Kannada News: ಕ್ರಾಂತಿ ಸಿನೆಮಾದ ಮೊದಲ ಹಾಡು, “ಧರಣಿ” ಹಾಡು ಯಾರ ಕುರಿತು ಎಂದು ತಿಳಿದರೆ, ರೋಮ ಎಲ್ಲ ಎದ್ದು ನಿಂತು, ಕುಂತಲ್ಲೇ ಡಾನ್ಸ್ ಮಾಡುತ್ತೀರಿ.

14

Kannada News: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ರವರ ಬಹುನಿರೀಕ್ಷಿತ ಚಿತ್ರ ಕ್ರಾಂತಿ (Kranthi) ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಈ ಹಿಂದೆ ನಡೆಯದಷ್ಟು ಮಟ್ಟಿಗೆ ಚಿತ್ರ ಆನ್ಲೈನ್ ಮೀಡಿಯಾದಲ್ಲಿ ಪ್ರಚಾರ ನಡೆಸುತ್ತಿದೆ. ಮಾಧ್ಯಮದವರು ದರ್ಶನ್ ಅವರನ್ನು ಕೆಲವು ಕಾರಣಗಳಿಂದಾಗಿ ಬ್ಯಾನ್ ಮಾಡಿದ ನಂತರ ಅಭಿಮಾನಿಗಳೇ ಈ ಚಿತ್ರವನ್ನು ತಮ್ಮದೆಂದು ಪ್ರೀತಿಯಿಂದ ಪ್ರಚಾರ ನಡೆಸುತ್ತಿದ್ದಾರೆ. ಚಿತ್ರದ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲದಿದ್ದಾಗಲೇ ಕೇವಲ ದರ್ಶನ್ ಕ್ರಾಂತಿ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದಾಗಲೇ ರಾಜ್ಯಾದ್ಯಂತ ಈ ಚಿತ್ರದ ಬಗ್ಗೆ ಪ್ರಚಾರ ಮಾಡಲಾಗಿತ್ತು. ಇದೀಗ ಚಿತ್ರ ಮುಂದಿನ ಜನವರಿ 26ರಂದು ತೆರೆ ಕಾಣುತ್ತಿದೆ. ಇದಕ್ಕೂ ಮೊದಲು ಚಿತ್ರದ ಕುರಿತ ಥೀಮ್ ಸಾಂಗ್ ಧರಣಿ (Dharani Song) ಬಿಡುಗಡೆಯಾಗುತ್ತಿದೆ. ಈ ಸಾಂಗ್ ಯಾವುದರ ಕುರಿತಾಗಿದೆ ಎನ್ನುವುದನ್ನು ಕೇಳಿದರೆ ನಿಜಕ್ಕೂ ಅಚ್ಚರಿ ಮೂಡುತ್ತದೆ.

ಕ್ರಾಂತಿ ಸಿನಿಮಾದ ಪೂರ್ತಿ ಕೆಲಸಗಳು ಮುಗಿದಿದ್ದು, ಇದೀಗ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ವಿವಿಧ ಯುಟ್ಯೂಬ್ ಚಾನೆಲ್ ಗಳಲ್ಲಿ ನಿರಂತರವಾಗಿ ದರ್ಶನ್ ಸಂದರ್ಶನ ನೀಡುತ್ತಿದ್ದಾರೆ. ಚಿತ್ರದ ಬಗ್ಗೆ, ಚಿತ್ರದ ಕಥೆಯ ಬಗ್ಗೆ ಅವರು ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದಾರೆ. ಎಲ್ಲೆಲ್ಲೂ ಕ್ರಾಂತಿಯದ್ದೆ ಮಾತುಗಳು ಕೇಳಿ ಬರುತ್ತಿವೆ. ಮುಂದಿನ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರವು ತೆರೆಗೆ ಬರಲಿದೆ. ಚಿತ್ರದ ಕಥೆ ಏನು ಎನ್ನುವುದು ಅಷ್ಟೇನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಹೀಗಿದ್ದರೂ ಕೂಡ ಹಲವಾರು ಸಂದರ್ಶನಗಳಲ್ಲಿ ನಟ ದರ್ಶನ್ ಸರ್ಕಾರಿ ಶಾಲೆಗಳ ಬಗ್ಗೆ ಅಲ್ಲಿನ ವ್ಯವಸ್ಥೆಯ ಬಗ್ಗೆ ಅವರು ಮಾತನಾಡಿದ್ದಾರೆ. ಹೀಗಾಗಿಯೇ ಚಿತ್ರದ ಮುಖ್ಯ ಕಥೆ ಇದೆ ಆಗಿರಬಹುದು ಎಂದು ಊಹಿಸಲಾಗಿದೆ. ಇನ್ನು ಈ ಚಿತ್ರದ ಧರಣಿ ಎಂಬ ಥೀಮ್ ಸಾಂಗ್ ಇದೇ ಡಿಸೆಂಬರ್ 10 ರಂದು ಬಿಡುಗಡೆಯಾಗುತ್ತಿದೆ. ಇದನ್ನು ಓದಿ.. Kannada News: ಎಲ್ಲರೂ ಹಣ ಕೊಡುತ್ತೇನೆ ಎಂದರೂ, ಪುನೀತ್ ಪರ್ವಕ್ಕೆ ಏಕಾಂಗಿಯಾಗಿ ಅಶ್ವಿನಿ ಮೇಡಂ ಖರ್ಚು ಮಾಡಿದ್ದು ಎಷ್ಟು ಗೊತ್ತೇ??

ಈ ಧರಣಿ ಎಂಬ ಥೀಮ್ ಸಾಂಗ್ ನಲ್ಲಿ ಏನಿರಲಿದೆ, ಯಾವ ವಿಷಯದ ಕುರಿತು ಈ ಹಾಡು ಇದೆ ಎನ್ನುವುದರ ಕುರಿತು ನಟ ದರ್ಶನ್ ಯೂಟ್ಯೂಬ್ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನಿಜಕ್ಕೂ ಈ ಹಾಡು ಯಾವುದರ ಕುರಿತು ಎನ್ನುವುದು ತಿಳಿದುಕೊಂಡರೆ ಮೈ ರೋಮಾಂಚನವಾಗುತ್ತದೆ ಎಂದು ಅವರು ಹೇಳಿದ್ದಾರೆ. ಧರಣಿ ಹಾಡು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಅಭಿಮಾನಿಗಳು ಈ ಹಾಡನ್ನು ಕೇಳಲು ಕಾತರದಿಂದ ಕಾಯುತ್ತಿದ್ದಾರೆ. ಹಾಡಿನ ಕುರಿತು ದರ್ಶನ್ ತಿಳಿಸಿದ್ದಾರೆ, ಧರಣಿ ಹಾಡು ಸ್ನೇಹದ ಕುರಿತಾಗಿ ವಿವರಿಸುತ್ತದೆಯಂತೆ. ಜೊತೆಗೆ ಸರ್ಕಾರಿ ಶಾಲೆಯ ಬಗ್ಗೆ ಅಲ್ಲಿನ ವ್ಯವಸ್ಥೆಯ ಬಗ್ಗೆ ಮತ್ತು ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ಈ ಹಾಡು ಇರಲಿದೆ ಎಂದು ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಹಾಡನ್ನು ಕೇಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಈ ಹಾಡಿನ ಬಿಡುಗಡೆಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ ಎಂದೇ ಹೇಳಬಹುದು. ಇದನ್ನು ಓದಿ.. Kannada News: ಕೋಟ್ಯಾಧೀಶ್ವರ ವಸಿಷ್ಠ ರವರನ್ನು ಹರಿಪ್ರಿಯಾ ರವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡದ್ದು ಯಾಕೆ ಗೊತ್ತೇ??