Cricket News: ಹತ್ತಾರು ವರ್ಷಗಳಿಂದ ಭಾರತ ಕಾಯುತ್ತಿದ್ದ ಆಟಗಾರ ಸಿಕ್ಕೇ ಬಿಟ್ಟ: ಈತನೇ ನೋಡಿ ಮುಂದಿನ ಸ್ಟಾರ್. ಯಾರು ಗೊತ್ತೆ?

12

Cricket News: ರವೀಂದ್ರ ಜಡೇಜಾ (Ravindra Jadeja) ಅವರ ನಂತರ ಅವರಷ್ಟೇ ಅದ್ಭುತವಾಗಿ ಆಡಬಲ್ಲ ಆಲ್-ರೌಂಡರ್ ಮತ್ತೊಬ್ಬರು ಬರಲಿಲ್ಲವೆಂದು ಹೇಳಬಹುದು. ಟೀಮ್ ಇಂಡಿಯ (Team India) ಅಂತ ಒಬ್ಬ ಆಲ್-ರೌಂಡರ್ ಆಟಗಾರನಿಗಾಗಿ ಹಲವು ವರ್ಷಗಳಿಂದ ಕಾಯುತ್ತಲೇ ಇತ್ತು, ಅಕ್ಷರ್ ಪಟೇಲ್ (Axar Patel) ಅಂತಹದೊಂದು ನಿರೀಕ್ಷೆಯನ್ನು ಸರಿದೂಗಿಸುತ್ತಾರೆ ಎಂದೆ ನಂಬಲಾಗಿತ್ತು. ರವೀಂದ್ರ ಜಡೇಜಾ ಅವರ ಸ್ಥಾನವನ್ನು ಅಕ್ಷರ್ ಪಟೇಲ್ ಆಲ್-ರೌಂಡರ್ ಆಗಿ ತುಂಬಾ ಬಲ್ಲರು ಎಂದೆ ತಿಳಿಯಲಾಗಿತ್ತು. ಆದರೆ ಬ್ಯಾಟಿಂಗ್ನಲ್ಲಿ ಅವರು ಅಂದುಕೊಂಡ ಪ್ರದರ್ಶನ ತೋರದೆ ನಿರಾಸೆ ಮೂಡಿಸಿದ್ದರು. ಹಾಗಾಗಿ ಇದ್ದ ಭರವಸೆಯು ಹೊರಟುಹೋಗಿತ್ತು. ಇದೀಗ ಈ ಭರವಸೆಯನ್ನು ತುಂಬಬಲ್ಲ ಮತ್ತೊಬ್ಬ ಆಟಗಾರ ಟೀಮ್ ಇಂಡಿಯಾಗೆ ಸಿಕ್ಕಿದ್ದಾನೆ ಎಂದು ಹೇಳಲಾಗುತ್ತಿದೆ.

ನ್ಯೂಜಿಲೆಂಡ್ (India vs New Zealand) ವಿರುದ್ಧ ನಡೆದ ಸರಣಿ ಪಂದ್ಯ ಮುಗಿದ ಬಳಿಕ ನ್ಯೂಜಿಲೆಂಡ್‌ ತಂಡದ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ (Simon Doull) ಟೀಮ್ ಇಂಡಿಯಾಗೆ ಮುಂದೆ ಯಾರು ಒಬ್ಬ ಅದ್ಭುತ ಆಲ್-ರೌಂಡರ್ ಆಗಬಲ್ಲರು ಎಂದು ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿರುವ ಅವರು ವಾಷಿಂಗ್ಟನ್ ಸುಂದರ್ (Washington Sundar) ಆ ಸ್ಥಾನ ತುಂಬಬಲ್ಲರು ಎಂದು ಹೇಳಿದ್ದಾರೆ. ವಾಷಿಂಗ್ಟನ್ ಸುಂದರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿರುವ ಅವರು ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರ ನಂತರ ಟೀಮ್ ಇಂಡಿಯದಲ್ಲಿ ಉತ್ತಮ ಆಲ್ ರೌಂಡರ್ ಆಗಬಲ್ಲ ಎಲ್ಲಾ ಅರ್ಹತೆ ವಾಷಿಂಗ್ಟನ್ ಸುಂದರ್ ಅವರಿಗೆ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಹೇಗೆ ಉತ್ತಮ ಎನ್ನುವುದನ್ನು ವಿವರಿಸಿರುವ ಅವರು ಸುಂದರ್ ಅವರನ್ನು ಕೊಂಡಾಡಿದ್ದಾರೆ, ಅವರ ಆಟವನ್ನು ಪ್ರಶಂಶಿಸಿದ್ದಾರೆ. ಇದನ್ನು ಓದಿ.. Kannada News: ಹರಿಪ್ರಿಯಾ ಹಾಗೂ ವಸಿಷ್ಠ ರವರ ಮದುವೆ ಯಾವಾಗ ಗೊತ್ತೇ?? ಮೂಗು ಚುಚ್ಚಿಸಿಕೊಂಡದ್ದು ಯಾಕೆ ಗೊತ್ತೇ??

ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಅವರ ನಂತರ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ಅನ್ನು ಇನ್ನಷ್ಟು ಉತ್ತಮಗೊಳಿಸುವ ಸಾಮರ್ಥ್ಯ ವಾಷಿಂಗ್ಟನ್ ಸುಂದರ್ ಅವರಿಗಿದೆ ಎಂದು ಅವರು ಹೇಳಿದ್ದಾರೆ. ಕ್ರೈಸ್ಟ್‌ಚರ್ಚ್‌ನ ಹೇಗ್ಲೆ ಓವಲ್‌ನಲ್ಲಿ ಅಂತಿಮ ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ಅದ್ಭುತವಾಗಿ ಆಡಿದ ವಾಷಿಂಗ್ಟನ್ ಸುಂದರ್ ರೋಚಕ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಅವರು ಎಲ್ಲರ ಗಮನ ಸೆಳೆದರು. ವಾಷಿಂಗ್ಟನ್ ಸುಂದರ್ ಒಬ್ಬ ಅದ್ಭುತ ಆಟಗಾರ ಆಗಿದ್ದಾರೆ. ಅವರು ರಕ್ಷಣಾತ್ಮಕವಾಗಿ ಆಡುತ್ತಾರೆ. ಈ ರೀತಿಯ ತಂತ್ರದಿಂದ ಆಡುವವರು ಮುಖ್ಯವಾಗಿರುತ್ತಾರೆ. ಭಾರತ ತಂಡಕ್ಕೆ ಇಂತಹ ಒಬ್ಬ ಆಟಗಾರನ ಅಗತ್ಯವಿದೆ. ನಾನು ಯಾವಾಗಲೂ ಸುಂದರ್ ರವರ ಆಟವನ್ನು ಬಹಳ ಇಷ್ಟಪಟ್ಟು ನೋಡುತ್ತೇನೆ. ಅವರು ಬಹಳ ಚೆನ್ನಾಗಿ ಆಡುತ್ತಾರೆ. ಅವರ ಸಾಮರ್ಥ್ಯ ಟೀಮ್ ಇಂಡಿಯದಲ್ಲಿ ಪ್ರದರ್ಶನಗೊಳ್ಳಬೇಕಿದೆ. ಅವರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿ ಎಂದು ಅವರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇದನ್ನು ಓದಿ..Cricket News: ಆತನೊಬ್ಬ ಭಾರತ ತಂಡದ ನಾಯಕಕನಾದರೆ ನನಗೆ ಖುಷಿ ಹೆಚ್ಚಾಗುತ್ತದೆ ಎಂದ ರಶೀದ್ ಖಾನ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??