Kannada News: ಮದುವೆಯಾದ ಎರಡೇ ದಿನಕ್ಕೆ ಅದಿತಿ ಪ್ರಭುದೇವ ಪತಿ ಯಶಸ್ವಿ ರವರಿಗೆ ಶಾಕ್: ಇನ್ಸ್ಟಾಗ್ರಾಮ್ ನಲ್ಲಿ ಏನಾಗಿದೆ ಗೊತ್ತೇ?
Kannada News: ನಟಿ ಅದಿತಿ ಪ್ರಭುದೇವ (Aditi Prabhudeva) ಅವರಿಗೆ ಯಶಸ್ (ಯಶಸ್ವಿ) ಅವರ ಜೊತೆಗೆ ಮೊನ್ನೆ ಮೊನ್ನೆಯಷ್ಟೇ ಮದುವೆಯಾಗಿದೆ. ಕುಟುಂಬದವರು ತೋರಿಸಿದ ಹುಡುಗನ ಜೊತೆಗೆ ನಟಿ ಅದಿತಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ನವೆಂಬರ್ 28 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ನ ಗಾಯತ್ರಿ ವಿಹಾರ ಗ್ರ್ಯಾಂಡ್ ನಲ್ಲಿ ಅದಿತಿ – ಯಶಸ್ (Yashas) ವಿವಾಹ ನೆರವೇರಿತು. ಈ ಅದ್ದೂರಿ ವಿವಾಹ ಸಮಾರಂಭಕ್ಕೆ ಸಾಕಷ್ಟು ಕಲಾವಿದರು ಆಗಮಿಸಿದ್ದರು. ಕುಟುಂಬದವರು, ಸ್ನೇಹಿತರ ಜೊತೆಗೆ ನಟಿ ಅದಿತಿ ಅವರ ನಟನ ಕ್ಷೇತ್ರದ ಸ್ನೇಹಿತರು ಕೂಡ ಮದುವೆಗೆ ಸಾಕ್ಷಿಯಾದರು. ಇದೀಗ ಮದುವೆಯಾಗಿ ಎರಡು ಮೂರು ದಿನಗಳು ಕಳೆದಿಲ್ಲ, ಇಷ್ಟು ಬೇಗ ಅದಿತಿ ಪತಿ ಯಶಸ್ ಅವರಿಗೆ ಒಂದು ಶಾಕ್ ಎದುರಾಗಿದೆ.
ನಟಿ ಅದಿತಿಯವರು ಕಿರುತೆರೆಯ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದವರು. ಹೀಗಾಗಿ ಕಿರುತೆರೆಯಲ್ಲೂ ಅವರಿಗೆ ಅಪಾರ ಸ್ನೇಹಿತರಿದ್ದಾರೆ. ನಟಿ ರಂಜನಿ ರಾಘವನ್ ಸೇರಿದಂತೆ ಸಾಕಷ್ಟು ಜನರು ಮದುವೆಗೆ ಬಂದು ಅವರಿಗೆ ಶುಭ ಹಾರೈಸಿದ್ದರು. ಯಶ್ (Yash), ರಾಧಿಕಾ ಪಂಡಿತ್ (Radhika Pandit), ಶ್ರೀನಗರ ಕಿಟ್ಟಿ (Shrinagara Kitty) ಸೇರಿದಂತೆ ದೊಡ್ಡ ದೊಡ್ಡ ಸಿನಿ ದಿಗ್ಗಜರು ಈ ವಿವಾಹ ಸಮಾರಂಭಕ್ಕೆ ಪಾಲ್ಗೊಂಡು ನೂತನ ವಧು ವರರಿಗೆ ಶುಭ ಕೋರಿದರು. ನಟಿ ಅದಿತಿ ಪ್ರಭುದೇವ ಅವರು ಕನ್ನಡದ ಬಹು ಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ತಮ್ಮ ನಟನೆ ಹಾಗೂ ವಿಶೇಷ ವ್ಯಕ್ತಿತ್ವದಿಂದಾಗಿ ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಮದುವೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇದನ್ನು ಓದಿ.. IPL 2023: ಈ ಬಾರಿ ಐಪಿಎಲ್ ಗೆ ಮತ್ತಷ್ಟು ರಂಗು: ಈ ಬಾರಿ ಐಪಿಎಲ್ ಆಡಲಿರುವ ಬೆಂಕಿ ಬ್ಯಾಟ್ಸಮನ್ ಯಾರು ಗೊತ್ತೇ?

ಎಲ್ಲವೂ ಚೆನ್ನಾಗಿ ಆಗುತ್ತಿರುವಾಗ ಇಂತಹ ಶುಭ ವೇಳೆಯಲ್ಲಿ ಇದೀಗ ಅದಿತಿಯವರ ಪತಿ ಯಶಸ್ ಅವರಿಗೆ ಒಂದು ಶಾಕ್ ಎದುರಾಗಿದೆ. ಮದುವೆ ಹಾಗೂ ಎಲ್ಲಾ ಶಾಸ್ತ್ರಗಳು ಯಾವುದೇ ಸಮಸ್ಯೆ ಇಲ್ಲದೆ ಮುಗಿದು ಎಲ್ಲವೂ ಸರಿಹೋಯಿತು ಎಂದುಕೊಳ್ಳುತ್ತಿರುವಾಗ ಒಂದು ಸಮಸ್ಯೆ ಎದುರಾಗಿದೆ. ಅದಿತಿಯವರ ಪತಿ ಯಶಸ್ಸರ ಇನ್ಸ್ಟಾಗ್ರಾಮ್ ಖಾತೆಯನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಈ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಯಶಸ್ ನನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ, ಹೀಗಾಗಿ ಅದರಿಂದ ಬರುವ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಅವರು ಹೇಳಿದ್ದಾರೆ. ಈ ಮೂಲಕ ಖುಷಿಯಾಗಿದ್ದ ಅದಿತಿ ಯಶಸ್ ದಂಪತಿಗಳಿಗೆ ಮತ್ತೊಂದು ತಲೆನೋವು ಶುರುವಾಗಿದೆ. ಇದನ್ನು ಓದಿ.. Kannada News: ಪ್ರೇಮ್ ಮಗಳು ನಟಿ ಎಂದ ತಕ್ಷಣ, ಸಂಭಾವನೆ ಹೆಚ್ಚಿಸಿಕೊಂಡ ಡಾಲಿ ಧನಂಜಯ್. ಎಷ್ಟು ಬೇಕಂತೆ ಗೊತ್ತೇ?? ಯಪ್ಪಾ ಇಷ್ಟೊಂದಾ??