Kannada News: ಕರೆಯದೆ ಹೋದರೂ ವಿಷ್ಣು ಸರ್ ಹೊಸ ಮನೆಗೆ ಬಂದ ಡಿಬಾಸ್ ದರ್ಶನ್. ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತೆ??

112

Kannada News: ವಿಷ್ಣುವರ್ಧನ್ (Vishnuvardhan) ಅವರ ಅಳಿಯ ಅನಿರುದ್ಧ್ (Anirudh) ಅವರ ಮನೆಯ ಗೃಹಪ್ರವೇಶ ಇತ್ತೀಚಿಗಷ್ಟೇ ಅದ್ದೂರಿಯಾಗಿ ನೆರವೇರಿತು. ಜಯನಗರದಲ್ಲಿರುವ ಅವರ ಹೊಸ ಮನೆಯ ಗೃಹಪ್ರವೇಶಕ್ಕೆ ದೊಡ್ಡ ದೊಡ್ಡ ಸ್ಟಾರ್ ನಟರು ಭಾಗಿಯಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಪ್ರಮುಖ ಜನ ಪ್ರತಿನಿಧಿಗಳು ಈ ಗೃಹಪ್ರವೇಶದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಕಿರುತೆರೆ ನಟ ನಟಿಯರು ಹಾಗೂ ಸಿನಿಮಾದ ದೊಡ್ಡ ದೊಡ್ಡ ಸ್ಟಾರ್ ನಟರು ಈ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಮತ್ತು ಅವರ ಪತ್ನಿ ವಿಜಯ ಲಕ್ಷ್ಮಿ (Vijaya Lakshmi) ಅವರನ್ನು ಆಹ್ವಾನಿಸಲಾಗಿತ್ತು. ಗೃಹಪ್ರವೇಶಕ್ಕೆ ಆಗಮಿಸಿದ್ದ ನಟ ದರ್ಶನ್ ರವರು ಮನೆಯನ್ನು ನೋಡಿ ಬಹಳ ಮೆಚ್ಚಿಕೊಂಡಿದ್ದರು. ಇದೇ ವೇಳೆ ಅವರು ಅನಿರುದ್ಧ ಅವರಿಗೆ ದುಬಾರಿ ಗಿಫ್ಟ್ ಒಂದನ್ನು ನೀಡಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ನಟರ ಜೊತೆಗೆ ಅನಿರುದ್ಧ ತೆರೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ನಾಯಕ ನಟನಾಗಿ ಅನೇಕ ಜನಪ್ರಿಯ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jothe Jotheyali) ಧಾರವಾಹಿ ದೊಡ್ಡ ಮಟ್ಟದ ಹೆಸರು ಮಾಡಿದೆ. ಅನಿರುದ್ಧ ನಾಯಕ ನಟನಾಗಿ ಅಭಿನಯಿಸಿದ್ದ ಈ ಧಾರವಾಹಿ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿತ್ತು ಎನ್ನಬಹುದು. ಕೆಲವು ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಅನಿರುದ್ಧ ಧಾರವಾಹಿಯಿಂದ ಹೊರ ನಡೆದಿದ್ದರು. ಇದೀಗ ಅವರು ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಜೊತೆ ಜೊತೆಯಲಿ ಸೀರಿಯಲ್ ಕಲಾವಿದರು ಸಹ ಬಂದಿದ್ದರು. ಅನು ಪಾತ್ರಧಾರಿ ಮೇಘ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಗೃಹಪ್ರವೇಶ ಸಮಾರಂಭಕ್ಕೆ ಹಾಜರಿದ್ದರು. ಇದನ್ನು ಓದಿ.. Cricket News: ಆತನೊಬ್ಬ ಭಾರತ ತಂಡದ ನಾಯಕಕನಾದರೆ ನನಗೆ ಖುಷಿ ಹೆಚ್ಚಾಗುತ್ತದೆ ಎಂದ ರಶೀದ್ ಖಾನ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಈ ಮೊದಲು ಇದ್ದ ಮನೆಯನ್ನು ರೆನೋವೇಷನ್ ಮಾಡಿಸಲಾಗಿದೆ. ವಿಷ್ಣುವರ್ಧನ್ ಅವರಿಗೆ ಇಷ್ಟವಾಗುವ ರೀತಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ವಿಷ್ಣುವರ್ಧನ್ ಅವರಿಗೆ ಮನೆಯ ಬಳಿ ಗಾರ್ಡನ್ ಇರುವುದು ಬಹಳ ಇಷ್ಟವಾಗುತ್ತಿತ್ತು. ಅದರಂತೆ ಅಚ್ಚುಕಟ್ಟಾಗಿ ಮನೆಯಲ್ಲಿ ಗಾರ್ಡನ್ ನಿರ್ಮಾಣವನ್ನು ಮಾಡಲಾಗಿದೆ. ಮನೆಯ ಒಳಗೆ ವಿಷ್ಣುವರ್ಧನ್ ಅವರ ದೊಡ್ಡದೊಂದು ಫೋಟೋ ಇಡಿಸಲಾಗಿದ್ದು, ನಿತ್ಯವೂ ಪೂಜೆ ವ್ಯವಸ್ಥೆ ಮಾಡಲಾಗಿದೆ. ಈ ಮನೆಗೆ ವಲ್ಮೀಕ ಎಂಬ ವಿಶಿಷ್ಟ ಹೆಸರನ್ನು ಇರಿಸಲಾಗಿದೆ. ಮನೆಯನ್ನು ನೋಡಿದ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನಿರುದ್ಧ್ ಅವರಿಗೆ ಶುಭಾಶಯ ಕೋರಿದ್ದಾರೆ. ಇದೇ ವೇಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅನಿರುದ್ಧ ಅವರಿಗೆ ದುಬಾರಿ ಗಿಫ್ಟ್ ಒಂದನ್ನು ನೀಡಿದ್ದಾರೆ. ಇದನ್ನು ಓದಿ.. Cricket News: ಹತ್ತಾರು ವರ್ಷಗಳಿಂದ ಭಾರತ ಕಾಯುತ್ತಿದ್ದ ಆಟಗಾರ ಸಿಕ್ಕೇ ಬಿಟ್ಟ: ಈತನೇ ನೋಡಿ ಮುಂದಿನ ಸ್ಟಾರ್. ಯಾರು ಗೊತ್ತೆ?