Kannada News: ಹರಿಪ್ರಿಯಾ ಹಾಗೂ ವಸಿಷ್ಠ ರವರ ಮದುವೆ ಯಾವಾಗ ಗೊತ್ತೇ?? ಮೂಗು ಚುಚ್ಚಿಸಿಕೊಂಡದ್ದು ಯಾಕೆ ಗೊತ್ತೇ??

23

Kannada News: ನಟಿ ಹರಿಪ್ರಿಯಾ ಮತ್ತು ವಶಿಷ್ಟ ಸಿಂಹ ಅವರು ಮದುವೆಯಾಗುತ್ತಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕೆಲವು ತಿಂಗಳುಗಳಿಂದಲೂ ಹರಿಪ್ರಿಯಾ ಮದುವೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಹುಡುಗ ಯಾರು ಎನ್ನುವುದು ತಿಳಿದುಬಂದಿರಲಿಲ್ಲ. ಅಧಿಕೃತವಾಗಿ ಹರಿಪ್ರಿಯಾ ಮತ್ತು ವಶಿಷ್ಟ ಸಿಂಹ ಜೋಡಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ಇಬ್ಬರು ಒಟ್ಟಿಗೆ ಇರುವ ಫೋಟೋಗಳು, ಒಟ್ಟಿಗೆ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು. ಆಗಲೇ ಅಭಿಮಾನಿಗಳು ಸೂಪರ್ ಜೋಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಇವರಿಬ್ಬರು ಮದುವೆಯಾಗುತ್ತಿರುವುದು ಖಚಿತಗೊಂಡಿದೆ. ಅಂದಹಾಗೆ ಹರಿಪ್ರಿಯ ಮತ್ತು ವಶಿಷ್ಟ ಸಿಂಹ ಅವರ ನಿಶ್ಚಿತಾರ್ಥ ಮತ್ತು ಮದುವೆ ಯಾವಾಗ ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ವಶಿಷ್ಟ ಸಿಂಹ ಮತ್ತು ಹರಿಪ್ರಿಯ ಒಟ್ಟಿಗಿರುವ ಸಾಕಷ್ಟು ಫೋಟೋಗಳು ವೈರಲ್ ಆಗಿದ್ದವು. ಅಲ್ಲದೆ ಇತ್ತೀಚಿಗೆ ಹರಿಪ್ರಿಯ ಅವರು ವಶಿಷ್ಟ ಸಿಂಹ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವಾಗ, ಇಬ್ಬರೂ ಒಟ್ಟಿಗೆ ನೃತ್ಯ ಮಾಡಿರುವ ಡ್ಯಾನ್ಸ್ ವಿಡಿಯೋ ಒಂದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು. ಶುಭಾಶಯ ಕೋರಿದರ ಜೊತೆಗೆ ಅವರು ವಶಿಷ್ಟ ಸಿಂಹ ಅವರನ್ನು ಪಾರ್ಟ್ನರ್ ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಶಿಷ್ಠ ಸಿಂಹ ಕಮೆಂಟ್ನಲ್ಲಿ ಥ್ಯಾಂಕ್ಯೂ ಪಾರ್ಟ್ನರ್ ಎಂದೆ ಬರೆದುಕೊಂಡಿದ್ದರು. ಈ ವಿಡಿಯೋ ನೋಡಿದ್ದ ಲಕ್ಷಾಂತರ ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಸೂಪರ್ ಜೋಡಿ, ಜೋಡಿ ಚೆನ್ನಾಗಿದೆ, ನೀವಿಬ್ಬರೂ ಮದುವೆಯಾಗಿ ಬಿಡಿ ಎಂದೆಲ್ಲ ಕಮೆಂಟ್ ಹಾಕಿದ್ದರು. ಇದೀಗ ಆ ಹಾರೈಕೆ ನಿಜವಾಗುತ್ತಿದೆ. ವಶಿಷ್ಟ ಸಿಂಹ ಮತ್ತು ಹರಿಪ್ರಿಯ ಜೋಡಿಯಾಗಲಿದ್ದಾರೆ. ಇದನ್ನು ಓದಿ.. Kannada News: ವಯಸಿನಲ್ಲಿ ತನಗಿಂತ ದೊಡ್ಡವಳ ಜೊತೆ ಮದುವೆಗೆ ಸಿದ್ದವಾದ ಅಭಿಷೇಕ್: ಇಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತೇ??

ಕೆಲವೇ ದಿನಗಳ ಹಿಂದೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಯಾರೋ ಒಬ್ಬರು ಹರಿಪ್ರಿಯಾ ಅವರನ್ನು ಸಮಾಧಾನ ಮಾಡುತ್ತಿದ್ದರು. ಆದರೆ ವಿಡಿಯೋದಲ್ಲಿ ಆ ವ್ಯಕ್ತಿ ಯಾರು ಎನ್ನುವುದು ಸ್ಪಷ್ಟವಾಗಿ ತಿಳಿದಿರಲಿಲ್ಲ. ಆದರೆ ಈ ಎಲ್ಲ ಬೆಳವಣಿಗೆಗಳ ನಂತರ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಳ್ಳುತ್ತಿರುವಾಗ ಅವರ ಜೊತೆಗಿದ್ದದ್ದು ವಶಿಷ್ಟ ಸಿಂಹ ಅವರೇ ಎನ್ನುವುದು ಖಚಿತವಾಗಿದೆ. ಜೊತೆಗೆ ಕೆಲವು ಸಂಪ್ರದಾಯಗಳ ಪ್ರಕಾರ ಮದುವೆಗೂ ಮೊದಲು ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸಲಾಗುತ್ತದೆ. ಹೀಗಾಗಿಯೇ ಹರಿಪ್ರಿಯಾ ಅವರಿಗೆ ಮೂಗು ಚುಚ್ಚಿಸುವ ಶಾಸ್ತ್ರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಂದ ಹಾಗೆ ಹರಿಪ್ರಿಯಾ ಮತ್ತು ವಶಿಷ್ಟ ಸಿಂಹ ಜೋಡಿ ಇದೆ ಡಿಸೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ. ಅಲ್ಲದೆ ಮುಂದಿನ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ. ಇದನ್ನು ಓದಿ..Kannada News: ಪ್ರೇಮ್ ಮಗಳು ನಟಿ ಎಂದ ತಕ್ಷಣ, ಸಂಭಾವನೆ ಹೆಚ್ಚಿಸಿಕೊಂಡ ಡಾಲಿ ಧನಂಜಯ್. ಎಷ್ಟು ಬೇಕಂತೆ ಗೊತ್ತೇ?? ಯಪ್ಪಾ ಇಷ್ಟೊಂದಾ??