Kannada News: ಥೇಟ್ ರಶ್ಮಿಕಾ ರವರಂತೆ ಟ್ರೊಲ್ ಆದ ನಿವೇದಿತಾ ಗೌಡ: ಕಿರುತೆರೆ ಸುಂದರಿಯನ್ನು ಟ್ರೊಲ್ ಮಾಡಿದ್ದು ಯಾಕೆ ಗೊತ್ತೆ?
Kannada News: ಕಿರುತೆರೆ ನಟಿ ನಿವೇದಿತಾ ಗೌಡ (Niveditha Gowda) ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಸಾಕಷ್ಟು ಕಾರಣಗಳಿಗೆ ಅವರನ್ನು ನೆಟ್ಟಿಗರು ಟೀಕಿಸುತ್ತಿರುತ್ತಾರೆ. ಅವರ ಮಾತು, ವರ್ತನೆ ಇತ್ಯಾದಿ ಹಲವಾರು ಕಾರಣಗಳಿಗಾಗಿ ನಿವೇದಿತ ಸಾಕಷ್ಟು ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ನಂತರ ಅತಿ ಹೆಚ್ಚು ಟ್ರೋಲ್ ಆಗುವ ನಟಿಯಂದರೆ ಅದು ನಿವೇದಿತಾ ಗೌಡ. ಕಿರಿಕ್ ಪಾರ್ಟಿಯಲ್ಲಿ ಅಭಿನಯಿಸಿದ ನಂತರ ರಶ್ಮಿಕ ಮಂದಣ್ಣ ಅವರ ಕುರಿತಾಗಿ ಟೀಕೆಗಳು, ಟ್ರೋಲ್ ಗಳು ಇವತ್ತಿಗೂ ನಡೆಯುತ್ತಲೇ ಇದೆ. ಒಂದು ರೀತಿ ಟ್ರೋಲಿಗರಿಗೆ ರಶ್ಮಿಕ ಮಂದಣ್ಣ ಆಹಾರ ಎಂತಲೇ ಹೇಳಬಹುದು. ಅವರ ನಂತರ ಟ್ರೋಲ್ ಗಳಿಗೆ ಹೆಚ್ಚು ಗುರಿಯಾಗುವ ನಟಿ ಎಂದರೆ ಅದು ನಿವೇದಿತಾ ಗೌಡ. ಇದೀಗ ನಟಿ ನಿವೇದಿತ ಮತ್ತೊಮ್ಮೆ ಟ್ರೋಲ್ಗೆ ಗುರಿಯಾಗಿದ್ದಾರೆ. ಟ್ರೋಲಿಗರಿಗೆ ಫುಡ್ ಆಗಿದ್ದಾರೆ.
ನಟಿ ನಿವೇದಿತಾ ಗೌಡ ಟಿಕ್ ಟಾಕ್ ರೀಲ್ಸ್ ಮೂಲಕ ಜನಪ್ರಿಯತೆ ಪಡೆದುಕೊಂಡವರು. ಸಾಮಾನ್ಯರಂತೆ ಇದ್ದ ನಟಿ ನಿವೇದಿತ ಗೌಡ ಅವರಿಗೆ ಬಿಗ್ ಬಾಸ್ ಅವಕಾಶ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಬಿಗ್ ಬಾಸ್ ನಲ್ಲಿ ಅವಕಾಶ ಪಡೆದುಕೊಂಡ ನಂತರ ನಿವೇದಿತ ಗೌಡ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡರು. ಕಿರುತೆರೆಯಲ್ಲಿ ನಿರಂತರವಾಗಿ ಅವರು ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚಿಗಷ್ಟೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿ ಗಿಲಿ (Gicchi Gili Gili) ಕಾರ್ಯಕ್ರಮದಲ್ಲೂ ಅವರು ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಅವರು ರನ್ನರ್ ಕೂಡ ಆಗಿದ್ದರು. ಕಾಮಿಡಿ ಕಾರ್ಯಕ್ರಮವಾದ ಈ ಕಾರ್ಯಕ್ರಮದಲ್ಲಿ ಅವರ ವಿಶಿಷ್ಟ ಮಾನ್ಯರಿಸಂ ನಿಂದಲೇ ವೀಕ್ಷಕರನ್ನು ರಂಜಿಸುತ್ತಿದ್ದರು. ಕನ್ನಡ ರಾಪರ್ ಚಂದನ್ ಶೆಟ್ಟಿಯ (Chandan Shetty) ಪತ್ನಿ ಆಗಿರುವ ನಿವೇದಿತಾ ಗೌಡ ಈ ಮೊದಲು ರಾಜ ರಾಣಿ ಶೋನಲ್ಲಿ ತಮ್ಮ ಪತಿ ಚಂದನ್ ಜೊತೆಗೆ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದರು. ಇದನ್ನು ಓದಿ..Kannada News: ಕೆಜಿಎಫ್ ಖ್ಯಾತಿಯ ಕೃಷ್ಣ ಜಿ ರಾವ್ ಇನ್ನಿಲ್ಲ, ದಿಡೀರ್ ಎಂದು ಇಹಲೋಕ ತ್ಯಜಿಸಲು ಅಸಲಿ ಕಾರಣವೇನು ಗೊತ್ತೇ??

ಇದೀಗ ನಟಿ ನಿವೇದಿತಾ ಗೌಡ ಮತ್ತೊಮ್ಮೆ ಟ್ರೋಲಿಗರ ಗುರಿಯಾಗಿದ್ದಾರೆ. ಸಾಕಷ್ಟು ಕಾರಣಗಳಿಗೆ ಅವರು ಪದೇಪದೇ ಟ್ರೋಲ್ ಆಗುತ್ತಲೇ ಇರುತ್ತಾರೆ. ಅದರಲ್ಲೂ ನಿವೇದಿತಾ ಗೌಡ ಅವರಿಗೆ ಅಡುಗೆ ಮಾಡುವುದಕ್ಕೆ ಬರುವುದಿಲ್ಲ ಅನ್ನೋದನ್ನು ಅವರೇ ಸಾಕಷ್ಟು ಸಲ ಹಲವಾರು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಅವರು ಬಜ್ಜಿ ಮಾಡಲು ಪ್ರಯತ್ನಿಸಿರುವ ವಿಡಿಯೋ ಒಂದು ವೈರಲ್ ಆಗಿದೆ. ನಟಿ ನಿವೇದಿತ ಮೊದಲ ಸಲ ಬಜ್ಜಿ ಮಾಡಲು ಪ್ರಯತ್ನಿಸಿ ಆ ವಿಡಿಯೋವನ್ನು ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ಬಜ್ಜಿ ಮಾಡಿರುವ ರೀತಿಗೆ, ಅವರ ತರಲೆಗಳಿಗೆ ವೀಕ್ಷಕರು ಕೆಲವರು ನಕ್ಕಿದ್ದರೆ, ಕೆಲವರು ಬಜ್ಜಿ ಕೂಡ ಮಾಡೋದಕ್ಕೆ ಬರೋದಿಲ್ಲ ಎಂದು ಟೀಕಿಸಿದ್ದಾರೆ. ಈ ವಿಡಿಯೋ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ. ಈ ಮೂಲಕ ಮತ್ತೆ ನಿವೇದಿತಾ ಟ್ರೋಲ್ಗೆ ಒಳಗಾಗಿದ್ದಾರೆ. ಇದನ್ನು ಓದಿ.. Kannada News: ಉದ್ದುದ್ದ ಡೈಲಾಗ್ ಹೇಳಿ ಬಡವರು ಬೆಳೆಯಬೇಕು ಎಂದಿದಲ್ಲ, ಈಗ ಪ್ರೇಮ್ ಮಗಳಿಗೆ ಯಾಕೆ ಅವಕಾಶ ಎಂದಿದ್ದಕ್ಕೆ ಡಾಲಿ ಇದ್ದಿದನ್ನು ಇದ್ದ ಹಾಗೆ ಹೇಳಿದ್ದೇನು ಗೊತ್ತೇ?