Kannada News: ಕೇವಲ ಕುಟುಂಬಸ್ಥರ ಜೊತೆ ಉಂಗುರ ಬದಲಾಯಿಸಿಕೊಂಡ ಹರಿಪ್ರಿಯಾ ವಸಿಷ್ಠ, ನಿಶ್ಚಿತಾರ್ಥಕ್ಕಾಗಿ ಖರ್ಚು ಮಾಡಿದ ಹಣ ಎಷ್ಟು ಗೊತ್ತೇ??

13

Kannada News: ಕೆಲವು ದಿನಗಳಿಂದ ಗಾಂಧಿನಗರದಲ್ಲಿ ವಶಿಷ್ಟ ಸಿಂಹ (Vasishta Simha) ಮತ್ತು ಹರಿಪ್ರಿಯಾ (Haripriya) ಅವರ ಹೆಸರು ಹೆಚ್ಚಾಗಿಯೇ ಕೇಳಿ ಬರುತ್ತಿದೆ. ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದಾರೆ, ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ಅಧಿಕೃತವಾಗಿ ಹರಿಪ್ರಿಯಾ ಆಗಲಿ ವಶಿಷ್ಟ ಸಿಂಹ ಅವರಾಗಲಿ ಏನನ್ನು ಹೇಳಿಕೊಂಡಿಲ್ಲ. ಆದರೂ ಕೂಡ ಇಂತಹದೊಂದು ಅನುಮಾನ ಗಾಂಧಿನಗರದಲ್ಲಿ ಬಲವಾಗಿ ಮೂಡಿದೆ ಎಂದು ಹೇಳಬಹುದು. ತಾವಿಬ್ಬರು ಪ್ರೀತಿಸುತ್ತಿರುವ ಕುರಿತಾಗಲಿ, ಮದುವೆ ನಿಶ್ಚಯವಾಗಿರುವುದರ ಕುರಿತಾಗಲಿ ಈ ಜೋಡಿ ಏನನ್ನು ಹೇಳಿಕೊಂಡಿಲ್ಲ. ಹೀಗಿದ್ದು ಕೂಡ ಇವರು ಸಾಕಷ್ಟು ಕಡೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕೈ ಕೈ ಹಿಡಿದು ನಡೆದಾಡುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಇದರ ಬೆನ್ನಲ್ಲೇ ಈ ಜೋಡಿ ಸದ್ದಿಲ್ಲದೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ವಶಿಷ್ಟ ಸಿಂಹ ಮತ್ತು ಹರಿಪ್ರಿಯ ಅವರು ರಿಮೇಕ್ ಚಿತ್ರ ಒಂದರಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಈ ಇಬ್ಬರಿಗೂ ಪ್ರೀತಿ ಆಗಿದೆ ಎಂದು ಹೇಳಲಾಗುತ್ತಿದೆ. ಸಾಕಷ್ಟು ಕಡೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಏರ್ಪೋರ್ಟ್ ನಲ್ಲಿ ಕೈ ಕೈ ಹಿಡಿದು ಹೋಗುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಈ ಮೊದಲು ಕೂಡ ಈ ಜೋಡಿ ಪ್ರೀತಿಯಲ್ಲಿದ್ದಾರ ಎನ್ನುವ ಅನುಮಾನಗಳು ಮೂಡಿದ್ದವು. ಆನಂತರ ಈ ಫೋಟೋಗಳು ಅನುಮಾನಗಳಿಗೆ ಪುಷ್ಠಿ ನೀಡುವಂತೆ ದೊರೆತಿದ್ದವು. ಅಲ್ಲದೆ ಕೆಲವು ದಿನಗಳ ಹಿಂದೆ ಹರಿಪ್ರಿಯ ಅವರು ಇನ್ಸ್ಟಾಗ್ರಾಮ್ ನಲ್ಲಿ ಮೂಗು ಚುಚ್ಚಿಸಿಕೊಳ್ಳುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಸಾಮಾನ್ಯವಾಗಿ ಕೆಲವು ಸಂಪ್ರದಾಯಗಳ ಪ್ರಕಾರ ಮದುವೆಗೂ ಮೊದಲು ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸಲಾಗುತ್ತದೆ. ಇದು ಅನುಮಾನವನ್ನು ಇನ್ನಷ್ಟು ಬಲವಾಗಿಸಿತ್ತು. ಇದನ್ನು ಓದಿ..Kannada News: ಕರೆಯದೆ ಹೋದರೂ ವಿಷ್ಣು ಸರ್ ಹೊಸ ಮನೆಗೆ ಬಂದ ಡಿಬಾಸ್ ದರ್ಶನ್. ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತೆ??

ತಮ್ಮ ಮದುವೆಯ ಕುರಿತು ಈ ಜೋಡಿ ಏನನ್ನು ಹೇಳಿಕೊಂಡಿಲ್ಲ. ಆದರೆ ನೆನ್ನೆ ಅಷ್ಟೇ ಗುಟ್ಟಾಗಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಯಾರಿಗೂ ಹೇಳದಂತೆ ಕೇವಲ ಎರಡು ಕುಟುಂಬದವರು ರಹಸ್ಯವಾಗಿ ಬಹಳ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಿದ್ದಾರೆ ಎಂದು ಎಂದು ತಿಳಿದು ಬಂದಿದೆ. ಕೇವಲ ಕುಟುಂಬದವರು ಮಾತ್ರ ಪಾಲ್ಗೊಂಡಿದ್ದ ಈ ನಿಶ್ಚಿತಾರ್ಥ ಸಮಾರಂಭದಲ್ಲಿ ವಶಿಷ್ಟ ಸಿಂಹ ಮತ್ತು ಹರಿಪ್ರಿಯ ಅವರು ಉಂಗುರ ಬದಲಿಸಿಕೊಂಡಿದ್ದಾರೆ. ಈ ಜೋಡಿ ಮುಂದಿನ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಂಧಿನಗರದಲ್ಲಿ ಓಡಾಡುತ್ತಿರುವ ಈ ಊಹಾಪೋಹಗಳಿಗೆ ಇನ್ನಷ್ಟೇ ಈ ಜೋಡಿ ತೆರೆ ಎಳೆದು ಅವರ ಮದುವೆಯ ವಿಷಯದ ಕುರಿತು ಅಧಿಕೃತವಾಗಿ ಮಾಹಿತಿ ಕೊಡಬೇಕಿದೆ. ಆದರೆ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವುದಂತೂ ಪಕ್ಕ ಎನ್ನುವಂತಾಗಿದೆ. ಬಹಳ ಸರಳವಾಗಿ ಉಂಗುರ ಬದಲಿಸಿಕೊಂಡಿರುವ ಈ ಜೋಡಿಯ ನಿಶ್ಚಿತಾರ್ಥಕ್ಕೆ ಖರ್ಚಾಗಿರುವುದು ಕೇವಲ ಒಂದುವರೆ ಲಕ್ಷ ರೂಪಾಯಿ (1.5 ಲಕ್ಷ) ಎಂದು ತಿಳಿದು ಬಂದಿದೆ. ಇದನ್ನು ಓದಿ..Kannada News: ಐರಾ ಬರ್ತಡೇಗೆ ಬಂದ ದರ್ಶನ್. ಡಿ ಬಾಸ್ ಕೊಟ್ಟ ಉಡುಗೊರೆ ನೋಡಿ ಯಶ್ ರಾಧಿಕಾ ಶಾಕ್. ಏನು ಕೊಟ್ಟಿದ್ದಾರೆ ಗೊತ್ತೇ??