Kannada News: ನಿನ್ನೆ ತಾನೇ ಹುಟ್ಟುಹಬ್ಬ ಆಚರಿಸಿಕೊಂಡ ಶಾನ್ವಿ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ? ನಂಬೋಕೆ ಆಗಲ್ಲ, ಇನ್ನು ಶಾಲಾ ಹುಡುಗಿಯಂತೆ ಕಾಣ್ತಿರ.
Kannada News: ನಟಿ ಶಾನ್ವಿ ಶ್ರೀವಾಸ್ತವ (Shanvi Srivastava) ಅವರು ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಚಿತ್ರರಂಗದ ಅವರ ಸ್ನೇಹಿತರು, ಅಭಿಮಾನಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಬ್ಯೂಟಿಫುಲ್ ನಟಿಯಾದ ಶಾನ್ವಿ ಶ್ರೀವಾಸ್ತವ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಕನ್ನಡದ ಹಲವಾರು ಚಿತ್ರಗಳಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಅವರು ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇನ್ನು ನೆನ್ನೆ ಅಷ್ಟೇ ಅವರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ನಟಿ ಶಾನ್ವಿ ಅವರ ನಿಜವಾದ ವಯಸ್ಸು ಕೇಳಿದರೆ ನೀವು ಆಶ್ಚರ್ಯ ಪಡ್ತೀರ. ಯಾಕೆಂದರೆ ಅವರಿಗೆ ಅಷ್ಟೊಂದು ವಯಸ್ಸಾಗಿದ್ದರು ಕೂಡ ಇನ್ನೂ ತಮ್ಮ ಸೌಂದರ್ಯವನ್ನು ಕಾಯ್ದುಕೊಂಡು ಬಂದಿದ್ದಾರೆ.
ನಟಿ ಶಾನ್ವಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. 2012ರಲ್ಲಿ ತೆರೆಕಂಡ ತೆಲುಗಿನ ಲವ್ಲಿ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಲವ್ಲಿ ಚಿತ್ರದ ಮೂಲಕ ಅವರು ನಾಯಕಿಯಾಗಿ ಗುರುತಿಸಿಕೊಂಡರು. ಅವರ ನಟನೆಯ ಎರಡನೇ ಚಿತ್ರವಾದ ತೆಲುಗಿನ ಅಡ್ಡಾದಲ್ಲಿ ಅವರು ಫ್ಯಾಷನ್ ಡಿಸೈನರ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಅವರ ನಟನೆ ಮತ್ತು ಪಾತ್ರ ಜನರಿಗೆ ಹೆಚ್ಚು ಇಷ್ಟವಾಗಿತ್ತು. ಆ ಮೂಲಕ ಅವರು ಇನ್ನಷ್ಟು ಜನಪ್ರಿಯತೆ ಪಡೆದುಕೊಂಡರು. 2014ರಲ್ಲಿ ತೆರೆಕಂಡ ಚಂದ್ರಲೇಖ ಸಿನಿಮಾದ ಮೂಲಕ ಅವರು ಕನ್ನಡಕ್ಕೆ ಎಂಟ್ರಿ ಕೊಟ್ಟರು. ಚಿರಂಜೀವಿ ಸರ್ಜಾ ಅವರ ಜೊತೆಗಿನ ಅವರ ನಟನೆ ಕನ್ನಡಿಗರಿಗೆ ಹೆಚ್ಚು ಇಷ್ಟವಾಗಿತ್ತು. ಹಾರರ್ ಕಮ್ ಕಾಮಿಡಿ ಚಿತ್ರವಾದ ಚಂದ್ರಲೇಖದಲ್ಲಿ ಅವರ ಪಾತ್ರ ಕನ್ನಡಿಗರು ಮೆಚ್ಚಿಕೊಂಡಿದ್ದರು. ನಟಿ ಶಾನ್ವಿ 2015ರಲ್ಲಿ ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು. ಇದನ್ನು ಓದಿ..Kannada News: ಮದುವೆ ಆದ ಎರಡೇ ತಿಂಗಳಿಗೆ 8 ಕೆಜಿ ದಪ್ಪ ಆದ ಕಾಜೋಲ್: ಅಸಲಿ ಕಾರಣ ತಿಳಿಸಿ ಹೇಳಿದ್ದೇನು ಗೊತ್ತೇ??

ಮಾಸ್ಟರ್ ಪೀಸ್ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಫಿಲಂ ಫೇರ್ ಪ್ರಶಸ್ತಿಗಾಗಿಯು ಅವರು ನಾಮನಿರ್ದೇಶನಗೊಂಡರು. ಈ ಚಿತ್ರದಲ್ಲಿ ಅವರು ನಟ ಯಶ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ನಟಿ ಶಾನ್ವಿ ದರ್ಶನ್ ಅವರ ಜೊತೆಗೂ ನಟಿಸಿದ್ದಾರೆ. ಅವರೊಂದಿಗಿನ ತಾರಕ್ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿ ಫಿಲಂ ಫೇರ್ ಪ್ರಶಸ್ತಿಯನ್ನು ಸಹ ಗೆದ್ದರು. 2019ರಲ್ಲಿ ನಟಿ ಶಾನ್ವಿ ರಕ್ಷಿತ್ ಶೆಟ್ಟಿ ಅವರೊಂದಿಗೆ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನಟಿಸಿದ್ದಾರೆ. ಆನಂತರ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಗೀತ ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ. ಇನ್ನು ಶಾನ್ವಿಯವರ ನಿಜವಾದ ವಯಸ್ಸಿನ ಬಗ್ಗೆ ಹೇಳುವುದಾದರೆ, ಅವರಿಗೆ ಈಗ 29 ವರ್ಷ ವಯಸ್ಸಾಗಿದೆ. ನಟಿ ಶಾನ್ವಿ ಡಿಸೆಂಬರ್ 8 1993 ರಂದು ವಾರಣಾಸಿಯಲ್ಲಿ ಅವರು ಜನಿಸಿದರು. ಕನ್ನಡ, ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ಅವರು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಓದಿ.. Kannada News: ಅಪ್ಪು ಬಲವನ್ನು ಸೆಳೆಯಲು ರಾಜಕೀಯ ನಾಯಕರ ಹೊಸ ತಂತ್ರ: ಅಶ್ವಿನಿ ಬಳಿ ತೆರಳಿದ ಬಳಿಕ ಆದದ್ದೇನು ಗೊತ್ತೇ?? ಈ ನಿರ್ಧಾರ ಸರಿಯೇ??