಡಿಗಳು ತಂಡದ ಕ್ಯಾಪ್ಟನ್ ರಾಕೇಶ್ (Rakesh Adiga) ಆಗಿದ್ದರು. ವಾರದ ಎಲ್ಲಾ ಟಾಸ್ಕ್ ಗಳಲ್ಲಿ ಗೆದ್ದು, ವಿನ್ ಆಗಿದ್ದು ಅಮೂಲ್ಯ ಅವರ ಮಿನುಗು ತಾರೆ ತಂಡ..ಹಾಗಾಗಿ ಈ ವಾರ ಕಳಪೆ ಮತ್ತು ಅತ್ಯುತ್ತಮದಲ್ಲಿ, ಅತ್ಯುತ್ತಮವು ಮಿನುಗುತಾರೆ ತಂಡದ ರೋಪೇಶ್ ಶೆಟ್ಟಿ ಅವರಿಗೆ ಹೋಯಿತು.
ಅದರ ಜೊತೆಗೆ ಬೋನಸ್ ಎನ್ನುವ ಹಾಗೆ, ರೂಪೇಶ್ ಶೆಟ್ಟಿ (Roopesh Shetty) ಅವರು ಈ ವಾರ ಮನೆಯ ಕ್ಯಾಪ್ಟನ್ ಕೂಡ ಆಗಿದ್ದಾರೆ. ಆದರೆ ಅಚ್ಚರಿ ಎನ್ನುವ ಹಾಗೆ ಕಳಪೆ ಕೂಡ ವಿನ್ ಆಗಿರುವ ಟೀಮ್ ಗೆ ಹೋಗಿದೆ. ಈ ಬಾರಿ ಕಳಪೆ ಕೊಡುವಾಗ ಕೆಲವರು ರೂಪೇಶ್ ರಾಜಣ್ಣ (Roopesh Rajanna) ಅವರಿಗೆ ಕ್ಯಾಪ್ಟನ್ಸಿ ವಿಚಾರವಾಗಿ ನೀಡಿದರು. ಇನ್ನು ಕೆಲವರು ಅಮೂಲ್ಯ ಅವರಿಗೆ ನೀಡಿದರು, ಬಣ್ಣ ಎರಚುವ ಟಾಸ್ಕ್ ನಲ್ಲಿ ಅಮೂಲ್ಯ ಮತ್ತು ದೀಪಿಕಾ ದಾಸ್ (Deepika Das) ಅವರ ನಡುವೆ ಪೈಪೋಟಿ ಇದ್ದಾಗ, ಅಮೂಲ್ಯ ಕೋಪದಲ್ಲಿ ರೂಲ್ಸ್ ಬ್ರೇಕ್ ಮಾಡಿದರು. ಜೊತೆಗೆ ಪ್ರಾಪರ್ಟಿ ಕೆಳಗೆ ಬೀಳಿಸಿದರು.. ಇದನ್ನು ಓದಿ..Kannada News: ನಿನ್ನೆ ತಾನೇ ಹುಟ್ಟುಹಬ್ಬ ಆಚರಿಸಿಕೊಂಡ ಶಾನ್ವಿ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ? ನಂಬೋಕೆ ಆಗಲ್ಲ, ಇನ್ನು ಶಾಲಾ ಹುಡುಗಿಯಂತೆ ಕಾಣ್ತಿರ.

ಅಷ್ಟು ಅಗ್ರೇಷನ್ ಅಗತ್ಯ ಇರಲಿಲ್ಲ. ಅಮೂಲ್ಯ ಅವರು ತಾಳ್ಮೆಯಿಂದ ಆಡಬೇಕಿತ್ತು, ಕ್ಯಾಪ್ಟನ್ ಆಗಿರುವ ಅವರು, ತಾಳ್ಮೆಯಿಂದ ವರ್ತಿಸಬೇಕು. ಈ ರೀತಿ ಮಾಡಿದ್ದು ತಪ್ಪು ಎನ್ನುವ ಕಾರಣಕ್ಕೆ ಅಮೂಲ್ಯ ಗೌಡ ಅವರಿಗೆ ಮನೆಯವರು ಕಳಪೆ ನೀಡಿ ಜೈಲಿಗೆ ಕಳಿಸಿದ್ದಾರೆ. ಇದೀಗ ಅಮೂಲ್ಯ ಅವರು ಜೈಲು ವಾಸದಲ್ಲಿ ಇದ್ದಾರೆ. ಇಂದು ವೀಕೆಂಡ್ ಎಪಿಸೋಡ್ ನಲ್ಲಿ ಎಲಿಮಿನೇಷನ್ ಕೂಡ ನಡೆಯಲಿದ್ದು, ಯಾರು ಹೊರಹೋಗುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಅಪ್ಪನಿಗಿಂತ ಒಂದು ಹೆಜ್ಜೆ ಮುಂದೆ ಇರುವ ಉಪ್ಪಿ ಮಗಳು ಐಶ್ವರ್ಯ: ಶಾಲಾ ಭಾಷಣದಲ್ಲಿ ಮಾತನಾಡಿದ್ದು ಕೇಳಿ ಎಲ್ಲರೂ ಶಾಕ್. ಏನು ಹೇಳಿದ್ದಾರೆ ಗೊತ್ತೆ?