Kannada News: ಪ್ರೇಮ್ ಮಗಳು ನಟಿ ಎಂದ ತಕ್ಷಣ, ಸಂಭಾವನೆ ಹೆಚ್ಚಿಸಿಕೊಂಡ ಡಾಲಿ ಧನಂಜಯ್. ಎಷ್ಟು ಬೇಕಂತೆ ಗೊತ್ತೇ?? ಯಪ್ಪಾ ಇಷ್ಟೊಂದಾ??
Kannada News: ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಕಲಾವಿದರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದು ಮೊದಲಿನಿಂದಲೂ ನಡೆದು ಬಂದ ಸಂಗತಿ. ಕೇವಲ ನಟ ನಟಿಯರಾಗಿ ಗುರುತಿಸಿಕೊಂಡವರು ಮಾತ್ರವಲ್ಲದೆ ತಂತ್ರಜ್ಞರಾಗಿ, ನಿರ್ಮಾಪಕ, ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಕೂಡ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ವಿಲನ್, ಪುಟ್ಟ ಪಾತ್ರಗಳಲ್ಲಿ ಹೆಸರು ಮಾಡಿದ ಎಷ್ಟೋ ಜನರ ಮಕ್ಕಳು ನಾಯಕ, ನಾಯಕಿಯಾಗಿ ಸದ್ದು ಮಾಡಿದ್ದಾರೆ. ತಂತ್ರಜ್ಞರಾಗಿ ಒಳ್ಳೆಯ ಹೆಸರು ಗಳಿಸಿದವರು ಅಭಿನಯದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಮಿಂಚಿದವರ ಮಕ್ಕಳ ಪೈಕಿ ಕೆಲವರು ಮೊದಲ ಅಥವಾ ಆರಂಭಿಕ ಸಿನಿಮಾಗಳಲ್ಲೇ ಸೋತರೆ ಕೆಲವರು ತಮ್ಮ ಪ್ರತಿಭೆಯ ಮೂಲಕ ಇಂದಿಗೂ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರರಂಗಕ್ಕೆ ಮತ್ತೊಬ್ಬ ನಟನ ಪುತ್ರಿಯ ಪ್ರವೇಶವಾಗುತ್ತಿದೆ.
ನೆನಪಿರಲಿ ಪ್ರೇಮ್ (Nenapirali Prem) ಅವರ ಪುತ್ರಿ ಅಮೃತಾ ಪ್ರೇಮ್ (Amrutha Prem) ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವುದು ಅಧಿಕೃತವಾಗಿ ಖಚಿತವಾಗಿದೆ. ನಟ ಪ್ರೇಮ್ ಒಂದು ಕಾಲದಲ್ಲಿ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿದ ನಟ. ಇದೀಗ ಅವರ ಪುತ್ರಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಧನಂಜಯ್ (Daali Dhananjay) ನಿರ್ಮಾಣದ ಚಿತ್ರವೊಂದಕ್ಕೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರರಂಗದಲ್ಲಿ ಗುರುತಿಸಿಕೊಂಡ ಅವರು ಟಗರು ಚಿತ್ರದ ಖ್ಯಾತಿಯ ನಂತರ ಅವರು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಡಾಲಿ ಪಿಚ್ಚರ್ಸ್ (Daali Pictures) ಹೆಸರಿನಲ್ಲಿ ಶುರು ಮಾಡಿದರು. ತಮ್ಮದೇ ನಟನೆಯ ಬಡವ ರಾಸ್ಕಲ್ (Badava Rascal) ಚಿತ್ರವನ್ನು ಇದೇ ನಿರ್ಮಾಣ ಸಂಸ್ಥೆಯ ಮೂಲಕ ತಯಾರಿಸಿ ಗೆದ್ದರು. ಆನಂತರ ಇತ್ತೀಚಿಗೆ ತೆರೆಕಂಡ ಹೆಡ್ ಬುಷ್ (Head Bush) ಚಿತ್ರವು ಸಹ ಡಾಲಿ ಪಿಚ್ಚರ್ಸ್ ಅಡಿಯಲ್ಲೇ ಬಂದ ಚಿತ್ರವಾಗಿದೆ. ಇದೀಗ ಡಾಲಿ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಪ್ರೇಮ್ ಅವರ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಡಾಲಿ ಧನಂಜಯ್ ಅವರ ನಿರ್ಮಾಣ ಸಂಸ್ಥೆಯಾದ ಡಾಲಿ ಪಿಚ್ಚರ್ಸ್ ಮೂಲಕ ಟಗರು ಪಲ್ಯ ಎಂಬ ಚಿತ್ರದಲ್ಲಿ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಇದನ್ನು ಓದಿ..Kannada News: ರಶ್ಮಿಕಾ ರವರನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಶೆಟ್ರು ಗ್ಯಾಂಗ್. ಮತ್ತೊಮ್ಮೆ ಟಾಂಗ್ ಕೊಟ್ಟ ಪ್ರೋಮೊದ್ ಶೆಟ್ಟಿ. ಹೇಳಿದ್ದೇನು ಗೊತ್ತೇ?

ಈ ಸುದ್ದಿಯನ್ನು ಘೋಷಿಸುವುದಕ್ಕಾಗಿ ಪ್ರೇಮ್ ಪುತ್ರಿ ಅಮೃತ ಅವರಿಗೆ ಫೋಟೋಶೂಟ್ ಕೂಡ ಮಾಡಲಾಗಿದ್ದು, ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅವರ ಫೋಟೋಗಳನ್ನು ಡಾಲಿ ಧನಂಜಯ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು ನೆಟ್ಟಿಗರ ಮನ ಗೆದ್ದಿವೆ. “ನಟ ಪ್ರೇಮ್ ಅವರ ಪುತ್ರಿಯನ್ನು ಚಿತ್ರರಂಗಕ್ಕೆ ಅಧಿಕೃತವಾಗಿ ಪರಿಚಯಿಸುತ್ತಿದ್ದೇವೆ. ಅವರ ಮೇಲೆ ನಿಮ್ಮ ಆಶೀರ್ವಾದವಿರಲಿ” ಎಂಬ ರೀತಿಯ ಪೋಸ್ಟ್ ಒಂದನ್ನು ಡಾಲಿ ಹಂಚಿಕೊಂಡಿದ್ದಾರೆ. ಇನ್ನು ಡಾಲಿ ಧನಂಜಯ ಅವರು ಈ ಚಿತ್ರಕ್ಕಾಗಿ ಪಡೆದ ಸಂಭಾವನೆಯ ಕುರಿತು ಚರ್ಚೆಯಾಗುತ್ತಿದೆ. ಧನಂಜಯ್ 60 ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿಗೆ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅದರಂತೆ ಪ್ರೇಮ್ ಅವರ ಪುತ್ರಿಯ ಮೊದಲ ಚಿತ್ರಕ್ಕಾಗಿ ಅವರು ಬರೋಬ್ಬರಿ 1.2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. IPL 2023: ಈ ಬಾರಿ ಐಪಿಎಲ್ ಗೆ ಮತ್ತಷ್ಟು ರಂಗು: ಈ ಬಾರಿ ಐಪಿಎಲ್ ಆಡಲಿರುವ ಬೆಂಕಿ ಬ್ಯಾಟ್ಸಮನ್ ಯಾರು ಗೊತ್ತೇ?