Kannada News: ಅಭಿಷೇಕ್ ಅಂಬರೀಷ್ ರವರು ಮದುವೆ ಆಗುತ್ತಿರುವ ಹುಡುಗಿ ಆಸ್ತಿ ಎಷ್ಟು ಗೊತ್ತೇ ?? ಬೆಚ್ಚಿಬಿದ್ದ ಚಿತ್ರರಂಗ.

100

Kannada News: ಅಭಿಷೇಕ್ ಅಂಬರೀಶ್ ವಿವಾಹವಾಗುತ್ತಿರುವ ಹುಡುಗಿಯ ಒಟ್ಟು ಆಸ್ತಿ ಕೇಳಿದರೆ ನಿಜಕ್ಕೂ ಅಚ್ಚರಿ ಉಂಟಾಗುತ್ತದೆ. ಅಭಿಷೇಕ್ ಅಂಬರೀಶ್ ಅವರು ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಅಧಿಕೃತವಾಗಿ ಈ ಸುದ್ದಿಯನ್ನು ಅಭಿಷೇಕ್ ಅಂಬರೀಶ್ ಹೇಳದಿದ್ದರೂ ಕೂಡ ಇದೇ ಸತ್ಯ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಕುರಿತಂತೆ ಸುಮಲತಾ ಅಂಬರೀಶ್ ಅವರು ಕೂಡ ಏನನ್ನು ಹೇಳಿಲ್ಲ. ಆದರೂ ಕೂಡ ಈ ಸಮಾಚಾರ ಎಲ್ಲೆಡೆ ಹರಿದಾಡುತ್ತಿದೆ. ಅಭಿಷೇಕ ಅಂಬರೀಶ್ ಇನ್ನು ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು ಮದುವೆಗೂ ಹೆಚ್ಚಿನ ದಿನಗಳೇನು ಬಾಕಿ ಉಳಿದಿಲ್ಲ ಎಂಬಂಥ ಮಾತುಗಳು ಕೇಳಿ ಬರುತ್ತಿವೆ. ಇನ್ನೂ ಅಭಿಷೇಕ್ ವಿವಾಹವಾಗುತ್ತಿರುವ ಹುಡುಗಿಯ ಒಟ್ಟು ಆಸ್ತಿ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತದೆ. ಕೋಟಿ ಕೋಟಿ ಆಸ್ತಿ ಗಳಿಸಿರುವ ಅಭಿಷೇಕ್ ವಿವಾಹವಾಗುತ್ತಿರುವ ಹುಡುಗಿಯ ಒಟ್ಟು ಆಸ್ತಿ ನಿಜಕ್ಕೂ ಶಾಕ್ ಉಂಟುಮಾಡುತ್ತದೆ.

ಇತ್ತೀಚಿಗೆ ಮಾಧ್ಯಮದವರ ಜೊತೆಗೆ ಮಾತನಾಡಿದ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅವರನ್ನು ಮಾಧ್ಯಮದವರು ಪ್ರಶ್ನೆ ಕೇಳಿದರು. ಅಭಿಷೇಕ್ ಅವರು ಮದುವೆಯಾಗುತ್ತಿದ್ದಾರ ಎನ್ನುವ ಪ್ರಶ್ನೆಯದಾಗಿತ್ತು. ಆದರೆ ಇದನ್ನು ಇಬ್ಬರು ತಳ್ಳಿ ಹಾಕಿದ್ದರು. ಇದೆಲ್ಲಾ ಊಹೆ ಅಷ್ಟೇ, ಆ ರೀತಿ ಏನೂ ಇಲ್ಲ ಎಂದೆ ಹೇಳಿದರು. ಆದರೆ ಅವರು ಏನೇ ಹೇಳಿದರೂ ಅಭಿಷೇಕ ಅವರಿಗೆ ಸದ್ದಿಲ್ಲದೆ ಮದುವೆಯ ತಯಾರಿ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅವರ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಹೆಚ್ಚಿನ ಜನರಿಗೆ ತಿಳಿಸದೆ ಸೀಕ್ರೆಟ್ ಆಗಿಯೇ ಈ ಎಲ್ಲ ಕೆಲಸಗಳನ್ನು ಸುಮಲತಾ ಅವರು ಮಾಡುತ್ತಿದ್ದಾರೆ. ತಮ್ಮ ಮಗನ ಮದುವೆಗೆ ಎಲ್ಲ ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಓದಿ.. Pooja Hegde: ರೆಡ್ ಸೀರೆಯಲ್ಲಿ ಥೇಟ್ ಅಪ್ಸರೆಯಂತೆ ಸೊಂಟ ಬಳುಕಿಸುತ್ತ ಡಾನ್ಸ್ ಮಾಡಿದ ಪೂಜಾ ಹೆಗ್ಡೆ. ವಿಡಿಯೋ ಆಯಿತು ವೈರಲ್. ಹೇಗಿದೆ ಗೊತ್ತೇ??

ಆಶ್ಚರ್ಯವೆಂದರೆ ಅಭಿಷೇಕ್ ಅವರು ವಿವಾಹವಾಗುತ್ತಿರುವ ಹುಡುಗಿ ಅಭಿಷೇಕ್ಗಿಂತಲೂ ಮೂರು ವರ್ಷ ದೊಡ್ಡವರಂತೆ. ಸಾಕಷ್ಟು ವರ್ಷಗಳಿಂದ ಇಬ್ಬರಿಗೂ ಕೂಡ ಸ್ನೇಹವಿದೆಯಂತೆ. ಅಲ್ಲದೆ ಅಭಿಷೇಕ್ ಅವರು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಅವಿವಾ. ಅವಿವಾ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಫ್ಯಾಶನ್ ಲೋಕದ ಬಹುಬೇಡಿಕೆಯ ಡಿಸೈನರ್ ಎಂದು ತಿಳಿದುಬಂದಿದೆ. ಇತ್ತೀಚಿನ ಫ್ಯಾಷನ್ ಲೋಕದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅದರಂತೆ ಜನಪ್ರಿಯ ಡಿಸೈನರ್ ಆಗಿರುವ ಅವಿವಾ ದೊಡ್ಡ ಮಟ್ಟದ ಹೆಸರು ಮತ್ತು ಹಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರ ಒಟ್ಟು ಆಸ್ತಿ ಕೇಳಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಅವರ ಒಟ್ಟು ಆಸ್ತಿ ಬರೋಬ್ಬರಿ 230 ಕೋಟಿ ಎಂದರೆ ನೀವು ನಂಬಲೇಬೇಕು. ಹೌದು ಅವಿವ ಇನ್ನೂರ ಮೂವತ್ತು ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಫ್ಯಾಷನ್ ಲೋಕದಲ್ಲಿ ಇಷ್ಟೆಲ್ಲ ದುಡಿದಿದ್ದಾರೆ ಎನ್ನುವುದು ಆಶ್ಚರ್ಯದ ಸಂಗತಿ. ಇದನ್ನು ಓದಿ..Kannada News: ನಿಶ್ಚಿತಾರ್ಥದ ವೇಳೆ ಬಹಳ ವಿಶೇಷ ಉಂಗುರ ತೊಟ್ಟ ವಸಿಷ್ಠ – ಹರಿಪ್ರಿಯಾ. ಇದರ ಬೆಲೆ ಕೇಳಿದರೆ ಒಂದು ಕ್ಷಣ ನಿಂತಲ್ಲೇ ಕುಸಿಯುತ್ತಿರಿ.