Kannada News: ಖ್ಯಾತ ಅಧಿಕಾರಿ ರೋಹಿಣಿ ರವರ ವಿರುದ್ಧವೇ ಗಂಭೀರ ಆರೋಪ ಮಾಡಿದ ಖ್ಯಾತ ಗಾಯಕ ಲಕ್ಕಿ ಅಲಿ. ಹೇಳಿದ್ದೇನು ಗೊತ್ತೇ?
Kannada News: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ದಕ್ಷ ಆಡಳಿತ, ಪ್ರಾಮಾಣಿಕತೆಯಿಂದಲೇ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಡಿಸಿಯಾಗಿ ಅವರ ಗಟ್ಟಿ ನಿರ್ಧಾರಗಳು, ಹೋರಾಟಗಳು ಮತ್ತು ತೀರ್ಮಾನಗಳು ನಿಜಕ್ಕೂ ಆಶ್ಚರ್ಯ ತರಿಸುತ್ತದೆ. ಅಷ್ಟರಮಟ್ಟಿಗೆ ರೋಹಿಣಿ ಸಿಂಧೂರಿ ಎಲ್ಲೆಡೆ ಹೆಸರು ಮಾಡಿದ್ದಾರೆ ಎಂದು ಹೇಳಬಹುದು. ಆದರೆ ಇದೀಗ ರೋಹಿಣಿ ಸಿಂಧೂರಿ ಅವರು ಒಂದು ಆರೋಪವನ್ನು ಎದುರಿಸುತ್ತಿದ್ದಾರೆ. ಅಕ್ರಮವಾಗಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಅವರ ತಲೆ ಮೇಲಿದೆ. ಹೌದು, ರೋಹಿಣಿ ಸಿಂಧೂರಿ ಮತ್ತು ಅವರ ಪತಿ ಸುಧೀರ್ ರೆಡ್ಡಿ (Sudhir Reddy) ಅಕ್ರಮವಾಗಿ ಜಮೀನು ಅತಿಕ್ರಮಣ ಮಾಡಿದ್ದಾರೆ ಎನ್ನುವ ಆರೋಪವನ್ನು ಎದುರಿಸಬೇಕಾಗಿದೆ. ಜೊತೆಗೆ ಈ ಒಂದು ಆರೋಪವನ್ನು ಮಾಡಿರುವುದು ಬಾಲಿವುಡ್ ನ ಖ್ಯಾತ ಗಾಯಕ ಮತ್ತು ನಟರಾದ ಲಕ್ಕಿ ಅಲಿ (Lucky Ali).
ಬೆಂಗಳೂರಿನ ಹೊರವಲಯದಲ್ಲಿ ತಮ್ಮ ಫಾರಂ ಹೌಸ್ ನಲ್ಲಿ ಸಾಕಷ್ಟು ವರ್ಷಗಳಿಂದಲೂ ವಾಸವಾಗಿದ್ದು ಇದೀಗ ಈ ಜಮೀನನ್ನು ಅಕ್ರಮವಾಗಿ ಅತಿಕ್ರಮಣ ಮಾಡಿದ್ದಾರೆಂದು ಬಾಲಿವುಡ್ ನ ಖ್ಯಾತ ಗಾಯಕ ಲಕ್ಕಿ ಅಲಿ ಆರೋಪಿಸಿದ್ದಾರೆ. ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಈ ರೀತಿಯಾಗಿ ಅತಿಕ್ರಮಣ ಮಾಡಿದ್ದಾರೆ ಎಂದು ಅವರು ದೂರು ದಾಖಲಿಸಿದ್ದಾರೆ. ಬಾಲಿವುಡ್ (Bollywood) ನ ದಂತಕಥೆ ಮೊಹಮ್ಮದ್ ಖಾನ್ (Mohammad Khan) ಅವರ ಪುತ್ರರಾದ ಲಕ್ಕಿ ಅಲಿಯವರು ಇಂತಹದೊಂದು ಆರೋಪ ಮಾಡಿದ್ದಾರೆ. ಅವರು ಬೆಂಗಳೂರಿನ ಈ ಜಮೀನಿನಲ್ಲಿ ಸಾಕಷ್ಟು ವರ್ಷಗಳಿಂದ ವಾಸವಿರುವುದಾಗಿ ದಾಖಲಿಸಿದ್ದಾರೆ. ಈ ಜಮೀನನ್ನು ಇದೀಗ ಸುಧೀರ್ ರೆಡ್ಡಿಯವರು ಅಕ್ರಮವಾಗಿ ಅತಿಕ್ರಮಣ ಮಾಡಿದ್ದಾರೆಂದು ದೂರಿನಲ್ಲಿ ದಾಖಲಿಸಲಾಗಿದೆ. ಇದನ್ನು ಓದಿ..Kannada News: ಎಲ್ಲರೂ ಹಣ ಕೊಡುತ್ತೇನೆ ಎಂದರೂ, ಪುನೀತ್ ಪರ್ವಕ್ಕೆ ಏಕಾಂಗಿಯಾಗಿ ಅಶ್ವಿನಿ ಮೇಡಂ ಖರ್ಚು ಮಾಡಿದ್ದು ಎಷ್ಟು ಗೊತ್ತೇ??

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು ಈ ಕುರಿತಂತೆ ಗಮನಹರಿಸಿ ತಮಗೆ ನ್ಯಾಯ ಒದಗಿಸಬೇಕಾಗಿ ಕೋರಿಕೊಳ್ಳುತ್ತೇನೆ ಎಂದು ಡಿಜಿಪಿ ಅವರಿಗೂ ಕೂಡ ವಿನಂತಿಸಿಕೊಂಡಿದ್ದಾರೆ. “ನಾನು 50 ವರ್ಷಗಳಿಂದ ಈ ಜಾಗದಲ್ಲಿ ವಾಸವಿದ್ದೇನೆ. ಕಾನೂನು ಬದ್ಧವಾಗಿ ನಾನು ಈ ಜಾಗದ ಮಾಲೀಕನಾಗಿದ್ದೇನೆ. ನನ್ನ ಬಳಿ ಎಲ್ಲ ದಾಖಲೆಗಳಿವೆ. ನಾನು ಕಾನೂನು ಹೋರಾಟ ಮಾಡಲು ಸಿದ್ಧನಿದ್ದೇನೆ. ಸುಧೀರ್ ರೆಡ್ಡಿ ಅವರು ಅಕ್ರಮವಾಗಿ ನನ್ನ ಭೂಮಿಯನ್ನು ಕಬಳಿಸಿದ್ದಾರೆ. ನನಗೆ ನ್ಯಾಯ ಒದಗಿಸಿ, ಅಲ್ಲದೆ ಈ ಅಕ್ರಮಕ್ಕೆ ಅವರ ಪತ್ನಿಯಾದ ರೋಹಿಣಿ ಸಿಂಧೂರಿಯವರ ಬೆಂಬಲವೂ ಇದೆ. ಇವರೆಲ್ಲ ಸರ್ಕಾರದ ಭೂಮಿಯನ್ನು ಕಬಳಿಸಲೆಂದೇ ಬಂದಿದ್ದಾರೆ” ಎಂದು ಅವರು ದೂರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ವಿಚಾರಣೆ ಡಿಸೆಂಬರ್ 7ರಂದು ನಡೆಯಲಿದ್ದು, ಕಾನೂನು ರೀತಿಯಾಗಿ ಈ ಆರೋಪ ಸತ್ಯವೇ ಅಥವಾ ಸುಳ್ಳೇ ಎನ್ನುವುದು ಸಾಬೀತಾಗಲಿದೆ. ಇದನ್ನು ಓದಿ.. Kannada News: ಕ್ರಾಂತಿ ಸಿನೆಮಾದ ಮೊದಲ ಹಾಡು, “ಧರಣಿ” ಹಾಡು ಯಾರ ಕುರಿತು ಎಂದು ತಿಳಿದರೆ, ರೋಮ ಎಲ್ಲ ಎದ್ದು ನಿಂತು, ಕುಂತಲ್ಲೇ ಡಾನ್ಸ್ ಮಾಡುತ್ತೀರಿ.