Kannada News: ಅಪ್ಪು ಬಲವನ್ನು ಸೆಳೆಯಲು ರಾಜಕೀಯ ನಾಯಕರ ಹೊಸ ತಂತ್ರ: ಅಶ್ವಿನಿ ಬಳಿ ತೆರಳಿದ ಬಳಿಕ ಆದದ್ದೇನು ಗೊತ್ತೇ?? ಈ ನಿರ್ಧಾರ ಸರಿಯೇ??

19

Kannada News: ನಟ ಪುನೀತ್ ರಾಜಕುಮಾರ್ (Puneeth Rajkumar) ಅವರಿಗೂ ರಾಜಕೀಯಕ್ಕೂ ದೂರ ದೂರ ಎಂದು ಹೇಳಬಹುದು. ರಾಜಕೀಯದ ವಿಷಯ ಬಂದರೆ ಅವರು ಯಾವುದೇ ಒಂದು ಪಕ್ಷದ ಪರವಾಗಿ ಯಾವತ್ತೂ ಮಾತನಾಡಿಲ್ಲ. ಯಾವುದೋ ಒಬ್ಬ ನಾಯಕರ ಪರವಾಗಿ ಎಂದು ಪ್ರಚಾರವನ್ನು ಮಾಡಿಲ್ಲ. ಆದರೆ ಎಲ್ಲ ರಾಜಕಾರಣಿಗಳಿಗೆ ಪುನೀತ್ ಎಂದರೆ, ದೊಡ್ಮನೆ ಎಂದರೆ ಅಪಾರ ಗೌರವ, ಪ್ರೀತಿ. ಯಾವುದೇ ಒಂದು ಪಕ್ಷದ ಭೇದವಿಲ್ಲದೆ ಎಲ್ಲ ಪಕ್ಷದ ರಾಜಕಾರಣಿಗಳನ್ನು ಅತ್ಯಂತ ಗೌರವ ಪ್ರೀತಿಯಿಂದ ಪುನೀತ್ ಕಾಣುತ್ತಿದ್ದರು. ಇದೇ ಹಿನ್ನೆಲೆಯಲ್ಲಿ ಪುನೀತ್ ಅವರ ಮೇಲೆ ಅಭಿಮಾನಿಗಳಿರುವ ಪ್ರೀತಿಯನ್ನು ಬಳಸಿಕೊಂಡು ಅಶ್ವಿನಿಯವರನ್ನು (Ashwini Puneeth Rajkumar) ರಾಜಕೀಯಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಾಜ್ಯದ ಪ್ರಮುಖ ಪಕ್ಷಗಳ ನಾಯಕರು ಅಶ್ವಿನಿ ಅವರನ್ನು ರಾಜಕಾರಣಕ್ಕೆ ಕರೆದು ತರುವ ಯೋಜನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಶ್ವಿನಿ ಅವರ ನಿಲುವು ಏನು ಎನ್ನುವುದು ಇಲ್ಲಿ ವಿವರಿಸಲಾಗಿದೆ.

ಈ ಹಿಂದೆಯೂ ಪುನೀತ್ ಅವರನ್ನು ರಾಜಕೀಯಕ್ಕೆ ತರುವ ಹಲವಾರು ಪ್ರಯತ್ನಗಳು ನಡೆದಿದ್ದವು. ಆದರೆ ಆ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು. ರಾಜ್ಯದ ಪ್ರಮುಖ ಪಕ್ಷಗಳ ನಾಯಕರು ಪುನೀತ್ ಅವರ ಮನೆ ಬಾಗಿಲನ್ನು ತಟ್ಟಿ ಪುನೀತ್ ಅವರಿಗೆ ಟಿಕೆಟ್ ನೀಡುವ ಆಮಿಷ ಒಡ್ಡಿದ್ದರು. ಆದರೆ ರಾಜಕೀಯಕ್ಕೂ ತಮಗೂ ಬಲು ದೂರ ಎನ್ನುವ ನಿಲುವು ಹೊಂದಿದ ಪುನೀತ್ ಈ ಅವಕಾಶವನ್ನು ನಿರಾಕರಿಸಿದ್ದರು. ಸ್ವತಹ ಡಿಕೆ ಶಿವಕುಮಾರ್ ಅವರೇ ಪುನೀತ್ ಅವರಿಗೆ ತಮ್ಮ ಪಕ್ಷಕ್ಕೆ ಸೇರಿಕೊಳ್ಳುವ ಅವಕಾಶವನ್ನು ನೀಡಿದ್ದರು. ಈ ವಿಷಯವನ್ನು ಪುನೀತ್ ಅವರು ತೀರಿಕೊಂಡ ನಂತರ ಸ್ವತಹ ಡಿಕೆಶಿ (D K Shivakumar)ಬಹಿರಂಗಗೊಳಿಸಿದ್ದರು. ಆದರೆ ಅವರ ಆಫರ್ ಅನ್ನು ಪುನೀತ್ ನಿರಾಕರಿಸಿದ್ದರು. ಅಲ್ಲದೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಪಕ್ಷದ ನಟ ಜಗ್ಗೇಶ್ (Jaggesh) ಅವರು ಕೂಡ ಬಿಜೆಪಿ (BJP) ಪಕ್ಷಕ್ಕೆ ಪುನೀತ್ ಅವರನ್ನು ಕರೆದು ತರುವ ಪ್ರಯತ್ನ ನಡೆಸಿದ್ದರು. ಆದರೆ ಇದು ಕೂಡ ವಿಫಲವಾಗಿತ್ತು. ಇದನ್ನು ಓದಿ..Kannada News: ಥೇಟ್ ರಶ್ಮಿಕಾ ರವರಂತೆ ಟ್ರೊಲ್ ಆದ ನಿವೇದಿತಾ ಗೌಡ: ಕಿರುತೆರೆ ಸುಂದರಿಯನ್ನು ಟ್ರೊಲ್ ಮಾಡಿದ್ದು ಯಾಕೆ ಗೊತ್ತೆ?

ಇದೀಗ ಪುನೀತ್ ಅವರ ಹೆಸರು ಬಳಸಿಕೊಂಡು ಅಶ್ವಿನಿ ಅವರನ್ನು ರಾಜಕೀಯಕ್ಕೆ ಇಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಎಲ್ಲವನ್ನು ನೇರವಾಗಿ ಹೇಳುವ ಮೂಲಕ ಅಶ್ವಿನಿ ಈ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಕಳೆದ ಹಲವಾರು ದಿನಗಳಿಂದ ರಾಜ್ಯದ ವಿವಿಧ ಪಕ್ಷದ ನಾಯಕರು ಅಶ್ವಿನಿ ಅವರ ಮನೆ ಬಾಗಿಲಿಗೆ ಬಂದು ಅವರಿಗೆ ರಾಜಕೀಯಕ್ಕೆ ಪ್ರವೇಶ ನೀಡಬೇಕಾಗಿ ಕೋರಿಕೊಳ್ಳುತ್ತಿದ್ದಾರಂತೆ. ಆದರೆ ಇದರ ಬಗ್ಗೆ ಪಕ್ಕ ಗ್ಯಾರಂಟಿ ಇರುವ ಅಶ್ವಿನಿ ಅವರು ತಾವು ರಾಜಕೀಯಕ್ಕೆ ಬರುವುದಿಲ್ಲವೆಂದು ನೇರವಾಗಿ ಅವರಿಗೆ ಅರ್ಥ ಮಾಡಿಸಿದ್ದಾರಂತೆ. ಈ ಮೂಲಕ ತಮ್ಮ ಪತಿಯ ಹಾದಿಯಲ್ಲಿಯೇ ನಡೆಯುವ ನಿರ್ಧಾರವನ್ನು ಅಶ್ವಿನಿ ಅವರು ಮಾಡಿದ್ದಾರೆ. ಪುನೀತ್ ಅವರ ನಂತರ ಪಿ ಆರ್ ಕೆ ಪ್ರೊಡಕ್ಷನ್ ಎಲ್ಲ ಜವಾಬ್ದಾರಿಗಳನ್ನು ಅಶ್ವಿನಿ ಅವರು ವಹಿಸಿಕೊಂಡು ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಸಕ್ರಿಯರಾಗಿದ್ದಾರೆ. ತಮ್ಮ ಪತಿ ಹಾಗೆ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಅವರು ನೇರವಾಗಿ ತಿಳಿಸಿದ್ದಾರೆ. ಇದನ್ನು ಓದಿ.. Kannada News: ಮದುವೆ ಆದ ಎರಡೇ ತಿಂಗಳಿಗೆ 8 ಕೆಜಿ ದಪ್ಪ ಆದ ಕಾಜೋಲ್: ಅಸಲಿ ಕಾರಣ ತಿಳಿಸಿ ಹೇಳಿದ್ದೇನು ಗೊತ್ತೇ??