Kannada News: ಮದುವೆ ಆದ ಎರಡೇ ತಿಂಗಳಿಗೆ 8 ಕೆಜಿ ದಪ್ಪ ಆದ ಕಾಜೋಲ್: ಅಸಲಿ ಕಾರಣ ತಿಳಿಸಿ ಹೇಳಿದ್ದೇನು ಗೊತ್ತೇ??

28

Kannada News: ಭಾರತದ ಸಿನಿಪ್ರಿಯರು ಯಾರು ದಿಲ್ ವಾಲ್ ದುಲ್ಹನಿಯ ಲೇ ಜಾಯೆಂಗೆ (DDLJ) ಸಿನಿಮಾವನ್ನು ಮರೆಯಲು ಸಾಧ್ಯವಿಲ್ಲ. ಈ ಸಿನಿಮಾ ಇಂದಿಗು ಸಹ ಬ್ಲಾಕ್ ಬಸ್ಟರ್. ಡಿ.ಡಿ.ಎಲ್.ಜೆ ಸಿನಿಮಾ ತೆರೆಕಂಡು 25 ವರ್ಷ ಕಳೆದಿದೆ ಆದರೆ ಇಂದಿಗೂ ಈ ಸಿನಿಮಾ ಎಲ್ಲಾ ಸಿನಿಪ್ರಿಯರ ಫೇವರೆಟ್ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ (Shahrukh Khan) ಮತ್ತು ಕಾಜೋಲ್ (Kajol) ಅವರ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈ ಸಿನಿಮಾ ಇಂದ ಕಾಜೋಲ್ ಅವರಿಗೆ ದೊಡ್ಡ ಫ್ಯಾನ್ ಬೇಸ್ ಸಿಕ್ಕಿತ್ತು.

25 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಕಾಜೋಲ್ ಅವರನ್ನು ಭಾರತದಲ್ಲಿ ಎಲ್ಲರೂ ಬಹಳ ಇಷ್ಟಪಡುತ್ತಾರೆ. ಮದುವೆ ಆಗಿ ಮಕ್ಕಳು ಜನಿಸಿದ ನಂತರ ಕಾಜೋಲ್ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಆಗೊಮ್ಮೆ ಈಗೊಮ್ಮೆ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಾರೆ ಕಾಜೋಲ್. ಸಿನಿಮಾ ನಟಿಯರಿಗೆ ಮದುವೆಯಾದ ಮೇಲೆ ಜೀವನ ಬದಲಾಗುವುದು ಸಹಜ, ಕಾಜೋಲ್ ಅವರಿಗು ಅದೇ ರೀತಿ ಆಗಿತ್ತು. ಕಾಜೋಲ್ ಅವರಿಗೆ ಮದುವೆ ಆದ ಎರಡೇ ತಿಂಗಳಿಗೆ ಬರೋಬ್ಬರಿ 8 ಕೆಜಿ ತೂಕ ಜಾಸ್ತಿಯಾಗಿತ್ತಂತೆ. ಅದಕ್ಕೆ ಕಾರಣ ಅವರು ಮದುವೆ ನಂತರ ಪ್ರತಿದಿನ ಬಗೆಬಗೆಯ ಪರೋಟಗಳನ್ನು ತಿನ್ನುತ್ತಿದ್ದರಂತೆ.. ಇದನ್ನು ಓದಿ..Kannada News: ಕೆಜಿಎಫ್ ಖ್ಯಾತಿಯ ಕೃಷ್ಣ ಜಿ ರಾವ್ ಇನ್ನಿಲ್ಲ, ದಿಡೀರ್ ಎಂದು ಇಹಲೋಕ ತ್ಯಜಿಸಲು ಅಸಲಿ ಕಾರಣವೇನು ಗೊತ್ತೇ??

ಆಹಾರ ಪದ್ಧತಿ ಬದಲಾದ ಕಾರಣ ದೇಹದ ತೂಕ ಹೆಚ್ಚಿತು ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. 1999ರ ಫೆಬ್ರವರಿ 4ರಂದು ಕಾಜೋಲ್ ಅವರ ಮದುವೆ ಅಜಯ್ ದೇವಗನ್ (Ajay Devgn) ಅವರೊಡನೆ ಸರಳವಾಗಿ ಮದುವೆಯಾದರು, “ಮದುವೆ ನಂತರ ನಮ್ಮ ಡೈನಿಂಗ್ ಟೇಬಲ್ ಮೇಲೆ ವಿವಿಧ ಪರೋಟಗಳು ಇರುತ್ತಿತ್ತು. ಗೋಬಿ ಪರೋಟ, ಪನೀರ್ ಪರೋಟ, ಆಲೂ ಪರೋಟ.. ಅವುಗಳ ಜೊತೆಗೆ ಬೆಣ್ಣೆ ಸಹ ಇರ್ತಿತ್ತು. ಡಯೆಟ್ ಮಾಡೋದು ಹೇಗೆ ಅಂತ ಕೂಡ ಆಗ ನನಗೆ ಗೊತ್ತಿರಲಿಲ್ಲ..” ಎಂದು ಹೇಳಿದ್ದಾರೆ ನಟಿ ಕಾಜೋಲ್. ಇದೀಗ ಕಾಜೋಲ್ ಅವರು ಸಲಾಂ ವೆಂಕಿ (Salaam Venky) ಎನ್ನುವ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಖ್ಯಾತ ನಟಿ ರೇವತಿ (Revathy) ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದನ್ನು ಓದಿ.. Kannada News: ಥೇಟ್ ರಶ್ಮಿಕಾ ರವರಂತೆ ಟ್ರೊಲ್ ಆದ ನಿವೇದಿತಾ ಗೌಡ: ಕಿರುತೆರೆ ಸುಂದರಿಯನ್ನು ಟ್ರೊಲ್ ಮಾಡಿದ್ದು ಯಾಕೆ ಗೊತ್ತೆ?