Kannada News: ನಿಶ್ಚಿತಾರ್ಥದ ವೇಳೆ ಬಹಳ ವಿಶೇಷ ಉಂಗುರ ತೊಟ್ಟ ವಸಿಷ್ಠ – ಹರಿಪ್ರಿಯಾ. ಇದರ ಬೆಲೆ ಕೇಳಿದರೆ ಒಂದು ಕ್ಷಣ ನಿಂತಲ್ಲೇ ಕುಸಿಯುತ್ತಿರಿ.

33

Kannada News: ವಶಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯಾ (Haripriya) ಜೋಡಿ ಸಾಕಷ್ಟು ದಿನಗಳಿಂದ ಸದ್ದು ಮಾಡುತ್ತಿದೆ. ಈ ಜೋಡಿ ಮದುವೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೇವಲ ಇಷ್ಟು ಮಾತ್ರವಲ್ಲದೆ ಇವರು ಸದ್ದಿಲ್ಲದೆ ಕುಟುಂಬದವರ ಸಮ್ಮುಖದಲ್ಲಿ ನೆನ್ನೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ಸತ್ಯ ಎನ್ನಲು ಮತ್ತೊಂದು ಕಾರಣ ಸಿಕ್ಕಿದೆ. ಈ ಅನುಮಾನಗಳು ಬಲವಾಗುವಂತೆ ಬಹುತೇಕ ಮತ್ತೊಂದು ಬೆಳವಣಿಗೆ ನಡೆದಿದೆ. ಇಲ್ಲಿಯವರೆಗೂ ಹರಿಪ್ರಿಯ ಆಗಲಿ ನಟ ವಶಿಷ್ಟ ಸಿಂಹ ಆಗಲಿ, ತಮ್ಮ ರಿಲೇಶನ್ಶಿಪ್ ಕುರಿತು ಏನನ್ನು ಹೇಳಿಕೊಂಡಿಲ್ಲ. ಆದರೆ ಹರಿಪ್ರಿಯಾ ಅವರು ಇಂದು ಮಾಡಿರುವ ಪೋಸ್ಟ್ ಒಂದು ಇವರಿಬ್ಬರ ನಡುವಿನ ಸಂಬಂಧವನ್ನು ದೃಢಪಡಿಸುವಂತಿದೆ. ಇದರ ಜೊತೆಗೆ ನಿಶ್ಚಿತಾರ್ಥದಲ್ಲಿ ಹಾಕಿಕೊಂಡಿರುವ ರಿಂಗ್ ನ ಬೆಲೆ ಅತ್ಯಂತ ದುಬಾರಿಯಾಗಿದೆ. ನಿಜಕ್ಕೂ ಇಷ್ಟೊಂದು ದೊಡ್ಡ ಮೊತ್ತವೆ ಎಂದು ಆಶ್ಚರ್ಯವಾಗುತ್ತದೆ.

ತೆಲುಗಿನ ಎವರು ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಹರಿಪ್ರಿಯಾ, ವಶಿಷ್ಟ ಸಿಂಹ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಶುರುವಾದ ನಂತರ ಇಬ್ಬರಿಗೂ ಪ್ರೀತಿ ಆಗಿದೆ ಎನ್ನಲಾಗುತ್ತಿದೆ. ಏರ್ಪೋರ್ಟ್ ನಲ್ಲಿ ಕೈ ಕೈ ಹಿಡಿದು ನಡೆದಾಡುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಆದರೂ ಇದರ ಬಗ್ಗೆ ಇವರು ಏನನ್ನು ಹೇಳಿಕೊಂಡಿರಲಿಲ್ಲ. ಜೊತೆಗೆ ಹರಿಪ್ರಿಯ ವಸಿಷ್ಟ ಸಿಂಹ ಅವರೊಟ್ಟಿಗೆ ಡ್ಯಾನ್ಸ್ ಮಾಡುವ ವಿಡಿಯೋ ಒಂದನ್ನು ಹಂಚಿಕೊಂಡು ಪಾರ್ಟ್ನರ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಶಿಷ್ಟ ಸಿಂಹ ಕೂಡ ಪಾರ್ಟ್ನರ್ ಎಂದೇ ಕಾಮೆಂಟ್ ಮಾಡಿದ್ದರು. ಈ ಜೋಡಿ ಗುಟ್ಟಾಗಿ ಕುಟುಂಬದವರ ಸಮ್ಮುಖದಲ್ಲಿ ನೆನ್ನೆ ನಿಶ್ಚಿತಾರ್ಥ ಮಾಡಿಕೊಂಡಿದೆ. ಸಮಾರಂಭದಲ್ಲಿ ಕೇವಲ ಹರಿಪ್ರಿಯಾ ಮತ್ತು ವಶಿಷ್ಟ ಸಿಂಹ ಅವರ ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇದನ್ನು ಓದಿ.. Kannada News: ಕೇವಲ ಕುಟುಂಬಸ್ಥರ ಜೊತೆ ಉಂಗುರ ಬದಲಾಯಿಸಿಕೊಂಡ ಹರಿಪ್ರಿಯಾ ವಸಿಷ್ಠ, ನಿಶ್ಚಿತಾರ್ಥಕ್ಕಾಗಿ ಖರ್ಚು ಮಾಡಿದ ಹಣ ಎಷ್ಟು ಗೊತ್ತೇ??

ಇದೀಗ ಈ ಜೋಡಿ ರಿಂಗ್ ಬದಲಿಸಿಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು ಈ ಜೋಡಿಯನ್ನು ಕಂಡು ನಿಜಕ್ಕೂ ಖುಷಿ ಪಡುತ್ತಿದ್ದಾರೆ. ನಮಗೆ ಮೊದಲೇ ಗೊತ್ತಿತ್ತು, ನೀವಿಬ್ಬರೂ ಮದುವೆಯಾಗಲಿದ್ದೀರಿ ಎಂದು ಎಂಬ ರೀತಿಯ ಕಮೆಂಟ್ ಮಾಡಿ ಕಾಲು ಎಳೆದಿದ್ದಾರೆ. ಇದರ ಜೊತೆಗೆ ಈ ಜೋಡಿಯ ಎಂಗೇಜ್ಮೆಂಟ್ ಗೆ ಹಾಕಲಾಗಿರುವ ರಿಂಗ್ ಬಗ್ಗೆ ಚರ್ಚೆಯಾಗುತ್ತಿದೆ. ನಿಶ್ಚಿತಾರ್ಥಕ್ಕೆ ಈ ಜೋಡಿ ಪರಸ್ಪರ ಡೈಮಂಡ್ ರಿಂಗ್ ಬದಲಿಸಿಕೊಂಡಿದ್ದಾರೆ. ಈ ಡೈಮೆಂಡ್ ರಿಂಗ್ ಬೆಲೆ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತದೆ. ಒಂದು ಡೈಮೆಂಡಿಗೆ ಬರೋಬ್ಬರಿ 80 ಲಕ್ಷ ರೂಪಾಯಿ. ಅಂದರೆ ಎರಡು ಡೈಮಂಡ್ ರಿಂಗ್ ಸೇರಿ ಒಟ್ಟು ಒಂದು ಕೋಟಿ ಅರವತ್ತು ಲಕ್ಷ (1.6 ಕೋಟಿ) ಎಂದರೆ ನೀವು ನಂಬಲೇಬೇಕು. ಇಷ್ಟು ದುಬಾರಿ ರಿಂಗ್ ಎಕ್ಸ್ಚೇಂಜ್ ಮಾಡಿಕೊಂಡು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಇದನ್ನು ಓದಿ..Pooja Hegde: ರೆಡ್ ಸೀರೆಯಲ್ಲಿ ಥೇಟ್ ಅಪ್ಸರೆಯಂತೆ ಸೊಂಟ ಬಳುಕಿಸುತ್ತ ಡಾನ್ಸ್ ಮಾಡಿದ ಪೂಜಾ ಹೆಗ್ಡೆ. ವಿಡಿಯೋ ಆಯಿತು ವೈರಲ್. ಹೇಗಿದೆ ಗೊತ್ತೇ??