Kannada News: ರಶ್ಮಿಕಾ ರವರನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಶೆಟ್ರು ಗ್ಯಾಂಗ್. ಮತ್ತೊಮ್ಮೆ ಟಾಂಗ್ ಕೊಟ್ಟ ಪ್ರೋಮೊದ್ ಶೆಟ್ಟಿ. ಹೇಳಿದ್ದೇನು ಗೊತ್ತೇ?
Kannada News: ನಟಿ ರಶ್ಮಿಕ ಮಂದಣ್ಣ ಅವರಿಗೆ ಕಿರಿಕ್ ಪಾರ್ಟಿಯ (Kirik Party) ಸಾನ್ವಿ ಪಾತ್ರ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತ್ತು. ಆನಂತರ ಅವರು ಕನ್ನಡ ಮಾತ್ರವಲ್ಲದೆ ಪರಭಾಷೆಗಳ ಚಿತ್ರಗಳಲ್ಲಿ ನಟಿಸ ತೊಡಗಿದರು. ಆದರೆ ಅವರು ಎಷ್ಟೇ ದೊಡ್ಡ ಮಟ್ಟದ ಹೆಸರು ಗಳಿಸಿದರು ಅವರ ಕೆಲವು ವೈಯಕ್ತಿಕ ಅಭಿಪ್ರಾಯಗಳು, ಮಾತುಗಳು ಮತ್ತು ಕರ್ನಾಟಕದ ಬಗ್ಗೆ ಇರುವ ಅವರ ಧೋರಣೆಯಿಂದ ಸಾಕಷ್ಟು ಟೀಕೆಗಳು ಅವರ ಕುರಿತಾಗಿ ಕೇಳಿ ಬರುತ್ತಲೇ ಇರುತ್ತವೆ. ರಶ್ಮಿಕ ಮಂದಣ್ಣ (Rashmika Mandanna) ಇದೀಗ ಬಹು ಭಾಷೆಯ, ಬಹು ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ಬೇರೆ ಭಾಷೆಯಲ್ಲಿ ಅವರಿಗೆ ಎಷ್ಟೇ ದೊಡ್ಡ ಮಟ್ಟದ ಅಭಿಮಾನಿಗಳಿದ್ದರೂ ಬಹುತೇಕ ಕನ್ನಡಿಗರು ರಶ್ಮಿಕ ಎಂದರೆ ಕೆಂಡ ಕಾರುತ್ತಾರೆ. ಇತ್ತೀಚಿಗೆ ತಾವು ನಟಿಸಿದ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ ಬಗ್ಗೆ ಹೆಸರು ಹೇಳದೆ ಬರೀ ಬೆರಳು ತೋರಿಸಿ ಮಾತನಾಡಿದರ ಕುರಿತಾಗಿ ನಟ ಪ್ರಮೋದ್ ಶೆಟ್ಟಿ (Pramod Shetty) ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಭಾಷೆ, ಚಿತ್ರರಂಗದ ಕುರಿತಾಗಿ ಅವರು ನೀಡಿದ ಅದೆಷ್ಟು ಹೇಳಿಕೆಗಳು, ಅವರ ಅಭಿಪ್ರಾಯಗಳು ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಲೇ ಇರುತ್ತವೆ. ನಡೆದು ಬಂದ ಹಾದಿಯನ್ನು ಮರೆತವರಿಗೆ ಬದುಕುವ ಅರ್ಹತೆ ಇರುವುದಿಲ್ಲ ಎಂದು ಕನ್ನಡಿಗರು ಪದೇಪದೇ ಟೀಕಿಸುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ನಟಿ ರಶ್ಮಿಕಾ ಮಂದಣ್ಣ ಸಂದರ್ಶನ ನೀಡಿದರು. ಆಗ ನಿರೂಪಕಿ ಅವರ ಸಿನಿಮಾ ಜರ್ನಿಯ ಕುರಿತು ಪ್ರಶ್ನೆ ಮಾಡಿದರು. ತಮ್ಮ ಸಿನಿ ಕೆರಿಯರ್ ಹೇಗೆ ಶುರುವಾಯಿತು ಎನ್ನುವ ಪ್ರಶ್ನೆಗೆ ರಶ್ಮಿಕ ಮಂದಣ್ಣ ಉತ್ತರಿಸುತ್ತಾ ನನಗೆ ಒಂದು ಪ್ರೊಡಕ್ಷನ್ ಹೌಸ್ ಇಂದ ಕಾಲ್ ಬಂತು ಎಂದರು. ಆ ಪ್ರೊಡಕ್ಷನ್ ಹೆಸರು ಹೇಳದ ರಶ್ಮಿಕ ಕೇವಲ ಕೈ ಬೆರಳುಗಳನ್ನು ಅಲ್ಲಾಡಿಸುತ್ತಾ ಅದೊಂದು ಪ್ರೊಡಕ್ಷನ್ ಎಂದು ಹೇಳಿದ್ದರು. ಅಲ್ಲದೆ ನನಗೇನು ಸಿನಿಮಾದಲ್ಲಿ ನಟಿಸುವ ಆಸೆ ಇರಲಿಲ್ಲ, ಅವರೇ ಒತ್ತಾಯ ಮಾಡಿದರು ಹಾಗಾಗಿ ಒಪ್ಪಿಕೊಳ್ಳಬೇಕಾಯಿತು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇದನ್ನು ಓದಿ.. Kannada News: ಮದುವೆಯಾಗುತ್ತಾರೆ ಎನ್ನಲಾಗುತ್ತಿರುವ ಹರಿಪ್ರಿಯಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

ಈ ವಿಷಯದ ಕುರಿತಾಗಿ ಇದೀಗ ನಟ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ. “ಯಾರು ಎಲ್ಲಿಂದ ಬಂದರು ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿರಿಸಿಕೊಳ್ಳಬೇಕು. ಒಂದು ವೇಳೆ ಎಲ್ಲಿಂದ ಬಂದೆ ಒಂದು ಹೇಳಿಕೊಳ್ಳಲು ಅವರಿಗೆ ಸಂಕೋಚ ಆಗಬಹುದೇನೋ, ಅಥವಾ ಹೇಳಿಕೊಂಡರೆ ತಾವು ಚಿಕ್ಕವರಾಗಿ ಬಿಡುತ್ತೇವೆ ಎನಿಸಬಹುದು. ಅದು ಅವರವರ ವೈಯಕ್ತಿಕ ಅಭಿಪ್ರಾಯ. ತಾವು ಬಂದ ದಾರಿಯ ಬಗ್ಗೆ ಹೇಳಿದರೆ ಎಲ್ಲಿ ಚಿಕ್ಕವರಾಗುತ್ತೇವೋ ಎನ್ನುವ ಭಯವಿರಬಹುದು. ಈಗ ಕನ್ನಡ ಚಿತ್ರರಂಗ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಇನ್ನು ಮೇಲೆ ಅವರು ನಾನು ಸಹ ಕನ್ನಡ ಚಿತ್ರದಿಂದಲೇ ಪರಿಚಯವಾದವಳು ಎಂದು ಹೇಳಿಕೊಳ್ಳಬಹುದು” ಎಂದು ಅವರು ಹೇಳಿದ್ದಾರೆ. ಇದನ್ನು ಓದಿ.. Kannada News: ಕೊನೆ ಕ್ಷಣದಲ್ಲಿ ಕರೆದರೂ ಕೂಡ ಅದಿತಿ ಪ್ರಭುದೇವ ಮದುವೆಗೆ ಹೋದ ದರ್ಶನ್, ವಿಜಯಲಕ್ಷ್ಮಿ ಕೊಟ್ಟ ಉಡುಗೊರೆ ಏನು ಗೊತ್ತೇ??