Cricket News: ಬಾಂಗ್ಲಾ ವಿರುದ್ಧ ಬ್ಯಾಟಿಂಗ್ ಮಾಡಿ ಬೀಗಿದ್ದ ಮಹಾನುಭಾವ ರಾಹುಲ್, ಮಾಡಿದ ಎಡವಟ್ಟೇನು ಗೊತ್ತೇ? ಪಂದ್ಯದ ನಂತರ ರೋಹಿತ್ ಹೇಳಿದ್ದೇನು ಗೊತ್ತೇ?
Cricket News: ನೆನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಭಾರತದ (India vs Bangladesh) ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನ್ನಪ್ಪಿದೆ. ಈ ಸೋಲಿಗೆ ಸಾಕಷ್ಟು ಕಾರಣಗಳನ್ನು ಗುರುತಿಸಲಾಗುತ್ತಿದೆ. 2022ರ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಆಡುವಾಗ ಅದ್ಭುತ ಕ್ಯಾಚ್ ಔಟ್ ಮಾಡಿದ್ದ ಕೆ ಎಲ್ ರಾಹುಲ್ (K L Rahul) ಇದೀಗ ಕ್ಯಾಚ್ ಬಂದ ಅವಕಾಶವನ್ನು ಕೈ ಚೆಲ್ಲುವ ಮೂಲಕ ಪಂದ್ಯದ ಸೋಲಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅವರು ಅದೊಂದು ಕ್ಯಾಚ್ ಹಿಡಿದು ಬಿಟ್ಟಿದ್ದರೆ ನಿಜಕ್ಕೂ ಭಾರತ ಗೆಲ್ಲುತ್ತಿತ್ತು ಎಂದೇ ಕ್ರಿಕೆಟ್ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಅತಿ ಸುಲಭವಾಗಿ ದಕ್ಕಿದ್ದ ಕ್ಯಾಚ್ ಅನ್ನು ಅವರು ಕೈಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಅವರು ಈ ಪಂದ್ಯಕ್ಕೆ ಒಂದು ರೀತಿಯ ವಿಲನ್ ಆಗಿಬಿಟ್ಟರು ಎಂದೆ ಬಿಂಬಿಸಲಾಗುತ್ತಿದೆ.
ಪಂದ್ಯ ಮುಗಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ತಂಡದ ನಾಯಕ ರೋಹಿತ್ ಶರ್ಮ (Rohit Sharma) ಅವರು ತಂಡದ ಸೋಲಿಗೆ ಕಾರಣವಾದ ಕೆಲವು ಅಂಶಗಳನ್ನು ತಿಳಿಸಿದರು. ಆಟದಲ್ಲಿ ಗೆಲುವು ಸೋಲು ಇದ್ದಿದ್ದೆ. ಆದರೆ ನಾವು ಹೇಗೆ ಆಡಿದೆವು ಎನ್ನುವುದು ಬಹು ಮುಖ್ಯವಾಗುತ್ತದೆ. ನಾವು ನಮ್ಮ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಬಾಂಗ್ಲಾದೇಶ ತನ್ನ ತವರು ಭೂಮಿಯಲ್ಲಿ ಇನ್ನು ಒಳ್ಳೆಯ ಆಟ ಆಡಬಹುದಿತ್ತು. ಆದರೂ ನಾವು ಅವರನ್ನು ಕಟ್ಟಿ ಹಾಕಿದ್ದೇವೆ. ಹೀಗಾಗಿಯೇ ಇಷ್ಟು ಕಡಿಮೆ ಸ್ಕೋರ್ ಮಾಡಲಾಯಿತು. ಇಲ್ಲದಿದ್ದರೆ ಬಾಂಗ್ಲಾ ಇನ್ನು ಹೆಚ್ಚಿನ ಸ್ಕೋರ್ ಮಾಡುತ್ತಿತ್ತು. ಆದರೆ ನಾವು ಅದನ್ನು ನಮ್ಮ ಉತ್ತಮ ಫೀಲ್ಡಿಂಗ್ನಿಂದ ತಡೆ ಹಿಡಿದಿದ್ದೇವೆ ಎಂದು ಹೇಳಿಕೊಂಡಿದ್ದರು. ಇದನ್ನು ಓದಿ..Cricket News: ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಸೂರ್ಯ ಕುಮಾರ್ ಯಾದವ್ ರವರ ತಿಂಗಳಿಗೆ ದುಡಿಯುವುದು ಎಷ್ಟು ಗೊತ್ತೇ?

ಉತ್ತಮ ಬ್ಯಾಟಿಂಗ್ ಆಡಿ ಕೆ ಎಲ್ ರಾಹುಲ್ ಅದ್ಭುತ ರನ್ ಕಲೆ ಹಾಕಿದರು. ಬಹುಶಹ ಭಾರತ ತಂಡದ ಗೆಲುವಿಗೆ ಪ್ರಮುಖ ಕಾರಣ ಕೆ ಎಲ್ ರಾಹುಲ್ ರವರ ಆಟ ಆಗಬಹುದು ಎಂದೇ ಅಂದುಕೊಳ್ಳಲಾಗಿತ್ತು. ಅಷ್ಟರಮಟ್ಟಿಗೆ ಅವರು ರನ್ ಮೊತ್ತ ಸಂಗ್ರಹಿಸಿದ್ದರು. ಬಾಂಗ್ಲಾದೇಶವನ್ನು ಅತ್ಯಂತ ಸುಲಭವಾಗಿ ಕಟ್ಟಿ ಹಾಕುವ ಆಟವನ್ನು ಟೀಮ್ ಇಂಡಿಯಾ ಪ್ರದರ್ಶಿಸಿತ್ತು. ಆದರೂ ಕೆಲವು ಕಡೆ ಸಣ್ಣಪುಟ್ಟ ಎಡವಟ್ಟು ಮಾಡಿಕೊಂಡು ಟೀಮ್ ಇಂಡಿಯಾ ಸೋಲಿನ ರುಚಿ ಕಾಣಬೇಕಾಯಿತು. ಅದರಲ್ಲಿ ಅತ್ಯಂತ ಪ್ರಮುಖವಾದದ್ದು ಕೆ ಎಲ್ ರಾಹುಲ್ ಕೈಬಿಟ್ಟ ಅದೊಂದು ಕ್ಯಾಚ್. ಮೆಹಿದಿ ಹಸನ್ ಅವರ ಒಡೆತದಿಂದ ಬಂದ ಕ್ಯಾಚನ್ನು ಕೆ ಎಲ್ ರಾಹುಲ್ ಕೈ ಬಿಟ್ಟುಬಿಟ್ಟರು. ಇನ್ನೇನು ಸೋತು ಬಿಡುತ್ತೇನೆ ಎಂದು ಭಾವಿಸಿದ್ದ ಬಾಂಗ್ಲಾದೇಶಕ್ಕೆ ಇದು ಲಾಭವಾಗಿ ಬದಲಾಯಿತು. ಅದೊಂದು ಕ್ಯಾಚ್ ಹಿಡಿದು ಬಿಟ್ಟಿದ್ದರೆ ಬಾಂಗ್ಲಾದೇಶವನ್ನು ಸುಲಭವಾಗಿ ಸೋಲಿಸಬಹುದಿತ್ತು. ಹೀಗಾಗಿ ಕೆ ಎಲ್ ರಾಹುಲ್ ರವರು ಇದೊಂದು ಕ್ಯಾಚ್ ಬಿಟ್ಟಿದ್ದಕ್ಕಾಗಿ ಅವರ ಮೇಲೆ ಬೇಸರ ವ್ಯಕ್ತವಾಗುತ್ತಿದೆ. ಇದನ್ನು ಓದಿ.. Cricket News: ಪಂದ್ಯ ಸೋತರು, ಅದ್ಬುತ ಕ್ಯಾಚ್ ಹಿಡಿದ ಕೊಹ್ಲಿ ವಿಡಿಯೋ ವೈರಲ್: ಹೇಗಿದೆ ಗೊತ್ತಾ ಬಾಸ್ ಹಿಡಿದ ಕ್ಯಾಚ್??