Kannada News: ಕೋಟ್ಯಾಧೀಶ್ವರ ವಸಿಷ್ಠ ರವರನ್ನು ಹರಿಪ್ರಿಯಾ ರವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡದ್ದು ಯಾಕೆ ಗೊತ್ತೇ??

17

Kannada News: ಇತ್ತೀಚಿಗಷ್ಟೇ ನಟಿ ಹರಿಪ್ರಿಯಾ ಮತ್ತು ವಶಿಷ್ಟ ಸಿಂಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿಯ ಬಗ್ಗೆ ಕೆಲವು ದಿನಗಳಿಂದ ದೊಡ್ಡ ಸುದ್ದಿಯೇ ಆಗುತ್ತಿತ್ತು ಎಂದು ಹೇಳಬಹುದು. ಈ ಜೋಡಿ ಪ್ರೀತಿಸುತ್ತಿದ್ದಾರೆ, ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂದೆಲ್ಲಾ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ ಇವರಿಬ್ಬರೂ ಒಟ್ಟಿಗೆ ಕೈ ಹಿಡಿದು ಏರ್ಪೋರ್ಟ್ ನಲ್ಲಿ ಹೋಗುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಆಗಲೇ ಆ ಅನುಮಾನ ಇನ್ನಷ್ಟು ಬಲವಾಗಿತ್ತು. ಆದರೆ ಈ ಜೋಡಿ ಈ ಕುರಿತು ಏನನ್ನು ಸ್ಪಷ್ಟಪಡಿಸಿರಲಿಲ್ಲ. ಆದರೆ ಮೊನ್ನೆ ಮೊನ್ನೆ ಎಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲ ಅನುಮಾನಗಳಿಗೂ ತೆರೆ ಎಳೆದಿದೆ. ಆದರೆ ಈ ಜೋಡಿ ಇಷ್ಟು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಏಕೆ ಎನ್ನುವ ಅನುಮಾನ ಎಲ್ಲೆಡೆ ಕೇಳಿ ಬರುತ್ತಿದೆ. ಆದರ ಕುರಿತ ವಿವರ ಇಲ್ಲಿದೆ ನೋಡಿ.

ನಟಿ ಹರಿಪ್ರಿಯ ಮತ್ತು ವಶಿಷ್ಟ ಸಿಂಹ ತಮ್ಮ ನಟನೆಯ ಮುಖಾಂತರ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು. ತೆಲುಗು, ತಮಿಳು ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿರುವ ನಟಿ ಹರಿಪ್ರಿಯವರಿಗೆ ಉಗ್ರಂ ಚಿತ್ರ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತ್ತು. ಇಲ್ಲಿವರೆಗೂ ಹರಿಪ್ರಿಯಾ ಸಾಕಷ್ಟು ಜನಪ್ರಿಯ ಚಿತ್ರಗಳಲ್ಲಿ ನಟಿಯಾಗಿ ನಟಿಸಿದ್ದಾರೆ. ಇನ್ನು ವಶಿಷ್ಟ ಸಿಂಹ ಅವರು ರಾಜಾಹುಲಿ ಚಿತ್ರದ ಪಾತ್ರವೊಂದರ ಮೂಲಕ ಗುರುತಿಸಿಕೊಂಡರು. ಆನಂತರ ಸಾಕಷ್ಟು ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. ಖಡಕ್ ಖಳನಟನಾಗಿ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಹರಿಪ್ರಿಯ ಮತ್ತು ವಶಿಷ್ಟ ಸಿಂಹ ಇದುವರೆಗೆ ಯಾವಾಗಲೂ ಒಂದೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಜೊತೆಗೆ ಯಾವ ಕಾರ್ಯಕ್ರಮದಲ್ಲಿಯೂ ಇವರು ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ಯಾರು ನೋಡಿಲ್ಲ. ಆದರೂ ಈ ಜೋಡಿಯ ನಡುವೆ ಪ್ರೀತಿ ಹೇಗೆ ಹುಟ್ಟಿತು ಎನ್ನುವುದು ಆಶ್ಚರ್ಯ ಉಂಟುಮಾಡುತ್ತದೆ. ಇದನ್ನು ಓದಿ..Kannada News: ನಿಶ್ಚಿತಾರ್ಥದ ವೇಳೆ ಬಹಳ ವಿಶೇಷ ಉಂಗುರ ತೊಟ್ಟ ವಸಿಷ್ಠ – ಹರಿಪ್ರಿಯಾ. ಇದರ ಬೆಲೆ ಕೇಳಿದರೆ ಒಂದು ಕ್ಷಣ ನಿಂತಲ್ಲೇ ಕುಸಿಯುತ್ತಿರಿ.

ಇದುವರೆಗೆ ಹರಿಪ್ರಿಯ ಮತ್ತು ವಶಿಷ್ಟ ಸಿಂಹ ಅವರು ಯಾವುದೇ ಚಿತ್ರದಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಅವರು ತೆಲುಗಿನ ರಿಮೇಕ್ ಚಿತ್ರ ಒಂದರಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಶುರುವಾದ ನಂತರವೇ ಇಬ್ಬರಿಗೂ ಪ್ರೀತಿ ಆಗಿದೆ ಎಂದು ಹೇಳಲಾಗುತ್ತಿದೆ. ನಂತರ ಮನೆಯವರ ಒಪ್ಪಿಗೆಯ ಮೇಲೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಅಲ್ಲದೆ ಅಧಿಕೃತವಾಗಿ ಹರಿಪ್ರಿಯ ಮತ್ತು ವಶಿಷ್ಟ ಸಿಂಹ ಅವರು ತಮ್ಮ ಇನ್ಸ್ತಗ್ರಂ ಖಾತೆಯಲ್ಲಿ ನಾವಿಬ್ಬರೂ ಮದುವೆಯಾಗುತ್ತಿರುವುದರ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡು ಅಭಿಮಾನಿಗಳಿಗೆ ತಮ್ಮ ಇಬ್ಬರ ನಡುವಿನ ಸಂಬಂಧದ ಕುರಿತು ದೃಢಪಡಿಸಿದ್ದಾರೆ. ಆದರೆ ಇದನ್ನೆಲ್ಲ ಇಷ್ಟು ಸೀಕ್ರೆಟ್ ಆಗಿ ನಡೆಸಿದ್ದು ಯಾಕೆ ಎನ್ನುವುದಕ್ಕೆ ಸಾಕಷ್ಟು ಅಭಿಪ್ರಾಯಗಳು ಕೇಳಿ ಬರುತ್ತಿವೆ. ಸ್ಯಾಂಡಲ್ವುಡ್ ನಲ್ಲಿ ನಟ ನಟಿಯರು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿದಾಗ ಖುಷಿ ಪಡುವುದಕ್ಕಿಂತ ಸುಮ್ಮನೆ ವದಂತಿಗಳನ್ನು ಹಬ್ಬಿಸಿ ಸಂಬಂಧವನ್ನು ಹಾಳು ಮಾಡುವುದರಲ್ಲಿ ಹೆಚ್ಚು ಜನರು ಖುಷಿ ಪಡುತ್ತಾರೆ. ಹೀಗಾಗಿಯೇ ಈ ವಿಷಯವನ್ನು ಎಷ್ಟು ಸಾಧ್ಯವೋ ಅಷ್ಟು ಗುಟ್ಟಾಗಿ ಇರಿಸಲಾಗಿತ್ತು. ಹಾಗಾಗಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಾಗಿದ್ದು ಎನ್ನುವುದು ಕೆಲವು ಜನರ ಅಭಿಪ್ರಾಯವಾಗಿದೆ. ಇದನ್ನು ಓದಿ.. Kannada News: ಅಭಿಷೇಕ್ ಅಂಬರೀಷ್ ರವರು ಮದುವೆ ಆಗುತ್ತಿರುವ ಹುಡುಗಿ ಆಸ್ತಿ ಎಷ್ಟು ಗೊತ್ತೇ ?? ಬೆಚ್ಚಿಬಿದ್ದ ಚಿತ್ರರಂಗ.