Cricket News: ನಾವು ವಿಶ್ವಕಪ್ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದ ರೋಹಿತ್ ಶರ್ಮ ಗೆ ಟಾಂಗ್ ಕೊಟ್ಟ ಕ್ರಿಕೆಟ್ ಫ್ಯಾನ್ಸ್. ಏನು ಹೇಳಿದ್ದಾರೆ ಗೊತ್ತೇ??
Cricket News: ಭಾರತ ತಂಡ (Team India) ಈಗ ಬಾಂಗ್ಲಾದೇಶ್ ಪ್ರವಾಸದಲ್ಲಿದೆ. ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಪಂದ್ಯಗಳು ಶುರುವಾಗಿದೆ. ಮೊದಲ ಪಂದ್ಯದಲ್ಲೇ ಭಾರತ ತಂಡ ಹೀನಾಯವಾಗಿ ಸೋತಿತು, ಭಾರತ ತಂಡ ಮತ್ತು ಅಭಿಮಾನಿಗಳಿಗೆ ಇದು ಬಹಳ ನಿರಾಸೆ ತಂದ ವಿಷಯವೇ ಆಗಿದೆ. ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನ ಅತ್ಯಂತ ಕಳಪೆ ಆಗಿತ್ತು, ಕೆ.ಎಲ್.ರಾಹುಲ್ (K L Raul) ಮತ್ತು ರೋಹಿತ್ ಶರ್ಮಾ (Rohit Sharma) ಅವರನ್ನು ಹೊರತುಪಡಿಸಿ ಇನ್ಯಾರು ಉತ್ತಮ ಪ್ರದರ್ಶನ ನೀಡಲಿಲ್ಲ. ಇತ್ತ ಬಿಸಿಸಿಐ (BCCI) 2024ರಲ್ಲಿ ನಡೆಯುವ ಟಿ20 ವರ್ಲ್ಡ್ ಕಪ್ ಗೆ ಉತ್ತಮ ತಂಡ ರಚಿಸುವ ಚರ್ಚೆಯಲ್ಲಿದೆ.
ಆದರೆ ನಿನ್ನೆಯ ಪಂದ್ಯ ನಡೆಯುವುದಕ್ಕಿಂತ ಮೊದಲು ನಡೆದ ಪ್ರೆಸ್ ಮೀಟ್ ನಲ್ಲಿ ರೋಹಿತ್ ಶರ್ಮಾ ಅವರು ಹೇಳಿರುವುದೇ ಬೇರೆ ಆಗಿದೆ. “ನಾನು ಈಗಲೇ ವರ್ಲ್ಡ್ ಕಪ್ ಅಷ್ಟು ದೂರಕ್ಕೆ ಚಿಂತೆ ಮಾಡುತ್ತಿಲ್ಲ. ಮುಂದೆ ಓಡಿಐ ವರ್ಲ್ಡ್ ಕಪ್ (ODI World Cup) ಶುರು ಆಗುವುದಕ್ಕಿಂತ ಮೊದಲು, ಐದು ಸೀರೀಸ್ ಗಳು ಮತ್ತು ಏಷ್ಯಾಕಪ್ ಇದೆ. ಸಧ್ಯಕ್ಕೆ ನಾವು ಈಗಿನ ಪಂದ್ಯಗಳ ಬಗ್ಗೆ ಚಿಂತೆ ಮಾಡುತ್ತಿದ್ದೇವೆ..” ಎಂದು ಪ್ರೆಸ್ ಮೀಟ್ ನಲ್ಲಿ ರೋಹಿತ್ ಶರ್ಮಾ ಹೇಳಿದ್ದಾರೆ. ಇವರ ಜೊತೆಗೆ ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಇದ್ದರು. ಇದನ್ನು ಓದಿ..Cricket News: ಪಂದ್ಯ ಸೋತರು, ಅದ್ಬುತ ಕ್ಯಾಚ್ ಹಿಡಿದ ಕೊಹ್ಲಿ ವಿಡಿಯೋ ವೈರಲ್: ಹೇಗಿದೆ ಗೊತ್ತಾ ಬಾಸ್ ಹಿಡಿದ ಕ್ಯಾಚ್??

ರೋಹಿತ್ ಶರ್ಮಾ ಅವರ ಈ ಮಾತುಗಳನ್ನು ಕೇಳಿ ನೆಟ್ಟಿಗರು ಅವರ ಮಾತನ್ನು ಟೀಕೆ ಮಾಡುತ್ತಿದ್ದಾರೆ. 2008ರಲ್ಲಿ ಕಾಮನ್ ವೆಲ್ತ್ ಟ್ರೋಫಿ ಗೆದ್ದ ಬಳಿಕ ಧೋನಿ (Dhoni) ಅವರು, ನಮ್ಮ ತಂಡ ಇನ್ನು ಇಂಪ್ರೂವ್ ಆಗಬೇಕು 2011ರಲ್ಲಿ ವರ್ಲ್ಡ್ ಕಪ್ ಇದೆ ಎಂದು ಹೇಳಿದ್ದರು.. ಎಂದು ಧೋನಿ ಅವರ ಮಾತುಗಳು ಮತ್ತು ಮುಂದಾಲೋಚನೆಯನ್ನು ನೆನಪು ಮಾಡಿಕೊಂಡ ನೆಟ್ಟಿಗರು, ರೋಹಿತ್ ಶರ್ಮಾ ಅವರಲ್ಲಿ ಅದು ಇಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಓದಿ.. Cricket News: ಬಾಂಗ್ಲಾ ವಿರುದ್ಧ ಬ್ಯಾಟಿಂಗ್ ಮಾಡಿ ಬೀಗಿದ್ದ ಮಹಾನುಭಾವ ರಾಹುಲ್, ಮಾಡಿದ ಎಡವಟ್ಟೇನು ಗೊತ್ತೇ? ಪಂದ್ಯದ ನಂತರ ರೋಹಿತ್ ಹೇಳಿದ್ದೇನು ಗೊತ್ತೇ?