Kannada News: ಉದ್ದುದ್ದ ಡೈಲಾಗ್ ಹೇಳಿ ಬಡವರು ಬೆಳೆಯಬೇಕು ಎಂದಿದಲ್ಲ, ಈಗ ಪ್ರೇಮ್ ಮಗಳಿಗೆ ಯಾಕೆ ಅವಕಾಶ ಎಂದಿದ್ದಕ್ಕೆ ಡಾಲಿ ಇದ್ದಿದನ್ನು ಇದ್ದ ಹಾಗೆ ಹೇಳಿದ್ದೇನು ಗೊತ್ತೇ?

45

Kannada News: ಚಿತ್ರರಂಗದಲ್ಲಿ ಮೊದಲಿನಿಂದಲೂ ನೆಪೋಟಿಸಂ ಕುರಿತ ವಾದ ಪ್ರತಿವಾದ ನಡೆಯುತ್ತಲೇ ಇರುತ್ತದೆ. ಸ್ಟಾರ್ ಮಕ್ಕಳು ಸಿನಿಮಾ ಗೆ ಬಂದರೆ, ಚಿತ್ರದಲ್ಲಿ ಅವಕಾಶ ಪಡೆದುಕೊಂಡರೆ ಕೆಲವರು ಆ ಕುರಿತು ಟೀಕೆ ಮಾಡುತ್ತಾರೆ. ಇನ್ನು ಕೆಲವರು ಕೇವಲ ಸ್ಟಾರ್ ಮಕ್ಕಳಾದರೆ ಸಾಲುವುದಿಲ್ಲ, ಪ್ರತಿಭೆ ಪರಿಶ್ರಮ ಇದ್ದರೆ ಮಾತ್ರ ಜನ ಸಿನಿಮಾ ನೋಡುತ್ತಾರೆ ಎಂದು ಪ್ರತಿ ವಾದಿಸುತ್ತಾರೆ. ಇಂತಹ ಚರ್ಚೆಗಳು ಯಾವಾಗಲು ಇದ್ದೇ ಇರುತ್ತದೆ. ಇದೀಗ ಇದೇ ರೀತಿಯ ಆರೋಪವನ್ನು ನಟ ಡಾಲಿ ಧನಂಜಯ್ (Dhananjay) ಎದುರಿಸುತ್ತಿದ್ದಾರೆ. ಬಡವರ ಮಕ್ಕಳು ಬೆಳಿಬೇಕು ಕಂಡ್ರಯ್ಯ ಎಂದು ಹೇಳುವ ಅವರು ಇದೀಗ ನಟ ನೆನಪಿರಲಿ ಪ್ರೇಮ್ (Nenapirali Prem) ಅವರ ಪುತ್ರಿಗೆ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಡಾಲಿ ಧನಂಜಯ್ ಅವರು ಯಾವುದೇ ಚಿತ್ರರಂಗದ ಕುಟುಂಬದ ಹಿನ್ನೆಲೆ ಇಲ್ಲದೆ ಬಂದವರು. ತಮ್ಮ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಇಷ್ಟೆಲ್ಲ ಹೆಸರು ಮಾಡಿದ್ದಾರೆ. ಇದೀಗ ಅವರ ನಿರ್ಮಾಪಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಮೊನ್ನೆ ಮೊನ್ನೆ ಅಷ್ಟೇ ಅವರ ನಿರ್ಮಾಣ ಸಂಸ್ಥೆಯಾದ ಡಾಲಿ ಪಿಚ್ಚರ್ಸ್ ವತಿಯಿಂದ ಟಗರು ಪಲ್ಯ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತ ಆಯ್ಕೆಯಾಗಿದ್ದಾರೆ. ಆದರೆ ಈ ವಿಷಯವನ್ನು ಘೋಷಣೆ ಮಾಡಿದ ನಂತರ ಇದರ ಕುರಿತಾಗಿ ಸಾಕಷ್ಟು ಟಿಕೆಗಳು ಕೇಳಿ ಬರುತ್ತಿವೆ. ಧನಂಜಯ್ ನಟನೆಯ ಹೆಡ್ ಬುಷ್ (Head Bush) ಚಿತ್ರ ಕೆಲವು ಕಾರಣಗಳಿಗೆ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ಆ ವೇಳೆ ಅವರು ಹೇಳಿದ್ದ ಬಡವರ ಮಕ್ಕಳು ಬೆಳಿಬೇಕು ಕಂಡ್ರಯ್ಯ ಎನ್ನುವ ಮಾತು ಸಾಕಷ್ಟು ವೈರಲ್ ಆಗಿತ್ತು. ಈಗ ಇದೇ ಮಾತನ್ನು ಮತ್ತೆ ನೆನಪಿಸಿ ಧನಂಜಯ್ ಅವರ ವಿರುದ್ಧ ಕೆಲವು ಟೀಕೆಗಳು ಕೇಳಿ ಬರುತ್ತಿವೆ. ಇದನ್ನು ಓದಿ..Kannada News: ಎಲ್ಲರೂ ಹಣ ಕೊಡುತ್ತೇನೆ ಎಂದರೂ, ಪುನೀತ್ ಪರ್ವಕ್ಕೆ ಏಕಾಂಗಿಯಾಗಿ ಅಶ್ವಿನಿ ಮೇಡಂ ಖರ್ಚು ಮಾಡಿದ್ದು ಎಷ್ಟು ಗೊತ್ತೇ??

ತಮ್ಮ ಲಾಭಕ್ಕಾಗಿ ತಾವು ಏನು ಬೇಕಾದರೂ ಹೇಳುತ್ತಾರೆ. ಈಗ ನೋಡಿದರೆ ಸ್ಟಾರ್ ನಟನ ಪುತ್ರಿಗೆ ಅವಕಾಶ ನೀಡಿದ್ದಾರೆ. ಇಲ್ಲಿ ಯಾರು ಬಡವರ ಮಕ್ಕಳು ಎಂದೆಲ್ಲ ಪ್ರಶ್ನೆಸಲಾಗುತ್ತಿದೆ. ತಾವು ಬಡವರ ಮಗನಾಗಿದ್ದರೂ ಬೆಳೆಯಬೇಕು, ಆದರೆ ಬೇರೆಯವರ ಮೇಲೆ ಅವರಿಗೆ ನಂಬಿಕೆ ಇಲ್ಲ. ಬೇರೆ ಬಡವರ ಮಕ್ಕಳನ್ನು ಬೆಳೆಸುವ ಆಸೆ ಇವರಿಗೆ ಇದ್ದಂತಿಲ್ಲ ಎಂದು ಹಲವರು ವ್ಯಂಗ್ಯ ವಾಡಿದ್ದಾರೆ. ಆದರೆ ಗಮನಿಸಬೇಕಾದ ಸಂಗತಿ ಏನೆಂದರೆ ಅಮೃತ ನೆನಪಿರಲಿ ಪ್ರೇಮ್ ಪುತ್ರಿಯೇ ಇರಬಹುದು. ಇದರ ಹೊರತಾಗಿಯೂ ಈ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ, ಚಿತ್ರರಂಗದ ಹಿನ್ನೆಲೆ ಇರದ ಕಲಾವಿದರಿಗೂ ಅವಕಾಶ ನೀಡಲಾಗಿದೆಯಂತೆ. ಚಿತ್ರದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದ್ದು ನಾಯಕನಾಗಿ ನಾಗಭೂಷಣ್ (Nagabhushan) ನಟಿಸುತ್ತಿದ್ದಾರೆ. ನಿರ್ದೇಶಕ ಉಮೇಶ್ ಕೆ (Umesh K) ಕೃಪ ಅವರಿಗೂ ಕೂಡ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ. ಹೀಗಿದ್ದರೂ ಕೂಡ ಧನಂಜಯ್ ಈ ಚಿತ್ರದಲ್ಲಿ ಉಮೇಶ್ ಅವರಿಗೆ ಅವಕಾಶ ನೀಡಿದ್ದಾರೆ. ಇದನ್ನು ಓದಿ.. Kannada News: ಕ್ರಾಂತಿ ಸಿನೆಮಾದ ಮೊದಲ ಹಾಡು, “ಧರಣಿ” ಹಾಡು ಯಾರ ಕುರಿತು ಎಂದು ತಿಳಿದರೆ, ರೋಮ ಎಲ್ಲ ಎದ್ದು ನಿಂತು, ಕುಂತಲ್ಲೇ ಡಾನ್ಸ್ ಮಾಡುತ್ತೀರಿ.