Kannada News: ಕೆಜಿಎಫ್ ಖ್ಯಾತಿಯ ಕೃಷ್ಣ ಜಿ ರಾವ್ ಇನ್ನಿಲ್ಲ, ದಿಡೀರ್ ಎಂದು ಇಹಲೋಕ ತ್ಯಜಿಸಲು ಅಸಲಿ ಕಾರಣವೇನು ಗೊತ್ತೇ??
Kannada News: ಕೆಜಿಎಫ್ (KGF) ಚಿತ್ರದಲ್ಲಿ ನಟಿಸುವ ಮೂಲಕ ಕೆಜಿಎಫ್ ತಾತ ಎಂದೇ ಜನಪ್ರಿಯತೆ ಪಡೆದುಕೊಂಡಿದ್ದ ಹಿರಿಯ ನಟ ಕೃಷ್ಣ ಜಿ ರಾವ್ (Krishna G Rao) ಅವರು ಉಸಿರಾಟದ ಸಮಸ್ಯೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಅವರು ಬೆಂಗಳೂರಿನ (Bangalore) ಸೀತಾ ಸರ್ಕಲ್ ನಲ್ಲಿರುವ ವಿನಾಯಕ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ ಸೋಂಕಿಗೆ ಸಂಬಂಧಪಟ್ಟ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎಂದು ತಿಳಿದುಬಂದಿತ್ತು. ವೈದ್ಯರು ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರು. 72 ವರ್ಷ ವಯಸ್ಸಾಗಿರುವ ಕೃಷ್ಣ ಜಿ ರಾವ್ ಅವರು ಇದೀಗ ಚಿಕಿತ್ಸೆ ಫಲಕಾರಿಯಾಗದೆ ವಯೋ ಸಹಜ ಕಾಯಿಲೆಯಿಂದಾಗಿ ಮೃತರಾಗಿದ್ದಾರೆ. ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ನೆನ್ನೆ ಇಹಲೋಕ ತ್ಯಜಿಸಿದ್ದಾರೆ.
ಕೆಜಿಎಫ್ ಚಿತ್ರ ಕೇವಲ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಇತಿಹಾಸ ದಾಖಲಿಸಿದ ಚಿತ್ರವಾಗಿದೆ. ಈ ಚಿತ್ರದಲ್ಲಿ ಅಭಿನಯಿಸಿದ ಪ್ರತಿ ಪಾತ್ರಗಳು ಕೂಡ ಹೆಸರು ಮಾಡಿದ್ದಲ್ಲದೆ ಆ ಪಾತ್ರವನ್ನು ಅಭಿನಯಿಸಿದ ಪ್ರತಿ ಪಾತ್ರಧಾರಿಗಳು ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡರು. ಚಿತ್ರದಲ್ಲಿ ತಾತನ ಪಾತ್ರ ಮಾಡಿದ್ದ ಕೃಷ್ಣ ರಾವ್ ಅವರು ಆನಂತರ ಕೆಜಿಎಫ್ ತಾತ ಎಂದು ಪ್ರಸಿದ್ಧಿ ಪಡೆದಿದ್ದರು. 72 ವರ್ಷ ವಯಸ್ಸಾಗಿರುವ ಅವರು ಈ ಹಿಂದೆಯೂ ಕೆಲವು ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಗ ಅವರ ಆರೋಗ್ಯದಲ್ಲಿ ಅಂತಹ ದೊಡ್ಡ ಸಮಸ್ಯೆ ಏನೂ ಎದುರಾಗಿರಲಿಲ್ಲ. ಆದರೆ ಇದೀಗ ಅವರು ಶ್ವಾಸಕೋಶ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದ್ದರು. ಶ್ವಾಸಕೋಶದ ಸೋಂಕಿನಿಂದ ಅವರು ಬಳಲುತ್ತಿದ್ದರು ಎಂದು ವೈದ್ಯರು ದೃಢಪಡಿಸಿದ್ದರು. ಕೃಷ್ಣ ಜಿ ರಾವ್ ಅವರು ಕೆಜಿಎಫ್ ಚಿತ್ರದಲ್ಲಿ ಗುರುತಿಸಿಕೊಂಡವರು. ಆದರೆ ಅವರು ಈ ಮೊದಲು ಕೂಡ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿನ ಸಿನಿಮಾಗಳಲ್ಲಿ ಮಾತ್ರವಲ್ಲ ಅವರು ಹಳೆಯ ಅದೆಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ..Kannada News: ಉದ್ದುದ್ದ ಡೈಲಾಗ್ ಹೇಳಿ ಬಡವರು ಬೆಳೆಯಬೇಕು ಎಂದಿದಲ್ಲ, ಈಗ ಪ್ರೇಮ್ ಮಗಳಿಗೆ ಯಾಕೆ ಅವಕಾಶ ಎಂದಿದ್ದಕ್ಕೆ ಡಾಲಿ ಇದ್ದಿದನ್ನು ಇದ್ದ ಹಾಗೆ ಹೇಳಿದ್ದೇನು ಗೊತ್ತೇ?

ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಅವರು ಇದ್ದರೂ ಕೂಡ ಅವರಿಗೆ ದೊಡ್ಡ ಮಟ್ಟದ ಹೆಸರು ನೀಡಿದ್ದು ಕೆಜಿಎಫ್ ಚಿತ್ರ. ಶಂಕರ್ ನಾಗ್, ಅನಂತ್ ನಾಗ್ ಅವರ ಕಾಲದಲ್ಲಿಯೂ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಕಾಲದಿಂದಲೂ ಅವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿದ್ದು ಮಾತ್ರ ಕೆಜಿಎಫ್ ಚಿತ್ರ. ಆನಂತರ ಅವರು ಹಲವಾರು ಸಿನಿಮಾಗಳ ಅವಕಾಶ ಪಡೆದುಕೊಂಡಿದ್ದರು. ಅಲ್ಲದೆ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಚಿತ್ರವೊಂದು ಬಿಡುಗಡೆಗೆ ಸಜ್ಜುಗೊಂಡಿದೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಕೃಷ್ಣ ರಾವ್ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ವಯೋ ಸಹಜ ಕಾಯಿಲೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಮೃತರಾಗಿದ್ದಾರೆ. ಇದನ್ನು ಓದಿ.. Kannada News: ಖ್ಯಾತ ಅಧಿಕಾರಿ ರೋಹಿಣಿ ರವರ ವಿರುದ್ಧವೇ ಗಂಭೀರ ಆರೋಪ ಮಾಡಿದ ಖ್ಯಾತ ಗಾಯಕ ಲಕ್ಕಿ ಅಲಿ. ಹೇಳಿದ್ದೇನು ಗೊತ್ತೇ?