Cricket News: ಕ್ಯಾಚ್ ಬಿಟ್ಟು ಪಂದ್ಯ ಸೋಲಿಸಿದರೂ, ಚಾಳಿ ಬಿಡದ ರಾಹುಲ್: ಮಾಧ್ಯಮದವರ ಪ್ರಶ್ನೆಗೆ ಫುಲ್ ಗರಂ ಆಗಿ ಹೇಳಿದ್ದೇನು ಗೊತ್ತೇ??
Cricket News: ಬಾಂಗ್ಲಾದೇಶ ವಿರುದ್ಧ (India vs Bangladesh) ಮೂರು ದಿನಗಳ ಏಕದಿನ ಸರಣಿ ನಡೆಯುತ್ತಿದೆ. ಮೊನ್ನೆ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ (Team India) ಸೋಲನ್ನು ಕಂಡಿದೆ. ಗೆಲ್ಲುವ ಲೆಕ್ಕಾಚಾರ ಇಟ್ಟುಕೊಂಡಿದ್ದ ಭಾರತ ಸಾಕಷ್ಟು ಕಾರಣಗಳಿಗೆ ಎಡವಿ ಸೊನ್ನೆ – ಒಂದು (0-1) ಅಂತರದಿಂದ ಸೋಲನ್ನಪ್ಪಿದೆ. ಇನ್ನು ಇಂದು ನಡೆಯಲಿರುವ ಪಂದ್ಯದಲ್ಲಿ ತಂಡಕ್ಕೆ ಮಾಡು ಇಲ್ಲವೇ ಮಡಿ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಭಾನುವಾರ ಪಂದ್ಯದ ಸೋಲಿನ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ್ದ ಕೆ ಎಲ್ ರಾಹುಲ್ ಕೆಲವು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದರು. ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ (Rishab Pant) ಇರಬೇಕಾದ ಜಾಗದಲ್ಲಿ ಕೆಎಲ್ ರಾಹುಲ್ (K L Rahul) ವಿಕೆಟ್ ಕೀಪ್ ಮಾಡಿದ್ದರು. ಕೊನೆ ಕ್ಷಣದಲ್ಲಿ ಆದ ಈ ಬದಲಾವಣೆಯ ಕುರಿತು ವೀಕ್ಷರಿಗೆ ಯಾವ ಸ್ಪಷ್ಟನೆಯೂ ಇರಲಿಲ್ಲ. ಈ ಕುರಿತು ಮಾತನಾಡಿರುವ ಕೆ ಎಲ್ ರಾಹುಲ್ ಕೆಲವು ಆಶ್ಚರ್ಯಕರ ಹೇಳಿಕೆಗಳನ್ನು ನೀಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಕಳೆದ ಭಾನುವಾರ ನಡೆದಿತ್ತು. ಈ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ತಂಡ ಸೋಲಿನ ರುಚಿ ಕಾಣಬೇಕಾಗಿತ್ತು. ಪಂದ್ಯ ಸೋತ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ್ದ ಉಪನಾಯಕ ಕೆ ಎಲ್ ರಾಹುಲ್ ಕೆಲವು ಸಂಗತಿಗಳನ್ನು ತಿಳಿಸಿದ್ದಾರೆ. ತಂಡದ ವಿಕೆಟ್ ಕೀಪರ್ ಆಗಿದ್ದ ರಿಷಬ್ ಅವರು ಈ ಪಂದ್ಯದಿಂದ ಹೊರಗುಳಿಯಲು ಕಾರಣವೇನು ಎಂದು ಕೇಳಲಾಗಿತ್ತು. ಏಕೆಂದರೆ ಕೊನೆಯ ಕ್ಷಣದವರೆಗೂ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದ ರಿಷಬ್ ಪಂತ್ ಅವರನ್ನು ಇನ್ನೇನು ಪಂದ್ಯ ಆರಂಭವಾಗುವ ಕೆಲವು ಕ್ಷಣಗಳ ಮೊದಲು ಪಂದ್ಯದಿಂದ ಹೊರಗಿಡಲಾಗಿತ್ತು. ಈ ಬಗ್ಗೆ ವೀಕ್ಷಕರಿಗೆ ಯಾವ ಸ್ಪಷ್ಟನೆಯೂ ಇರಲಿಲ್ಲ. ಪಂತ್ ಗೆ ಏನಾಯಿತು? ಯಾಕೆ ಅವರು ತಂಡದಿಂದ ಹೊರ ಹಾಕಲ್ಪಟ್ಟಿದ್ದಾರೆ ಎನ್ನುವ ಆತಂಕ ಮತ್ತು ಪ್ರಶ್ನೆಗಳು ಎದುರಾಗಿದ್ದವು. ಇದರ ಬಗ್ಗೆ ಕೆಎಲ್ ರಾಹುಲ್ ಅವರಲ್ಲಿ ಕೇಳಿದಾಗ ಅವರು ಬೇರೆಯದೇ ರೀತಿ ಉತ್ತರಿಸಿದ್ದಾರೆ. ಇದನ್ನು ಓದಿ.. Cricket News: ಬಿಗ್ ಷಾಕಿಂಗ್: ಭಾರತ ತಂಡದ ಆಟಗಾರಿಗೆ ಬಿಗ್ ಶಾಕ್ ನೀಡಲು ಮುಂದಾದ ಬಿಸಿಸಿಐ: ಕಳಪೆ ಪ್ರದರ್ಶನಕ್ಕೆ ಬೇಸತ್ತು ಏನು ಮಾಡಲು ಹೊರಟಿದೆ ಗೊತ್ತೇ?

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ತಂಡದ ಉಪನಾಯಕ ಕೆಎಲ್ ರಾಹುಲ್, ರಿಷಬ್ ಪಂತ್ ಅವರನ್ನು ಪಂದ್ಯದಿಂದ ಕೈ ಬಿಡಲಾಗಿರುವುದರ ಕುರಿತು ಮಾತನಾಡಿದ್ದಾರೆ. ಮೊದಲನೇ ಏಕದಿನ ಪಂದ್ಯಕೂ ಮೊದಲು ನನಗೆ ರಿಷಬ್ ಅವರ ಕುರಿತಾಗಿ ಯಾವ ಮಾಹಿತಿಯೂ ಇರಲಿಲ್ಲ. ಇನ್ನೇನು ಪಂದ್ಯ ಶುರುವಾಗಬೇಕು ಎನ್ನುವ ಕೊನೆಯ ಕ್ಷಣದಲ್ಲಿ ನಾನೇ ವಿಕೆಟ್ ಕೀಪ್ ಮಾಡಬೇಕೆನ್ನುವುದು ನನಗೆ ತಿಳಿಯಿತು. ಅಲ್ಲಿಯವರೆಗೆ ನನಗೆ ಏನೆಂದು ಗೊತ್ತಿರಲಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಈ ವಿಷಯದ ಕುರಿತು ಒಂದು ಸಣ್ಣ ಮಾಹಿತಿಯೂ ಇರಲಿಲ್ಲ. ಕೊನೆ ಕ್ಷಣದಲ್ಲಿ ಡ್ರೆಸ್ಸಿಂಗ್ ರೂಮ್ ನಲ್ಲಿ ರಿಷಬ್ ಪಂತ್ ಇಲ್ಲದಿರುವುದು ನೋಡಿ ನನಗೆ ಸಂದೇಹ ಮೂಡಿತು. ಆದರೆ ಅವರನ್ನು ವೈದ್ಯಕೀಯ ಕಾರಣಗಳಿಗಾಗಿ ತಂಡದಿಂದ ಹೊರಗಿಡಲಾಗಿದೆ ಎಂದು ನನಗೆ ತಿಳಿಸಲಾಯಿತು. ನಾವು ಪಂದ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿತ್ತು. ಹಾಗಾಗಿ ನಾನು ಹೆಚ್ಚಿನ ಪ್ರಶ್ನೆಗಳನ್ನು ಕೇಳಲು ಹೋಗಲಿಲ್ಲ. ರಿಷಬ್ ಪಂತ್ ಅವರನ್ನು ತಂಡದಿಂದ ವೈದ್ಯಕೀಯ ಕಾರಣಗಳಿಗೆ ಹೊರಗಿಡಲಾಗಿದೆ. ಆದರೆ ನಿಖರವಾಗಿ ಅವರಿಗೆ ಏನಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಇದರ ಬಗ್ಗೆ ನಿಮಗೆ ಸ್ಪಷ್ಟನೆ ಬೇಕಿದ್ದರೆ ಹೋಗಿ ವೈದ್ಯಕೀಯ ತಂಡವನ್ನೇ ಕೇಳಿ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿ ವಿಚಾರಿಸಿ ಎಂದು ಅವರು ನೇರವಾಗಿ ಉತ್ತರಿಸಿದ್ದಾರೆ. ಇದನ್ನು ಓದಿ.. Relationship: ಯಾವುದೇ ಹುಡುಗಿ ನಿಮ್ಮ ಜೊತೆ ಮಾತನಾಡಬೇಕು ಎಂದರೆ, ಈ ಮೂರು ಸಂಕೇತಗಳನ್ನು ನೀಡುತ್ತಾರೆ. ಕೊಟ್ಟ ತಕ್ಷಣವೇ ಮಾತನಾಡಿ.