Cricket News: ಕ್ರಿಕೆಟ್ ಶಿಶುಗಳ ವಿರುದ್ಧ ಹೀನಾಯವಾಗಿ ಸೋತರೂ, ಪಂದ್ಯ ಮುಗಿದ ಬಳಿ ರೋಹಿತ್ ಹೇಳಿದ್ದೇನು ಗೊತ್ತೇ??

19

Cricket News: ಬಾಂಗ್ಲಾದೇಶದ (India vs Bangladesh) ವಿರುದ್ಧ ನಡೆಯುತ್ತಿರುವ ಏಕದಿನ ಸರಣಿ ಪಂದ್ಯದಲ್ಲಿ ಭಾರತ (Team India) ಮತ್ತೆ ಎಡವಿದೆ. ಎರಡನೇ ಪಂದ್ಯದಲ್ಲೂ ಭಾರತ ಹೀನಾಯ ಸೋಲನ್ನು ಕಂಡಿದೆ. ಭಾನುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ಸೋಲಿನ ರುಚಿ ಕಾಣಬೇಕಾಗಿತ್ತು. ಇದೀಗ ಮಾಡು ಇಲ್ಲವೇ ಮಡಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದ ಎರಡನೇ ಪಂದ್ಯದಲ್ಲೂ ಭಾರತ ಮತ್ತೆ ಅದೇ ಹಳೆ ಚಾಳಿ ಶುರು ಮಾಡಿಕೊಂಡಿದೆ. ಇಷ್ಟೆಲ್ಲ ಹರಸಾಹಸ ಪಟ್ಟರು ಗೆಲ್ಲಲಾಗದೆ ಗೆಲ್ಲದೆ ಸೋಲಿನ ಮೊರೆಹೋಗಿದೆ. ಈ ಮೂಲಕ ಭಾರತವು ಬಾಂಗ್ಲಾದೇಶ ವಿರುದ್ಧದ ಸರಣಿಯ ಅವಕಾಶವನ್ನು ಕಳೆದುಕೊಂಡಂತಾಗಿದೆ. ಬಾಂಗ್ಲಾದೇಶ ತನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಈ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇದೀಗ ತಂಡದ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮ (Rohit Sharma) ಮಾಧ್ಯಮದವರ ಜೊತೆಗೆ ತಂಡದ ಸೋಲಿನ ಕುರಿತಾಗಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಆರು ರನ್ಗಳ ರೋಚಕ ಜಯದೊಂದಿಗೆ ಬಾಂಗ್ಲಾದೇಶ ಗೆದ್ದು ಬೀಗಿದೆ. ಈ ಮೂಲಕ ಬಾಂಗ್ಲಾ ಎರಡು ಸೊನ್ನೆ(2-0) ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. 69 ರನ್ಗೆ 6 ವಿಕೆಟ್ಗಳನ್ನು ಕಬಳಿಸಿದ ಭಾರತೀಯ ಆಟಗಾರರು ನಂತರ ಬಾಂಗ್ಲಾದ ಬ್ಯಾಟರ್ ಗಳನ್ನು ಕಟ್ಟಿ ಹಾಕಲು ಪರದಾಡಿದರು. ಸಂಪೂರ್ಣವಾಗಿ ಫೀಲ್ಡಿಂಗ್ ವೈಫಲ್ಯ ಎದ್ದು ಕಾಣುತ್ತಿತ್ತು. ಹೀಗೆ ಇಂಡಿಯಾ ಸರಣಿಯನ್ನು ಕಳೆದುಕೊಂಡಿದೆ. ನೆನ್ನೆ ಪಂದ್ಯ ಸೋಲಿನ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ರೋಹಿತ್ ಶರ್ಮ ತಂಡದ ವೈಫಲ್ಯದ ಕುರಿತಾಗಿ ಮಾತನಾಡಿದ್ದಾರೆ. ಯಾವೆಲ್ಲ ಅಂಶಗಳು ಭಾರತದ ಸೋಲಿಗೆ ಕಾರಣವಾಯಿತು ಎನ್ನುವುದರ ಕುರಿತು ಅವರು ವಿವರಿಸಿದ್ದಾರೆ. ಜೊತೆಗೆ ತಮ್ಮ ಬೇಸರವನ್ನು ಕೂಡ ಹೊರಹಾಕಿದ್ದಾರೆ. ಇದನ್ನು ಓದಿ.. Cricket News: ಕ್ಯಾಚ್ ಬಿಟ್ಟು ಪಂದ್ಯ ಸೋಲಿಸಿದರೂ, ಚಾಳಿ ಬಿಡದ ರಾಹುಲ್: ಮಾಧ್ಯಮದವರ ಪ್ರಶ್ನೆಗೆ ಫುಲ್ ಗರಂ ಆಗಿ ಹೇಳಿದ್ದೇನು ಗೊತ್ತೇ??

ಮಾಧ್ಯಮದವರ ಜೊತೆಗೆ ಮಾತನಾಡಿರುವ ನಾಯಕ ರೋಹಿತ್ ಶರ್ಮ ತಮ್ಮ ಇಂಜುರಿ ಬಗ್ಗೆ ವಿವರಿಸಿದ್ದಾರೆ. “ನನಗೆ ಎಡಗೈ ಬೆರಳು ಗಾಯವಾಗಿದೆ. ಮೂಳೆಗೆ ಅಷ್ಟು ಪೆಟ್ಟಾಗಿಲ್ಲದ ಕಾರಣ ತಕ್ಕಮಟ್ಟಿಗೆ ಬ್ಯಾಟಿಂಗ್ ಮಾಡಿದೆ. ಇಲ್ಲವಾಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಆಟಗಾರರು ಪಂದ್ಯದ ವೇಳೆ ಗಾಯ ಮಾಡಿಕೊಳ್ಳುವುದು ಅಷ್ಟು ಒಳ್ಳೆಯ ಬೆಳವಣಿಗೆಯಲ್ಲ” ಎಂದು ಅವರು ಹೇಳಿದ್ದಾರೆ. ಮುಂದುವರೆದು “ಯಾವುದೇ ಪಂದ್ಯದಲ್ಲಿ ಗೆದ್ದಾಗ ಅಥವಾ ಸೋತಾಗ ಅದರಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎರಡು ಅಂಶಗಳು ಸಿಗುತ್ತವೆ. ನಾವು ಎರಡು ಅಂಶಗಳನ್ನು ತೆಗೆದುಕೊಂಡು ಅದರಿಂದ ಏನನ್ನು ಕಲಿಯಬೇಕು ಯಾವುದನ್ನು ಅಳವಡಿಸಿಕೊಳ್ಳಬೇಕು ಎನ್ನುವುದರ ಕಡೆಗೆ ಗಮನಹರಿಸಬೇಕು. ಆರಂಭದಲ್ಲಿ ನಾವು ಅತ್ಯುತ್ತಮವಾಗಿ ಆಟವನ್ನು ಶುರು ಮಾಡಿದೆವು. ಆದರೆ ಮಧ್ಯಮ ಓವರ್ ಹಾಗೂ ಅಂತ್ಯದಲ್ಲಿ ಆದ ಬದಲಾವಣೆ ಮತ್ತು ಬೆಳವಣಿಗೆಗಳು ನಮಗೆ ಬೇಸರ ತರಿಸಿದವು. ನಾವು ನಮ್ಮ ಪ್ರಯತ್ನವನ್ನು ಮಾಡಿದ್ದೇವೆ, ಆದರೆ ಗೆಲುವು ನಮ್ಮದಾಗಲಿಲ್ಲ. ಆದರೆ ಮುಂದಿನ ಸಲ ಚೆನ್ನಾಗಿ ಆಡುವ ಭರವಸೆ ಇದೆ” ಎಂದು ಅವರು ಹೇಳಿದ್ದಾರೆ. ಇದನ್ನು ಓದಿ..Cricket News: ಬಿಗ್ ಷಾಕಿಂಗ್: ಭಾರತ ತಂಡದ ಆಟಗಾರಿಗೆ ಬಿಗ್ ಶಾಕ್ ನೀಡಲು ಮುಂದಾದ ಬಿಸಿಸಿಐ: ಕಳಪೆ ಪ್ರದರ್ಶನಕ್ಕೆ ಬೇಸತ್ತು ಏನು ಮಾಡಲು ಹೊರಟಿದೆ ಗೊತ್ತೇ?