Kannada News: ಎಲ್ಲರೂ ಹಣ ಕೊಡುತ್ತೇನೆ ಎಂದರೂ, ಪುನೀತ್ ಪರ್ವಕ್ಕೆ ಏಕಾಂಗಿಯಾಗಿ ಅಶ್ವಿನಿ ಮೇಡಂ ಖರ್ಚು ಮಾಡಿದ್ದು ಎಷ್ಟು ಗೊತ್ತೇ??

31

Kannada News: ಕೆಲವು ದಿನಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲಾಗಿದ್ದ ಅದ್ದೂರಿ ಪುನೀತಪರ್ವ (Puneethaparva) ಕಾರ್ಯಕ್ರಮದ ಬಗ್ಗೆ ಇದೀಗ ಮತ್ತೆ ಚರ್ಚೆಯಾಗುತ್ತಿದೆ. ಅಷ್ಟು ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲು ಖರ್ಚಾದ ಒಟ್ಟು ಹಣ ಎಷ್ಟು ಎನ್ನುವುದು ಇದೀಗ ಎಲ್ಲರ ಪ್ರಶ್ನೆಗೆ ಕಾರಣವಾಗಿದೆ. ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜಿಸಲು ಅಶ್ವಿನಿ ಪುನೀತ್ (Ashwini Puneeth Rajkumar) ಅವರು ಎಷ್ಟು ಕೋಟಿ ಹಣ ಖರ್ಚು ಮಾಡಿರಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಅಂದ ಹಾಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಕಾರ್ಯಕ್ರಮದ ಪೂರ್ತಿ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಒಂದು ರೂಪಾಯಿ ಹಣವನ್ನು ಯಾರಿಂದಲೂ ಪಡೆಯದೆ ಎಲ್ಲ ಖರ್ಚನ್ನು ತಾವೇ ಹಾಕಿದ್ದರು. ಹಾಗಿದ್ದರೆ ಪುನೀತ ಪರ್ವ ಕಾರ್ಯಕ್ರಮಕ್ಕೆ ಖರ್ಚಾದ ಒಟ್ಟು ಹಣ ಎಷ್ಟು ಕೋಟಿ ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಇದು ತಮ್ಮ ಪತಿಯ ಕನಸು, ಇದು ತಮ್ಮ ಪತಿಗಾಗಿ ತಾವು ಮಾಡುತ್ತಿರುವ ಸೇವೆ ಎಂದು ಭಾವಿಸಿದ್ದ ಅಶ್ವಿನಿ ಅವರು ಎಷ್ಟೋ ಜನರು ಹಣ ಸಹಾಯ ಮಾಡುವುದಾಗಿ ತಿಳಿಸಿದರು ಸಹ ಒಪ್ಪದೇ ತಾವೇ ಎಲ್ಲ ಖರ್ಚನ್ನು ಭರಿಸಿದ್ದರು. ಯಾವ ಕಾರ್ಯಕ್ರಮಕ್ಕೂ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ಪುನೀತಪರ್ವ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಇಡೀ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ಅವರೇ ವಹಿಸಿಕೊಂಡಿದ್ದರು. ಏಕಾಂಗಿಯಾಗಿ ಇಡೀ ಕಾರ್ಯಕ್ರಮವನ್ನು ನಡೆಸಿಕೊಡುವುದು ಅಷ್ಟು ಸುಲಭದ ಮಾತಲ್ಲ. ಅವರ ಹಿಂದೆ ಅವರ ಇಡೀ ಕುಟುಂಬ, ಅಭಿಮಾನಿಗಳು ಜೊತೆಯಾಗಿದ್ದರು. ಸಾವಿರಾರು ಜನರು ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ, ಬೇರೆ ರಾಜ್ಯಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಜನಪ್ರಿಯ ನಿರೂಪಕಿ ಅನುಶ್ರೀ ಅವರು ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು. ಕನ್ನಡ ಚಿತ್ರರಂಗದ ಎಲ್ಲ ಕಲಾವಿದರು ಈ ಕಾರ್ಯಕ್ರಮಕ್ಕೆ ಸೇರಿದ್ದರು. ಇದನ್ನು ಓದಿ.. Kannada News: ಅಭಿಷೇಕ್ ಅಂಬರೀಷ್ ರವರು ಮದುವೆ ಆಗುತ್ತಿರುವ ಹುಡುಗಿ ಆಸ್ತಿ ಎಷ್ಟು ಗೊತ್ತೇ ?? ಬೆಚ್ಚಿಬಿದ್ದ ಚಿತ್ರರಂಗ.

ಇಡೀ ಸ್ಯಾಂಡಲ್ವುಡ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಅಲ್ಲದೆ ತಮಿಳು, ತೆಲುಗು ಚಿತ್ರರಂಗದಿಂದಲೂ ಸ್ಟಾರ್ ನಟ ನಟಿಯರು ಪುನೀತ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅಶ್ವಿನಿ ಪುನೀತ್ ಅವರು ಎಲ್ಲವನ್ನು ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಮಾಡಿದ್ದರು. ಇದರ ಕುರಿತಾಗಿ ಈ ಕಾರ್ಯಕ್ರಮ ಕಂಡ ಪ್ರತಿಯೊಬ್ಬರು ಹೊಗಳಿ ಮೆಚ್ಚಿಕೊಂಡರು ಎಂದೇ ಹೇಳಬಹುದು. ಆದರೆ ಈ ಇಡೀ ಕಾರ್ಯಕ್ರಮದ ಜವಾಬ್ದಾರಿ ಹೊತ್ತ ಅಶ್ವಿನಿ ಪುನೀತ್ ಅವರು ಪುನೀತಪರ್ವ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ. ಈ ಒಂದು ಕಾರ್ಯಕ್ರಮಕ್ಕೆ ಖರ್ಚಾದ ಒಟ್ಟು ಹಣ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಗಳು. ಹೌದು ಯಾವುದೇ ತೊಂದರೆ ಇಲ್ಲದಂತೆ ಎಲ್ಲವೂ ಸಲೀಸಾಗಿ ವ್ಯವಸ್ಥಿತವಾಗಿ ಆಗುವಂತೆ ನೋಡಿಕೊಂಡಿದ್ದ ಅಶ್ವಿನಿ ಅವರು ಈ ಕಾರ್ಯಕ್ರಮಕ್ಕಾಗಿ ಒಂದೂವರೆ ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದನ್ನು ಓದಿ..Kannada News: ಕೋಟ್ಯಾಧೀಶ್ವರ ವಸಿಷ್ಠ ರವರನ್ನು ಹರಿಪ್ರಿಯಾ ರವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡದ್ದು ಯಾಕೆ ಗೊತ್ತೇ??