Cricket News: ಬಿಗ್ ಶಾಕ್: ಬಾಂಗ್ಲಾ ದೇಶದ ವಿರುದ್ಧ ಮಂಡಿಯೂರಿದ ಕಾರಣಕ್ಕಾಗಿ ದ್ರಾವಿಡ್ ಹಾಗೂ ರೋಹಿತ್ ಗೆ ಕಾದಿದೆ ಶಾಕ್? ಬಿಸಿಸಿಐ ಮಾಡುತ್ತಿರುವುದೇನು ಗೊತ್ತೇ?

21

Cricket News: ಟೀಮ್ ಇಂಡಿಯಾ (Team India) ನಿರಂತರವಾಗಿ ಎಲ್ಲಾ ಸರಣಿಗಳನ್ನು ಸೋಲುತ್ತಿರುವುದು ಇದೀಗ ಭಾರತ ತಂಡದ ಮುಖಭಂಗಕ್ಕೆ ಕಾರಣವಾಗಿದೆ. ತಂಡದ ಸೋಲಿನ ಅಪಮಾನವನ್ನು ಎದುರಿಸುತ್ತಿರುವ ಬಿಸಿಸಿಐ (BCCI) ಇದೀಗ ತಂಡಕ್ಕೆ ತೀವ್ರ ತರಾಟೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಬಾಂಗ್ಲಾದೇಶದ (India vs Bangladesh) ಪ್ರವಾಸದಲ್ಲಿರುವ ತಂಡವು ಅಲ್ಲೂ ಕೂಡ ಎರಡು ಸೊನ್ನೆ ಅಂತರದಲ್ಲಿ ಸರಣಿಯನ್ನು ಸೋತಿದೆ. ಇದೀಗ ಬಿಸಿಸಿಐ ಈ ಸೋಲನ್ನು ಗಂಭೀರವಾಗಿ ಪರಿಗಣಿಸಿದ್ದು ಟೀಮ್ ಇಂಡಿಯಾ ಬಾಂಗ್ಲಾ ಪ್ರವಾಸವನ್ನು ಮುಗಿಸಿಕೊಂಡು ತವರಿಗೆ ಮರಳಿದ ತಕ್ಷಣವೇ ಪರಾಮರ್ಶೆ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ತಂಡವು ಭಾರತಕ್ಕೆ ಮರಳಿದ ತಕ್ಷಣವೇ ತಂಡದ ಕೋಚ್ ರಾಹುಲ್ ದ್ರಾವಿಡ್ (Rahul Dravid) ನಾಯಕ ರೋಹಿತ್ ಶರ್ಮಾ (Rohit Sharma) ಸೇರಿದಂತೆ ತಂಡದ ಇತರ ಆಟಗಾರರ ಜೊತೆಗೆ ಸಭೆ ನಡೆಸಲಿದ್ದು ರೋಹಿತ್ ಶರ್ಮ ಮತ್ತು ರಾಹುಲ್ ದ್ರಾವಿಡ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಟೀಮ್ ಇಂಡಿಯಾ ನಿರಂತರವಾಗಿ ಸೋಲನ್ನು ಕಾಣುತ್ತಿದೆ. ಕಳೆದ ಏಷ್ಯಾ ಕಪ್ (Asiacup) ನಿಂದ ಕೂಡ ಭಾರತ ಯಾವುದೇ ಪಂದ್ಯದಲ್ಲಿ ಗೆಲ್ಲಲಾಗಿಲ್ಲ. ಏಷ್ಯಾಕಪ್ ನಂತರ ವಿಶ್ವಕಪ್ (T20 World Cup) ನಲ್ಲಿ ಆಡಿದ ಭಾರತ ಅಲ್ಲೂ ಕೂಡ ಸೆಮಿಫೈನಲ್ ಅಂತದವರೆಗೂ ತಲುಪಿ ನೀರಸ ಪ್ರದರ್ಶನ ತೋರಿ ಹೀನಾಯ ಸೋಲು ಕಂಡಿತ್ತು. ಇದಾದ ಮೇಲೆ ನ್ಯೂಜಿಲೆಂಡ್ (India vs New Zealand)ವಿರುದ್ಧದ ಸೀಮಿತ ಓವರ್‌ಗಳ ಏಕದಿನ ಸರಣಿಯಲ್ಲಿಯೂ ಕೂಡ ಭಾರತ ತಂಡ ಸೋಲನ್ನು ಅನುಭವಿಸಿತ್ತು. ಇದೀಗ ತಂಡವು ಬಾಂಗ್ಲಾದೇಶ ಪ್ರವಾಸದಲ್ಲಿದ್ದು ಅಲ್ಲಿ ಮೂರು ಏಕದಿನ ಸರಣಿ ಆಡುತ್ತಿದೆ. ಈಗಾಗಲೇ ಎರಡು ಸರಣಿ ಪಂದ್ಯಗಳು ಮುಗಿದಿದ್ದು ಮೊದಲೆರಡು ಸರಣಿಗಳಲ್ಲೂ ಕೂಡ ತಂಡವು ಸೋಲನ್ನಪ್ಪಿದೆ. ಈ ಮೂಲಕ ತಂಡ ಸರಣಿಯಲ್ಲಿ ಗೆಲ್ಲುವ ಅವಕಾಶವನ್ನೇ ಕೈ ಚೆಲ್ಲಿದೆ. ಇದೀಗ ಕೊನೆಯ ಪಂದ್ಯದಲ್ಲಾದರೂ ಗೆದ್ದು ಮುಜುಗರವನ್ನು ತಪ್ಪಿಸಿಕೊಳ್ಳುವ ಯೋಚನೆಯಲ್ಲಿ ಭಾರತ ತಂಡ ಇದೆ ಎನ್ನಲಾಗಿದೆ. ಇದನ್ನು ಓದಿ..Cricket News: ಕ್ರಿಕೆಟ್ ಶಿಶುಗಳ ವಿರುದ್ಧ ಹೀನಾಯವಾಗಿ ಸೋತರೂ, ಪಂದ್ಯ ಮುಗಿದ ಬಳಿ ರೋಹಿತ್ ಹೇಳಿದ್ದೇನು ಗೊತ್ತೇ??

ಹೀಗೆ ನಿರಂತರವಾಗಿ ಸೋಲನ್ನು ಕಾಣುತ್ತಿರುವ ತಂಡವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ನಿರ್ಧಾರ ಬಿಸಿಸಿಐ ಮಾಡಿದೆ ಎಂದು ವರದಿಯಾಗಿದೆ. ತಂಡದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರುವಲ್ಲಿ ಈ ಸಭೆ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತಿದೆ. ತಂಡದ ಪ್ರಮುಖ ಬೆಳವಣಿಗೆಗಳಿಗೆ ಈ ಸಭೆ ಮುನ್ನುಡಿ ಬರೆಯಲಿದೆ. ತಂಡವು ಈ ರೀತಿಯಾಗಿ ಸೋಲನ್ನು ಅನುಭವಿಸುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ನಿಜಕ್ಕೂ ಇದು ಭಾರತಕ್ಕೆ ಮುಜುಗರದ ಸಂಗತಿ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ಈ ಪರಾಮರ್ಶ ಸಭೆಯ ನಂತರ ಟಿ-20 ವಿಶ್ವಕಪ್ ನ ನಾಯಕತ್ವ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ರೋಹಿತ್ ಶರ್ಮಾ ಅವರ ನಾಯಕತ್ವ ಎಲ್ಲಿಯವರೆಗೂ ಮುಂದುವರೆಯಲಿದೆ ಎನ್ನುವ ಪ್ರಶ್ನೆಯು ಕೂಡ ಎದುರಾಗಿದೆ. ಬಿಸಿಸಿಐ ಈ ಸಭೆಯ ಬಳಿಕ ತೆಗೆದುಕೊಳ್ಳಲಿರುವ ಮಹತ್ವದ ನಿರ್ಧಾರಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇದನ್ನು ಓದಿ.. Cricket News: ಕ್ಯಾಚ್ ಬಿಟ್ಟು ಪಂದ್ಯ ಸೋಲಿಸಿದರೂ, ಚಾಳಿ ಬಿಡದ ರಾಹುಲ್: ಮಾಧ್ಯಮದವರ ಪ್ರಶ್ನೆಗೆ ಫುಲ್ ಗರಂ ಆಗಿ ಹೇಳಿದ್ದೇನು ಗೊತ್ತೇ??