Cricket News: ಆತನೊಬ್ಬ ಭಾರತ ತಂಡದ ನಾಯಕಕನಾದರೆ ನನಗೆ ಖುಷಿ ಹೆಚ್ಚಾಗುತ್ತದೆ ಎಂದ ರಶೀದ್ ಖಾನ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
Cricket News: ರೋಹಿತ್ ಶರ್ಮಾ (Rohit Sharma) ನಾಯಕತ್ವದ ನಂತರ ಇದೀಗ ಟಿ ಟ್ವೆಂಟಿ ಕ್ರಿಕೆಟ್ ಗೆ ಯಾರು ನಾಯಕನಾಗಲು ಅರ್ಹ ಎನ್ನುವ ಬಿಸಿ ಬಿಸಿ ಚರ್ಚೆ ನಡೆಯುತ್ತಲೇ ಇದೆ. ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟ್ ತಜ್ಞರು ಕಳೆದ ಕೆಲವು ದಿನಗಳಿಂದ ನಮಗೆ ತೋಚಿದ ಆಟಗಾರರನ್ನು ನಾಯಕರಾಗಲು ಉತ್ತಮ ಎಂದು ಹೇಳುತ್ತಲೇ ಬಂದಿದ್ದಾರೆ. ಇದರ ಜೊತೆಗೆ ಬಿಸಿಸಿಐ (BCCI) ರೋಹಿತ್ ಶರ್ಮಾ ಅವರ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಅವರ ಬದಲಿಗೆ ಮತ್ತೊಬ್ಬರನ್ನು ಟಿ ಟ್ವೆಂಟಿ ಕ್ರಿಕೆಟ್ ಗೆ ನಾಯಕರಾಗಿ ಆಯ್ಕೆ ಮಾಡುವ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ರೋಹಿತ್ ಶರ್ಮ ಅವರಿಗೆ ವಿಶ್ರಾಂತಿ ನೀಡಿ ಮತ್ತೊಬ್ಬರನ್ನು ಆ ಸ್ಥಾನಕ್ಕೆ ತಂದು ಕುರಿಸುವ ಆಲೋಚನೆ ಬಿಸಿಸಿಐಗೆ ಇದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ರಶೀದ್ ಖಾನ್ (Rasheed Khan) ಆಟಗಾರರೊಬ್ಬರ ಹೆಸರನ್ನು ಸೂಚಿಸಿದ್ದು ಅವರು ತಂಡದ ನಾಯಕರಾಗಲು ಅರ್ಹರು ಎಂದು ಹೇಳಿದ್ದಾರೆ.
ಭಾರತದ ಸ್ಟಾರ್ ಆಲೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಈಗಾಗಲೇ ತಮ್ಮ ಅದ್ಭುತ ಪ್ರದರ್ಶನದಿಂದಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ಆಡುತ್ತಿರುವ ಪಂದ್ಯಗಳಲ್ಲಿ ಗೆಲುವಿನ ಪ್ರಮುಖ ಕಾರಣವಾಗುತ್ತಿರುವ ಹಾರ್ದಿಕ ಹೆಸರು ಕೂಡ ನಾಯಕತ್ವಕ್ಕೆ ಮುಂಚೂಣಿಯಲ್ಲಿದೆ. ಸಾಕಷ್ಟು ಜನರು ಹಾರ್ದಿಕ್ ಪಾಂಡ್ಯ ಟಿ ಟ್ವೆಂಟಿ ಕ್ರಿಕೆಟ್ನ ಮುನ್ನಡೆಸಬಲ್ಲ ಮುಂದಿನ ನಾಯಕ ಎಂದೆ ಬಿಂಬಿಸಲಾಗುತ್ತಿದೆ. ಆದರೆ ಬಿಸಿಸಿಐ ಇದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಳ್ಳುವ ಕುರಿತಂತೆ ಬಿಸಿಸಿಐ ಇದುವರೆಗೆ ಏನನ್ನು ಹೇಳಿಲ್ಲ. ಆದರೆ ಇದನ್ನು ಪುಷ್ಠಿಕರಿಸುವಂತೆ ಇದೀಗ ಆಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಹಾರ್ದಿಕ್ ಪಾಂಡ್ಯ ಕುರಿತಂತೆ ಮಾತನಾಡಿದ್ದಾರೆ. ಪಾಂಡ್ಯಗೆ ನಾಯಕತ್ವ ನೀಡುವ ಕುರಿತ ಬೆಂಬಲ ನೀಡಿರುವ ಅವರು ಹಾರ್ದಿಕ ಪಾಂಡ್ಯ ನಾಯಕನಾದರೆ ನನಗೆ ಬಹಳ ಸಂತೋಷವಾಗುತ್ತದೆ ಎಂದಿದ್ದಾರೆ. ಇದನ್ನು ಓದಿ..Kannada News: ವಯಸಿನಲ್ಲಿ ತನಗಿಂತ ದೊಡ್ಡವಳ ಜೊತೆ ಮದುವೆಗೆ ಸಿದ್ದವಾದ ಅಭಿಷೇಕ್: ಇಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತೇ??

ಹಾರ್ದಿಕ್ ಪಾಂಡ್ಯ ಗೆ ನಾಯಕತ್ವ ವಹಿಸುವ ಕುರಿತಾಗಿ ಮಾತನಾಡಿರುವ ರಶೀದ್ ಖಾನ್ “ಹಾರ್ದಿಕ್ ಪಾಂಡ್ಯ ಒಬ್ಬರು ಅದ್ಬುತ ಆಟಗಾರರಾಗಿದ್ದಾರೆ. ಅಖಾಡದಲ್ಲಿ ಅವರ ಪ್ರದರ್ಶನ ನಿಜಕ್ಕೂ ಸಾಟಿ ಇಲ್ಲದ್ದು. ರಾಷ್ಟ್ರೀಯ ತಂಡದ ನಾಯಕರಾಗಲು ಅವರಿಗೆ ಎಲ್ಲಾ ಅರ್ಹತೆ ಇದೆ. ಅವರ ತಂಡದಲ್ಲಿ ನನಗೆ ಆಡಿದ ಅನುಭವಿದೆ. ಅವರನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರನ್ನು ಭಾರತ ತಂಡದ ಟಿ ಟ್ವೆಂಟಿ ಕಾಯಂ ನಾಯಕನಾಗಿ ಮಾಡಿದರೆ ನನಗೆ ಹೆಚ್ಚು ಖುಷಿಯಾಗುತ್ತದೆ. ನಾಯಕನಾಗಿ ಆಟಗಾರರನ್ನು ನಿರ್ವಹಿಸುವುದು ಬಹಳ ಸವಾಲಿನ ಕೆಲಸ. ಆದರೆ ಹಾರ್ದಿಕ್ ಪಾಂಡ್ಯ ಇಂತಹ ಕೆಲಸವನ್ನು ಬಹಳ ಸುಲಭವಾಗಿ ಯಶಸ್ವಿಯಾಗಿ ಮಾಡಬಲ್ಲವರಾಗಿದ್ದಾರೆ. ಅವರಿಗೆ ತಂಡದ ನಾಯಕತ್ವ ವಹಿಸಿಕೊಳ್ಳುವ ಅವಕಾಶ ಸಿಕ್ಕರೆ ನನಗೆ ಹೆಚ್ಚು ಸಂತೋಷವಾಗುತ್ತದೆ” ಎಂದು ಅವರು ಹೇಳಿದ್ದಾರೆ. ಇದನ್ನು ಓದಿ.. Kannada News: ಹರಿಪ್ರಿಯಾ ಹಾಗೂ ವಸಿಷ್ಠ ರವರ ಮದುವೆ ಯಾವಾಗ ಗೊತ್ತೇ?? ಮೂಗು ಚುಚ್ಚಿಸಿಕೊಂಡದ್ದು ಯಾಕೆ ಗೊತ್ತೇ??